Recent Posts

Monday, January 20, 2025
ಸುದ್ದಿ

ಬಂದಾರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ “ಕಾನೂನು ಸೇವಾ ಸಪ್ತಾಹ” – ಕಹಳೆ ನ್ಯೂಸ್

ಬಂದಾರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ,ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದ.ಕ.ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ ಬೆಳ್ತಂಗಡಿ, ವಕೀಲರ ಸಂಘ (ರಿ.) ಬೆಳ್ತಂಗಡಿ,
ಗ್ರಾಮ ಪಂಚಾಯತ್ ಬಂದಾರು ಇವುಗಳ ಜಂಟಿ ಆಶ್ರಯದಲ್ಲಿ, ಸ್ವತಂತ್ರ ಭಾರತದ ಅಮೃತ ಮಹೋತ್ಸವದ ಅಂಗವಾಗಿ
ಭಾರತ ರಾಷ್ಟ್ರಾದ್ಯಂತ ಜಾಗೃತಿ ಮತ್ತು ಪ್ರಚಾರ ಕಾರ್ಯಕ್ರಮ, ಕಾನೂನು ಸೇವಾ ಸಪ್ತಾಹ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಕೀಲರಾದ ಧನಂಜಯ ಇವರು ಕಾನೂನು ಮಾಹಿತಿಗಳನ್ನು ತಿಳಿಸಿದರು.
ಕರ‍್ಯಕ್ರಮ ಅಧ್ಯಕ್ಷರಾಗಿ ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ. ಕೆ.ಗೌಡ. ಹಾಗೂ ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ ಉಪಾಧ್ಯಕ್ಷರಾದ ಗಂಗಾಧರ , ಗ್ರಾ.ಪಂ ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ,ದಿನೇಶ್ ಗೌಡ ಖಂಡಿಗ,ಚೇತನ್ ಗೌಡ,ಶ್ರೀಮತಿ ಪುಷ್ಪಾ,ಶ್ರೀಮತಿ ಭಾರತಿ,ಶ್ರೀಮತಿ ವಿಮಲ ಉಪಸ್ಥಿತರಿದ್ದರು.ಗ್ರಾಮಸ್ಥರು ಭಾಗವಹಿಸಿ ಮಾಹಿತಿ ಪಡೆದು ಕಾರ್ಯಕ್ರಮ ಯಶಸ್ವಿಗೂಳಿಸಿದರು..

ಜಾಹೀರಾತು

ಜಾಹೀರಾತು
ಜಾಹೀರಾತು