Wednesday, January 22, 2025
ಬಂಟ್ವಾಳ

ಕಲ್ಲಡ್ಕ: ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಪುನಾರಾರಂಭ –ಕಹಳೆ ನ್ಯೂಸ್

ಕಲ್ಲಡ್ಕ: ಶ್ರೀ ರಾಮ ವಿದ್ಯಾಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲಾ ಫ್ರಾರಂಬೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಭಾರತಮಾತೆಗೆ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡಿ ಬಳಿಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಅವರು ಕಳೆದ ಒಂದಷ್ಟು ಸಮಯದಿಂದ ಶಾಲಾ ವಾತಾವರಣದಿಂದ ಹೊರಗಿದ್ದರೂ, ಶೈಕ್ಷಣಿಕ ಚಟುವಟಿಕೆ ಮಾತ್ರ ಮನೆಯಲ್ಲಿ ನಿರಂತರವಾಗಿತ್ತು. ಶಾಲೆಯಲ್ಲಿ ನಡೆಯುತ್ತಿದ್ದಂತಹ ಸಂಸ್ಕಾರಯುತ ಕಾರ್ಯಗಳು ಪ್ರತಿ ಮನೆಯಲ್ಲಿಯೂ ಕೂಡ ನಡೆದಿರುವುದು ನಿಜವಾಗಿಯೂ ಶ್ಲಾಘನೀಯ. ಆದರೆ ಅನುಭವದ ಶಿಕ್ಷಣವನ್ನು, ಶಾಲೆಯ ಮೂಲಕವೇ ಪಡೆಯಲು ಮತ್ತೊಮ್ಮೆ ಅವಕಾಶ ಸಿಕ್ಕಿರುವುದು ಎಲ್ಲರಿಗೂ ಸಂತಸದ ವಿಚಾರ. ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲೆಯು ಕನ್ನಡ ಮಾಧ್ಯಮದಲ್ಲಿ ರಾಜ್ಯದಲ್ಲಿಯೇ ಗರಿಷ್ಠ ಸಂಖ್ಯೆಯನ್ನು (1225) ಹೊಂದಿದ್ದು ಮಾತೃಭಾಷೆಯಲ್ಲಿ ಉಚಿತ ಶಿಕ್ಷಣ ನೀಡುತ್ತಿರುವ ಹೆಗ್ಗಳಿಕೆ ಈ ಸಂಸ್ಥೆಗಿದೆ. ಮುಂದಿನ ದಿನಗಳಲ್ಲಿ ಪರಿಸರದೊಂದಿಗಿನ ಶಿಕ್ಷಣವನ್ನು ನಮ್ಮಲ್ಲಿ ಅತ್ಯಂತ ಸಂತೋಷದಾಯಕವಾಗಿ ಪ್ರಾಣಿ, ಪಕ್ಷಿ, ಗೋವು, ಮರ-ಗಿಡಗಳೊಂದಿಗೆ ಬೆರೆತು ಕಲಿಯುವ ಅವಕಾಶ ಪೋಷಕರ ಸಹಭಾಗಿತ್ವದೊಂದಿಗೆ ನಿಮ್ಮದಾಗಲಿದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಎಲ್ಲಾ ವಿದ್ಯಾರ್ಥಿಗಳು ಭಾರತಮಾತೆಗೆ ಪುಷ್ಪಾರ್ಚನೆ ಮಾಡಿ ನಂತರ ದಿನನಿತ್ಯದ ಪ್ರಾರ್ಥನೆಯಾದ ಸರಸ್ವತಿ ವಂದನೆ ಅಗ್ನಿಹೋತ್ರದೊಂದಿಗೆ ನಡೆಯಿತು.ಬಳಿಕ ಅಧ್ಯಾಪಕ ವೃಂದದವರು ಬಂದಿರುವಂತಹ ಒಂದನೇ ತರಗತಿಯ ಪುಟಾಣಿಗಳಿಗೆ ಆರತಿ, ಅಕ್ಷತೆ, ತಿಲಕ ಧಾರಣೆ ಮಾಡಿ, ಸಿಹಿ ನೀಡಿ ವಿಶಿಷ್ಟವಾಗಿ ಸ್ವಾಗತಿಸಿದರು. ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತಮಾಧವ, ರಾಷ್ಟ್ರಸೇವಿಕಾ ಸಮಿತಿಯ ಕಾರ್ಯಕಾರಿಣಿ ಸದಸ್ಯರಾದ ಕಮಲಾ ಪ್ರಭಾಕರ ಭಟ್ ಹಾಗೂ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕರಾದ ಹೇಮಲತಾ ನಿರ್ವಹಿಸಿದರು.