Sunday, November 24, 2024
ಸುದ್ದಿ

ಜನಮಿಡಿತ ಪತ್ರಿಕೆಯ ಪ್ರತಿನಿಧಿ ರೇಷ್ಮಾ ಶೆಟ್ಟಿ ಗೊರೂರು ರವರಿಗೆ ಒಲಿದ “ಸೌರಭರತ್ನ ಪ್ರಶಸ್ತಿ -2021” – ಕಹಳೆ ನ್ಯೂಸ್

ಕಥಾಬಿಂದು ಪ್ರಕಾಶನ ಮಂಗಳೂರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಕುಡ್ಲ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇದರ ಸಹಯೋಗದಲ್ಲಿ, ಕಥಾಬಿಂದು ಪ್ರಕಾಶನದ 14ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಗೊಂಡ ವಿವಿಧ ಪ್ರಶಸ್ತಿ ಗಳಲ್ಲೊಂದಾದ “ಸೌರಭರತ್ನ ಪ್ರಶಸ್ತಿ -2021” ಪ್ರಶಸ್ತಿಯನ್ನು ಮೂಲತ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಎಣ್ಣೆಹೊಳೆಯವರಾದ, ಲೇಖಕಿ, ಕವಯಿತ್ರಿ “ರೇಷ್ಮಾ ಶೆಟ್ಟಿ ಗೊರೂರು” ಇವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು. ಪ್ರಶಸ್ತಿ ಪ್ರದಾನ ಸಮಾರಂಭವು ಅ.15ರಂದು ಸಂಜೆ 4 ಗಂಟೆಗೆ “ತುಳು ಭವನ ಉರ್ವ ಸ್ಟೋರ್ ಮಂಗಳೂರು”ಇಲ್ಲಿ ತುಳು ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಥಾಬಿಂದು ಪ್ರಕಾಶನದ ಮುಖ್ಯಸ್ಥರು ಹಾಗೂ ಅಥಿತಿ ಗಣ್ಯರ ಮುಂದೆ ನೆರವೇರಿತು..

ಜನಮಿಡಿತ ಪತ್ರಿಕೆಯ ಬರಹಗಾರ್ತಿಯಾಗಿರುವ ರೇಷ್ಮಾ ಶೆಟ್ಟಿ ಗೊರೂರು ಅವರ ಚೊಚ್ಚಲ ಕೃತಿ “ಭಾವಜೀವಿಯ ಅಂತರಂಗ “ಕಥಾಬಿಂದು ಪ್ರಕಾಶದ ಮೂಲಕ ಬಿಡುಗಡೆಗೊಂಡಿರುತ್ತದೆ, ಹಾಗೂ ಮುಂದಿನ ಕವನ ಸಂಕಲನ ಪ್ರಕಟಣೆಗೆ ಸಿದ್ದಗೊಂಡಿದೆ..

ಜಾಹೀರಾತು
ಜಾಹೀರಾತು
ಜಾಹೀರಾತು

ವೃತ್ತಿ ಬದುಕಿನ ಜೊತೆ ನಿರಂತರ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಇವರು “ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಪರಿಷತ್, ಆದಿ ಗ್ರಾಮೋತ್ಸವ ಯುವ ವೃಂದ ಕುರ್ಪಡಿ ಇದರ ಸದಸ್ಯೆ”,”ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಗೊರೂರು ಘಟಕದ ಸಹಸಂಚಾಲಕಿ”, ಹಾಗೂ ಸಹೃದಯ ಸಂಗಮ ಬಳಗ ಸ್ಪಂದನ ಸಿರಿ ವೇದಿಕೆ ಹಾಸನ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಇವರಿಗೆ ಈಗಾಗಲೇ ಕಥಾಬಿಂದು ಪ್ರಕಾಶನದಿಂದ “ಚೈತನ್ಯ ಶ್ರೀ “ರಾಜ್ಯ ಪ್ರಶಸ್ತಿ, ಸಪ್ತಸ್ವರ ಸಂಗೀತ ಬಳಗ ಬೆಳಗಾವಿ ಇಲ್ಲಿ ಕೊಡಮಾಡಲ್ಪಡುವ “ಸಿರಿಗನ್ನಡ ರಾಷ್ಟ್ರೀಯ ಸೇವಾ ರತ್ನ “ಪುರಸ್ಕಾರ, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಪರಿಷತ್ ಹಾಗೂ ಲಯನ್ಸ್ ಕ್ಲಬ್ ಮುನಿಯಾಲು ಇವರ ವತಿಯಿಂದ “ಗ್ರಾಮ ಯುವ ಸಿರಿ ಗೌರವ ” ಪುರಸ್ಕಾರಗಳು ಲಭಿಸಿರುತ್ತವೆ..ಇವರ ನಿರಂತರ ಸಾಹಿತ್ಯ ಚಟುವಟಿಕೆಯ ಸೇವೆಯನ್ನು ಗುರುತಿಸಿ ಇವರಿಗೆ ಸೌರಭ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ…

ಜಾಹೀರಾತು
ಜಾಹೀರಾತು
ಜಾಹೀರಾತು