Wednesday, January 22, 2025
ಸುದ್ದಿ

ರಸ್ತೆ ದಾಟುತ್ತಿದ್ದ ವೇಳೆ ಬಾಲಕನಿಗೆ ಬೈಕ್ ಢಿಕ್ಕಿ – ಚುಳ್ಳಿಕೆರೆಯ 15 ವರ್ಷದ ಆಶಿಲ್ ಸಾವು – ಕಹಳೆ ನ್ಯೂಸ್

ದಕ್ಷಿಣ ಕನ್ನಡ: ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಗೆಸೆಯಲ್ಪಟ್ಟ ಬಾಲಕ ಗೂಡ್ಸ್ ಆಟೋದಡಿಗೆ ಬಿದ್ದು ಮೃತಪಟ್ಟ ಘಟನೆ ಕಾಞಂಗಾಡ್ ನ ಅತಿಂಞಲ್ ಎಂಬಲ್ಲಿ ನಡೆದಿದೆ.

ಚುಳ್ಳಿಕೆರೆಯ ಬಿಜು ಎಂವರ ಪುತ್ರ 15 ವರ್ಷದ ಆಶಿಲ್, ಮೃತಪಟ್ಟ ಬಾಲಕ. ಈತ ಮನೆ ಸಮೀಪದ ಅಂಗಡಿಗೆ ತೆರಳಲು ರಸ್ತೆ ಅಡ್ಡ ದಾಟುತ್ತಿದ್ದಾಗ ಅತೀ ವೇಗದಿಂದ ಬಂದ ಬೈಕ್ ಢಿಕ್ಕಿ ಹೊಡೆದಿದೆ. ಇದರಿಂದ ರಸ್ತೆಗೆಸೆಯಲ್ಪಟ್ಟ ಆಶಿಲ್ ದೇಹದ ಮೇಲೆ ಗೂಡ್ಸ್ ಆಟೋ ಹರಿದು ಗಂಭೀರವಾಗಿ ಗಾಯಗೊಂಡಿದ್ದ. ಕೂಡಲೇ ಆತನನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತದರೂ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾನೆ. ಆಶಿಲ್ ರಾಜಾಪುರದ ಹೋಲಿ ಫ್ಯಾಮಿಲಿ ಶಾಲೆಯ ಏಳನೇ ತರಗತಿ ವಿದ್ಯಾರ್ಥಿಯಾಗಿದ್ದನು. ಈ ಕುರಿತು ರಾಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು