Tuesday, January 21, 2025
ಪುತ್ತೂರು

ಪುತ್ತೂರು: ಬಡಗನ್ನೂರಿನ ಅಪ್ರಾಪ್ತ ದಲಿತ ಬಾಲಕಿ ಅತ್ಯಾಚಾರ ಪ್ರಕರಣ – ನ್ಯಾಯಾಲಯಕ್ಕೆ ಶರಣಾದ ಕುದ್ರಾಡಿ ನಾರಾಯಣ ರೈ- ಕಹಳೆ ನ್ಯೂಸ್

ಪುತ್ತೂರು :ಬಡಗನ್ನೂರಿನ ಅಪ್ರಾಪ್ತ ದಲಿತ ಬಾಲಕಿಯ ಅತ್ಯಾಚಾರ ಹಾಗೂ ಆಕೆ ಮಗುವಿಗೆ ಜನ್ಮನೀಡಿದ ಪ್ರಕರಣದಲ್ಲಿ ಸಂತ್ರಸ್ತೆಯ ಸಹೋದರನನ್ನು ಆರೋಪಿ ಎಂದು ಬಂಧಿಸಲಾಗಿತ್ತು. ಆದರೆ ಸ್ವತಃ ಬಾಲಕಿಯೇ ಸೆ 23ರಂದು ನ್ಯಾಯಾಲಯಕ್ಕೆ ಹಾಜರಾಗಿ ಸೆಕ್ಷನ್ 164ರಡಿ ಹೇಳಿಕೆ ನೀಡಿದ್ದು, ಕುದ್ರಾಡಿ ನಾರಾಯಣ ರೈಯವರೇ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿದ್ದಾರೆ. ಈ ಬಳಿಕ ನಾರಾಯಣ ರೈ ತಲೆಮರೆಸಿಕೊಂಡು ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ ಕೆಲ ದಿನಗಳ ಹಿಂದೆ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿತ್ತು. ಬಳಿಕ ಬಂಧನ ಭೀತಿ ಎದುರಿಸುತ್ತಿದ್ದ ಇವರು ಅಡಗಿಕೊಂಡಿದ್ದರು ಶಂಕಿಸಲಾಗಿತ್ತು. ಪೋಲಿಸರು ನೊಟೀಸ್ ಜಾರಿ ಮಾಡಿ ಮೇಲೆ, ನಾರಾಯಣ ರೈಯವರು ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಬಾಲಕಿಯನ್ನು ಅತ್ಯಾಚಾರ ಮಾಡಿ ತಲೆಮರೆಸಿಕೊಂಡ ನಾರಾಯಣ ರೈ ಬಂಧನಕ್ಕೆ ಆಗ್ರಹಿಸಿ ದಲಿತ ಸಮನ್ವಯ ಸಮಿತಿಯೂ ಸಂಪ್ಯ ಠಾಣೆ ಚಲೋ ಬೃಹತ್ ಪ್ರತಿಭಟನೆ ಮಾಡಿತ್ತು. ಜೊತೆಗೆ ದಲಿತ ಸಂಘಟನೆಗಳು ಹಾಗೂ ವಿಪಕ್ಷ ಕಾಂಗ್ರೆಸ್ ಕೂಡ ಆರೋಪಿಯ ಬಂಧನಕ್ಕೆ ಒತ್ತಾಯಿಸಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು