Recent Posts

Monday, January 20, 2025
ಪುತ್ತೂರು

ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಉಪನ್ಯಾಸ ಕಾರ್ಯಕ್ರಮ- ಕಹಳೆ ನ್ಯೂಸ್

ಪುತ್ತೂರು : ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ, ಉಪನ್ಯಾಸಕ, ವಾಗ್ಮಿ ಆದರ್ಶ ಗೋಖಲೆಯವರು ನಮ್ಮ ನೆರೆಯ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಖಂಡನೀಯ. ಹಿಂದೂ ದೇವಸ್ಥಾನಗಳನ್ನು ಧ್ವಂಸಮಾಡಿ, ಹಿಂದುಗಳನ್ನು ಹತ್ಯೆ ಮಾಡುತ್ತಿರುವ ಉಗ್ರರ ವಿರುದ್ಧ ನಾವು ಧ್ವನಿಯೆತ್ತಲೇಬೇಕು. ನಮ್ಮವರಿಗೆ ಅನ್ಯಾಯವಾದಾಗ ಧ್ವನಿ ಎತ್ತಲು ಭಯಬೇಡ. ನಮ್ಮ ದೇಶ, ನಮ್ಮ ಸುತ್ತಮುತ್ತ, ನಮ್ಮ ಸಮಾಜದಲ್ಲಿ ಆಗುತ್ತಿರುವ ದೌರ್ಜನ್ಯಗಳನ್ನು ಪ್ರತಿಭಟಿಸಲು ಭಯಪಟ್ಟರೆ ನಾವು ಕಲಿತ ವಿದ್ಯೆ ನಿರರ್ಥಕ ಎಂದು ಹೇಳಿದರು.

ಕಾಶ್ಮೀರದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಮಾತನಾಡಿದ ಅವರು ಕಾಶ್ಮೀರವು ನಮ್ಮ ಪೂರ್ವಿಕ ಕಶ್ಯಪ ಋಷಿಯ ಭೂಮಿ. ಆದ್ದರಿಂದ ನಮಗೆ ಆ ಭೂಮಿಯ ಮೇಲೆ ಹಕ್ಕಿದೆ. ನಮ್ಮ ನೆಲದಲ್ಲಿ ನಮ್ಮವರಿಗೆ ಅನ್ಯಾಯವಾದರೆ ಅದನ್ನು ಪ್ರತಿಭಟಿಸಲೇಬೇಕಾಗಿದೆ. ಕಾಶ್ಮೀರವು ಅಲಂಕಾರ ಶಾಸ್ತ್ರ, ವ್ಯಾಕರಣ ವೇದಶಾಸ್ತ್ರಗಳನ್ನು ಜಗತ್ತಿಗೆ ಸಾರಿದ ಹಾಗೂ ಶಂಕರಾಚಾರ್ಯರು ಶಾರದಾ ಮಾತೆಯನ್ನು ಪೂಜಿಸಿದ ಪುಣ್ಯ ನೆಲ. ಅಲ್ಲಿಯ ಮೂಲನಿವಾಸಿಗಳಾದ ಪಂಡಿತರು ಇಂದು ಅನಾಥರಾಗಿದ್ದಾರೆ. ದೇಶಕ್ಕಾಗಿ ತಮ್ಮನ್ನು ಮುಡಿಪಾಗಿಟ್ಟ ಜನ ಇಂದು ಹೆದರಿಕೊಂಡು ಬದುಕುವ ಪರಿಸ್ಥಿತಿ ಎದುರಾಗಿದೆ. ಕಾಶ್ಮೀರದ ಒಳಿತಿಗಾಗಿ ಶ್ರಮಿಸುತ್ತಿರುವ ಸೈನಿಕರು ಹೀನಾಯ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ ಇಂತಹ ಪರಿಸ್ಥಿತಿಗಳನ್ನು ನೋಡಿ ಸುಮ್ಮನಿರದೆ ನಾವು ಧೈರ್ಯದಿಂದ ಧ್ವನಿ ಎತ್ತಲು ಮುಂದಾಗಬೇಕು ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸುಖದೇವ್, ರಾಜಗುರು, ವೀರಸಾವರ್ಕರ್‍ರಂತಹವರು ತಮ್ಮ ಹರೆಯವನ್ನು ದೇಶಕ್ಕೋಸ್ಕರ ಮುಡಿಪಾಗಿಟ್ಟವರು. ಅವರ ಕೆಚ್ಚೆದೆಯ ಹೋರಾಟ, ತ್ಯಾಗ, ಬಲಿದಾನಗಳಿಂದ ನಾವಿಂದು ಸ್ವತಂತ್ರರಾಗಿದ್ದೇವೆ. ಇಂತಹ ವೀರಕಲಿಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ನಾವು ನಮ್ಮ ಸುತ್ತಮುತ್ತ ಹಾಗೂ ನಮ್ಮವರಿಗಾಗುತ್ತಿರುವ ದೌರ್ಜನ್ಯವನ್ನು ಪ್ರತಿಭಟಿಸಬೇಕು. ಆಗ ಮಾತ್ರ ನಾವು ಬದುಕಿದ್ದು ಸಾರ್ಥಕ ಎಂದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಅನ್ಯಾಯವನ್ನು ಪ್ರತಿಭಟಿಸಲು ನಾವೆಲ್ಲರು ಸನ್ನದ್ಧರಾಗಬೇಕು. ನಮ್ಮ ಧರ್ಮ ಸಂಸ್ಕøತಿಯನ್ನು ಉಳಿಸುವುದು ನಮ್ಮ ಕರ್ತವ್ಯ. ಇದು ವಿದ್ಯಾರ್ಥಿದೆಸೆಯಿಂದಲೇ ಪ್ರಾರಂಭವಾಗಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿದ್ಯಾರ್ಥಿಗಳಲ್ಲಿ ನಮ್ಮ ಸಮಾಜಕ್ಕಾಗಿ ದೇಶಕ್ಕಾಗಿ ನಮ್ಮವರಿಗಾಗಿ ಶ್ರಮಿಸುವಂತಹ ಸದ್ಗುಣಗಳು ಬೆಳೆಯಬೇಕು ಎಂದರು. ಕಾರ್ಯಕ್ರಮದಲ್ಲಿ ವೇದಮೂರ್ತಿ ಶ್ರೀಕೃಷ್ಣ ಉಪಾಧ್ಯಯ, ಕಾಲೇಜಿನ ಪ್ರಾಂಶುಪಾಲ ಶಂಕರನಾರಾಯಣ ಭಟ್ ಅಂಬಿಕಾ ವಿದ್ಯಾಲಯದ (ಸಿಬಿಎಸ್‍ಇ) ಪ್ರಾಂಶುಪಾಲೆ ಮಾಲತಿ ಡಿ ಹಾಗೂ ಉಪ ಪ್ರಾಂಶುಪಾಲೆ  ಸುಜನಿ ಬೋರ್ಕರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಶಾಶ್ವಿತ ಡಿ.ಎಂ. ನಿರೂಪಿಸಿ, ವಂದನಾರ್ಪಣೆಗೈದರು.