Wednesday, January 22, 2025
ಬಂಟ್ವಾಳ

ಕಲ್ಲಡ್ಕ ರೈತರ ಸೇವಾ ಸಹಕಾರ ಸಂಘ ನಿಯಮಿತಕ್ಕೆ 2020 21 ನೇ ಸಾಲಿನಲ್ಲಿ 1,06,28,051.98 ರೂ. ನಿವ್ವಳ ಲಾಭ – ಕಹಳೆ ನ್ಯೂಸ್

ಬಂಟ್ವಾಳ: ಕಲ್ಲಡ್ಕ ರೈತರ ಸೇವಾ ಸಹಕಾರ ಸಂಘ ನಿ.ವು 2020 21 ನೇ ಸಾಲಿನಲ್ಲಿ 321.34 ಕೋ.ರೂ. ವ್ಯವಹಾರ ನಡೆಸಿ1,06,28,051.98 ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ ತಿಳಿಸಿದ್ದಾರೆ. ಮಂಗಳವಾರ ಸಂಘದ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸಂಘವು 390 ಕೋ.ರೂ. ಪಾಲುಬಂಡವಾಳ,49.08 ಕೋ.ರೂ. ಠೇವಣಿಯನ್ನು ಹೊಂದಿರುತ್ತದೆ, ಪ್ರಸ್ತುತ ಆರ್ಥಿಕ ವರ್ಷದ ಅಂತ್ಯಕ್ಕೆ ಸದಸ್ಯರಿಂದ ಕೃಷಿ ಸಾಲ 29,02 ಕೋ.ರೂ, ಹಾಗೂ ಕೃಷಿಯೇತರ ಸಾಲ 14.04 ಕೋ.ರೂ.ಸೇರಿ ಒಟ್ಟು ರೂ 43.06 ಕೋ.ರೂ. ಹೊರಬಾಕಿ ಇದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಲೆಕ್ಕಪರಿಶೋಧನಾ ವರದಿಯಂತೆ “ಎ” ಗ್ರೇಡ್ ವರ್ಗೀಕರಣಗೊಂಡಿದೆ. ಗೋಳ್ತಮಜಲು, ಬಾಳ್ತಿಲ, ಅಮ್ಟೂರು, ವೀರಕಂಭ, ಬೋಳಂತೂರು ಈ ಐದು ಗ್ರಾಮಗಳ ಕಾರ್ಯ ವ್ಯಾಪ್ತಿಗೊಳಪಟ್ಟ ಸಂಘವು ಕಲ್ಲಡ್ಕ, ವೀರಕಂಭ ಮತ್ತು ಬೋಳಂತೂರಿನಲ್ಲಿ ಶಾಖೆಗಳನ್ನು ಹೊಂದಿ ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಿದೆ ಎಂದರು. ಕಲ್ಲಡ್ಕ, ವೀರಕಂಭ ಹಾಗೂ ಅಮ್ಟೂರಿನಲ್ಲಿ ಪಡಿತರ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಗುತ್ತಿದ್ದು, ಅಡಿಕೆ ಬೆಳೆಗಾರರ ಅನುಕೂಲಕ್ಕಾಗಿ ವಾರದಲ್ಲಿ ರಜಾ ದಿನಗಳನ್ನು ಹೊರತುಪಡಿಸಿ ಇತರ ದಿನಗಳಲ್ಲಿ ಕ್ಯಾಂಪ್ಕೋ ಸಹಯೋಗದೊಂದಿಗೆ ಅಡಿಕೆ ಖರೀದಿ ವ್ಯವಹಾರ ನಡೆಸಲಾಗುತ್ತಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಘದ ಸದಸ್ಯರ ಮಕ್ಕಳು ಎಸ್.ಎಸ್.ಎಲ್.ಸಿ., ಕನ್ನಡ ಹಾಗೂ ಆಂಗ್ಲ ಮಾಧ್ಯಮ ಮತ್ತು ದ್ವಿತೀಯ ಪಿಯುಸಿಯಲ್ಲಿ ಅಂತಿಮ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದವ ಪೈಕಿ ಪ್ರಥಮ,ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಇದೀಗ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಶೇ 90% ಕ್ಕಿಂತ ಹೆಚ್ಚು ಅಂಕ ಗಳಿಸಿದ ಸದಸ್ಯರ ಎಲ್ಲಾ ಮಕ್ಕಳನ್ನು ಪ್ರೋತ್ಸಾಹಿಸುವುದೆಂದು ನಿರ್ಧರಿಸಲಾಗಿದೆ ಎಂದರು.

ಮುಂದಿನ ಯೋಜನೆಗಳು:-
25 ಸಾ.ರೂ.ಒಳಗೆ ಬೆಳೆ ಸಾಲ ಪಡೆದ ಸದಸ್ಯರು ಸಾಲ ಮರುಪಾವತಿ ಅವಧಿಯೊಳಗೆ ಮೃತ ಪಟ್ಟಲ್ಲಿ ಅವರ ಸಾಲವನ್ನು ವಾಯಿದೆಯೊಳಗೆ ಮರುಪಾವತಿಸುವ ಅವರ ವಾರೀಸುದಾರರಿಗೆ ಭಾಗ್ಯನಿಧಿಯಾಗಿ ರೂ 15 ಸಾ.ರೂ. ಹಾಗೂ 25 ಸಾ.ಕ್ಕಿಂತ ಮೇಲಿನ ಸಾಲಗಾರರಿಗೆ ಭಾಗ್ಯನಿಧಿಯಾಗಿ 20 ಸಾ.ರೂ.ವಿತರಿಸಲು ಸಂಘ ತೀರ್ಮಾನಿಸಿದೆ ಎಂದರು.

ಬೆಳೆಸಾಲ ಪಡೆದ ಸದಸ್ಯರು ವಿಶೇಷ ಕಾಯಿಲೆಗೆ ಒಳಗಾದ ಸಾಲಗಾರ ಸದಸ್ಯರಿಗೆ ಹೃದಯದ ಶಸ್ತ್ರ ಚಿಕಿತ್ಸೆಗೆ 50 ಸಾ.ರೂ. ಸ್ಟಂಟ್ ಅಳವಡಿಕೆಗೆ 30 ಸಾ.ರೂ. ಡಯಾಲಿಸಿಸ್ ಗೊಳಪಡುವ ಸದಸ್ಯರಿಗೆ 20 ಸಾ.ರೂ.ವಿತರಿಸಲು ಸಂಘದ ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದರು. ಹಮ್ಮಿಕೊಳ್ಳಲಾಗಿದೆ.
ವಿಶೇಷ ಕಾಯಿಲೆಗೊಳಗಾದ ಬೆಳೆ ಸಾಲಗಾರ ಸದಸ್ಯರಿಗೆ ಶಸ್ತ್ರಚಿಕಿತ್ಸೆಗೆ ಆಸ್ಪತ್ರೆ ವೆಚ್ಚದ ಬಿಲ್ಲಿನ ಶೇ. 25 ಅಥವಾ ಗರಿಷ್ಠ ರೂ.50000/- ನೀಡುವ ಹಾಗೂ
ಬೆಳೆಸಾಲ ಸಾಲಗಾರ ಸದಸ್ಯರ ಅವಲಂಬಿತರಿಗೂ ವಿಶೇಷ ಕಾಯಿಲೆಗೆ ಒಳಪಟ್ಟು ಆಸ್ಪತ್ರೆ ವೆಚ್ಚದ ಬಿಲ್ಲಿನ ಶೇ.10 ಅಥವಾ ಗರಿಷ್ಠ 10 ಸಾ.ರೂ ಪರಿಹಾರಧನ ನೀಡಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

ಕಲ್ಲಡ್ಕದಲ್ಲಿ ಪ್ರಸ್ತುತ ಇರುವಂತ ಸಂಘದ ಕಟ್ಟಡವು ಹಳೆಯಾದಾಗಿದ್ದು, ರಸ್ತೆ ಅಗಲೀಕರಣದಿಂದಾಗಿ ಕಟ್ಟಡಕ್ಕೆ ಹಾನಿ ಉಂಟಾಗುವ ಸಂಭವ ಇರುವುದರಿಂದ ಸುಸಜ್ಜಿತವಾದ ನೂತನ ಅಂತಸ್ತಿನ ಕಟ್ಟಡ ನಿರ್ಮಿಸುವ ಬಗ್ಗೆಯು ಯೋಜನೆ ಹಾಕಲಾಗಿದೆಯಲ್ಲದೆ ಬೋಳಂತೂರಿನಲ್ಲಿ ಸಂಘದ ಹೊಸ ಕಟ್ಟಡ ನಿರ್ಮಾಣ ಅಮ್ಟೂರಿನಲ್ಲಿ ಹೊಸ ಶಾಖೆಯನ್ನು ತೆರೆಯುವ ಯೋಚನೆಯು ಇದೆ ಎಂದು ಅಧ್ಯಕ್ಷ ಪದ್ಮನಾಭ ಕೊಟ್ಟಾರಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಬಿ.ಸುಧಾಕರ ರೈ,ನಿರ್ದೇಶಕರಾದ ಗಿರಿಯಪ್ಪ ಗೌಡ,ವೆಂಕಟ್ರಾಯ ಪ್ರಭು,ಚಂದ್ರಶೇಖರ ಟೈಲರ್,ನೋಣಯ್ಯ ಎಂ.ಆರ್.,ಮುಖ್ಯಕಾರ್ಯ ನಿರ್ವಹಣಾಧಿಕಾರಿ ಸುರೇಶ್ ಕೆ.ಉಪಸ್ಥಿತರಿದ್ದರು.

ಸಂಘದ ಮಹಾಸಭೆ ಮತ್ತು ಒಡಿಯೂರು ಶ್ರೀ ಷಷ್ಠ್ಯಬ್ಧ ಸಮಾರೋಪ
ಕಲ್ಲಡ್ಕ ರೈ.ಸೇ.ಸ.ಸಂಘದ ವಾರ್ಷಿಕ ಮಹಾಸಭೆ ಅ.31 ರಂದು ಬೆಳಿಗ್ಗೆ ಕಲ್ಲಡ್ಕಶ್ರೀ ರಾಮ ಮಂದಿರದ ಮಾಧವ ಸಭಾಭವನದಲ್ಲಿ ನಡೆಯಲಿದೆ.ಬಳಿಕ ಒಡಿಯೂರು ಶ್ರೀಗಳ ಷಷ್ಠ್ಯಬ್ಧ ಸಂಭ್ರಮದ ಪ್ರಯುಕ್ತ ಸರಣಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಷಷ್ಠ್ಯಬ್ಧ ಸಂಭ್ರಮದ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷರಾದ ಪದ್ಮನಾಭ ಕೊಟ್ಟಾರಿ ಅವರು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ರೈತರಿಗೆ ಸಾವಯವ ಕೃಷಿಯ ಬಗ್ಗೆ ಬೆಂಗಳೂರಿನ ಖ್ಯಾತ ಸಾವಯವ ಕೃಷಿ ವಿಜ್ಞಾನಿ ಡಾ.ಕೆ.ಆರ್.ಹುಲ್ಲುನಾಚೇಗೌಡ ಹಾಗೂಔಷಧಿ ಸಿಂಪಡಣೆಯ ಬಗ್ಗೆ ಮಾಹಿತಿ ಮತ್ತು ಪ್ರತ್ಯಕ್ಷಿಕೆಯನ್ನು ಬಾಲಸುಬ್ರಹ್ಮಣ್ಯ ಎಚ್.ಎಂ.ಹಾಸನ ಅವರು ಮಾಹಿತಿ ನೀಡಲಿದ್ದಾರೆ. ಈ ಸಮಾರಂಭದಲ್ಲಿ ಆರ್ ಎಸ್ ಎಸ್ ಪ್ರಮುಖರಾದ ಡಾ.ಪ್ರಭಾಕರ ಭಟ್,ಒಡಿಯೂರಿ ಶ್ರೀಗಳು,ಮಾಜಿ ಶಾಸಕ ರುಕ್ಮಯ ಪೂಜಾರಿ ,ಒಡಿಯೂರುಶ್ರೀ ಸೌ.ವಿ.ಸ.ಸಂಘದ ಅಧ್ಯಕ್ಷ ಸುರೇಶ್ ರೈ ಭಾಗವಹಿಸಲಿದ್ದಾರೆ ಎಂದರು