ಮಂಗಳೂರು: ಕೂಳೂರು-ಕಾವೂರು ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿದ ಮಹತ್ವಾಕಾಂಕ್ಷೆಯ ಯೋಜನೆ ಇನ್ಲ್ಯಾಂಡ್ನ ಸನ್ಲೈಟ್-ಮೂನ್ಲೈಟ್ ವಸತಿ ಸಮುಚ್ಚಯ ಇಂದು ಉದ್ಘಾಟನೆಗೊಂಡಿದೆ. ಇನ್ಲ್ಯಾಂಡ್ ಸನ್ಲೈಟ್-ಮೂನ್ಲೈಟ್ ಯೋಜನೆಯನ್ನು ಶಾಸಕ ಡಾ.ವೈ.ಭರತ್ ಶೆಟ್ಟಿ ಅವರು ಉದ್ಘಾಟಿಸಿದ್ದಾರೆ. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ಕುಮಾರ್ ರೈ ಮಾಲಾಡಿ, ಮಹಾನಗರ ಪಾಲಿಕೆ ಸದಸ್ಯ ಅನಿಲ್ ಕುಮಾರ್, ಕ್ರೆಡೈ ಮಂಗಳೂರು ಅಧ್ಯಕ್ಷ ಪುಷ್ಪರಾಜ ಜೈನ್ ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಒಂದೇ ಆವರಣದಲ್ಲಿ ಎರಡು ಸಮುಚ್ಚಯಗಳನ್ನು ನಿರ್ಮಾಣ ಮಾಡಲಾಗಿದೆ. ಒಂದರಲ್ಲಿ 60 ಅಪಾರ್ಟ್ಮೆಂಟ್ ಹಾಗು ಇನ್ನೊಂದರಲ್ಲಿ 15 ಅಪಾರ್ಟ್ಮೆಂಟ್ಗಳಿವೆ. ಪ್ರಸಿದ್ಧ ವಾಸ್ತುಶಿಲ್ಪಿಗಳು ವಸತಿ ಸಮುಚ್ಛಯವನ್ನು ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ವಿನ್ಯಾಸಗೊಳಿಸಿಲಾಗಿದೆ. ಎಲ್ಲ ವರ್ಗದ ಜನತೆಗೆ ಕೈಗೆಟಕುವ ದರದಲ್ಲಿ ಮನೆ ಹೊಂದುವ ಕನಸನ್ನು ಈಡೇರಿಸಿಕೊಳ್ಳಲು ಸುವರ್ಣ ಅವಕಾಶ ಕಲ್ಪಿಸಲಾಗಿದೆ.ಇನ್ಲ್ಯಾಂಡ್ ಸನ್ಲೈಟ್-ಮೂನ್ಲೈಟ್ ವಸತಿ ಸಮುಚ್ಚಯ ಕೂಳೂರು-ಕಾವೂರು ರಸ್ತೆಯಲ್ಲಿ ತಲೆಯೆತ್ತಿ ನಿಂತಿದೆ. ಈ ಪ್ರದೇಶ ವೇಗವಾಗಿ ಬೆಳೆಯುತ್ತಿದ್ದು, ಮುಂಬರುವ ದಿನಗಳಲ್ಲಿ ವಸತಿಗೆ ಅತಿ ಪ್ರಾಶಸ್ತ್ಯವಾಗಲಿದೆ. ಈ ರಸ್ತೆಯು ರಾಷ್ಟ್ರೀಯ ಹೆದ್ದಾರಿ ಹಾಗು ನಗರದ ಇತರ ಭಾಗಗಳಿಗೆ ಸುಲಭ ಸಂಪರ್ಕ ಕಲ್ಪಿಸುತ್ತದೆ. ಕೇಂದ್ರ ಸರ್ಕಾರದ ಸ್ಮಾರ್ಟ್ಸಿಟಿ ಯೋಜನೆಯಲ್ಲಿ ಅಭಿವೃದ್ಧಿಯಾಗಲು ಗುರುತಿಸಿಕೊಂಡಿದೆ. ಈ ಪ್ರದೇಶ ವೇಗವಾಗಿ ಬೆಳೆಯುತ್ತಿದ್ದು ಪರಿಸರದಲ್ಲಿ ಹಲವಾರು ಕಂಪೆನಿಗಳು ನೆಲೆ ನಿಂತಿವೆ. ಪೆಟ್ರೋಕೆಮಿಕಲ್, ಲಾಜಿಸ್ಟಿಕ್ಸ್, ಶಿಪ್ಪಿಂಗ್ ಮತ್ತು ಏರ್ಲೈನ್ಸ್ ವಲಯಗಳು ಈ ಭಾಗದಲ್ಲಿವೆ. ಎಂಆರ್ಪಿಎಲ್, ಎನ್ಎಂಪಿಟಿ, ಎಂಎಫ್ಎಲ್ ಮತ್ತು ವಿಮಾನ ನಿಲ್ದಾಣದ ಉದ್ಯೋಗಿಗಳಿಗೆ ಮನೆಗಳ ಖರೀದಿಗೆ ಇದೊಂದು ಸುಸಂದರ್ಭವಾಗಿದೆ.
ಇನ್ಲ್ಯಾಂಡ್ ಸನ್ಲೈಟ್-ಮೂನ್ಲೈಟ್ ವಸತಿ ಸಮುಚ್ಚಯದಲ್ಲಿ 3 ಬಿಎಚ್ಕೆ 1415 ಮತ್ತು 1470 ಚದರ ಅಡಿ, 2 ಬಿಎಚ್ಕೆ 1025 ಮತ್ತು 1095 ಚದರ ಅಡಿಗಳನ್ನು ಹೊಂದಿವೆ. ಸಂಸ್ಥೆ ಮನೆಗಳನ್ನು ಖರೀದಿಸುವವರಿಗೆ ಕೈಗೆಟಕುವ ದರವನ್ನು ನಿಗದಿಪಡಿಸಿದೆ.
ಯೋಜನೆಯಲ್ಲಿ ಅತ್ಯಾಧುನಿಕ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿದೆ. ಜಿಮ್ನೇಶಿಯಂ, ವಾಕಿಂಗ್ ಟ್ರ್ಯಾಕ್, ವಿಶಾಲ ಕಾರು ಪಾರ್ಕಿಂಗ್, ಮಕ್ಕಳಿಗೆ ಆಟವಾಡಲು ಸ್ಥಳಾವಕಾಶ, ಇಂಟರ್ಕಾಮ್, 24 ಗಂಟೆ ಭದ್ರತಾ ವ್ಯವಸ್ಥೆ, ನಿರಂತರ ವಿದ್ಯುತ್ ಸೌಲಭ್ಯಗಳನ್ನು ಹೊಂದಿದೆ.
ಸನ್ಲೈಟ್-ಮೂನ್ಲೈಟ್ ಹೊಂದಿರುವ ಪ್ರದೇಶ ಎಲ್ಲ ಮೂಲ ಸೌಕರ್ಯವನ್ನು ಹೊಂದಿದೆ. ಕೂಳೂರು-ಕಾವೂರು ರಸ್ತೆಯಿಂದ ಉತ್ತಮ ಶಾಲೆ, ಕಾಲೇಜುಗಳಿಗೆ, ಶಾಪಿಂಗ್ ಸೆಂಟರ್, ಧಾರ್ಮಿಕ ಕೇಂದ್ರಗಳಿಗೆ ಹೋಗಿ ಬರಲು ಪೂರಕವಾದ ವ್ಯವಸ್ಥೆಗಳಿವೆ.
ಇನ್ಲ್ಯಾಂಡ್ ಸಂಸ್ಥೆ ಕಳೆದ 35 ವರ್ಷಗಳಿಂದ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಗ್ರಾಹಕರಿಗೆ ನಿಗದಿತ ಅವಧಿಯಲ್ಲಿ ಗುಣಮಟ್ಟದ ಅತ್ಯುತ್ತಮ ಮನೆಗಳನ್ನು ಒದಗಿಸಿ ಅವರ ಮೆಚ್ಚುಗೆ ಗಳಿಸಿದೆ. ಸನ್ಲೈಟ್-ಮೂನ್ಲೈಟ್ ವಸತಿ ಸಮುಚ್ಛಯ ನಗರದ ಉತ್ತರ ಭಾಗದ ಕಂಪೆನಿಗಳಲ್ಲಿ ಕೆಲಸ ಮಾಡುತ್ತಾ ಸ್ವಂತ ಸೂರು ಹೊಂದುವ ಕನಸು ಕಾಣುತ್ತಿರುವವರನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣ ಮಾಡಲಾಗಿದೆ. ಜನದಟ್ಟಣೆಯಿಂದ ದೂರವಾಗಿ ಪ್ರಶಾಂತ ಪರಿಸರದಲ್ಲಿ ಮನೆ ಒದಗಿಸುವುದು ನಮ್ಮ ಧ್ಯೇಯವಾಗಿದೆ. ಗ್ರಾಹಕರಿಂದ ಈಗಾಗಲೇ ಉತ್ತಮ ಸ್ಪಂದನೆ ದೊರಕಿದೆ. ಯೋಜನೆಯ ನಿರ್ಮಾಣದ ಹಂತದಿಂದಲೇ ಅಪಾರ್ಟ್ಮೆಂಟ್ಗಳನ್ನು ಖರೀದಿಸಿದ್ದಾರೆ. ಇನ್ನು ಕೆಲವೇ ಅಪಾರ್ಟ್ಮೆಂಟ್ಗಳು ಬಾಕಿ ಉಳಿದಿವೆ ಎಂದು ಇನ್ಲ್ಯಾಂಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಿರಾಜ್ ಅಹಮ್ಮದ್ ತಿಳಿಸಿದ್ದಾರೆ.
ವಿಳಾಸ: ಇನ್ಲ್ಯಾಂಡ್ ಸನ್ಲೈಟ್-ಮೂನ್ಲೈಟ್ ಕೂಳೂರು-ಕಾವೂರು ರಸ್ತೆ, (ಎಂ.ವಿ.ಶೆಟ್ಟಿ ಕಾಲೇಜು ಹತ್ತಿರ) ಮಂಗಳೂರು.
ದೂರವಾಣಿ: 9972089099, 9972014055, 9880138015
ವೆಬ್ಸೈಟ್: www.inlandbuilders.net
ಇಮೇಲ್: mktg.mlr@inlandbuilders.net