Recent Posts

Tuesday, January 21, 2025
ಬೆಂಗಳೂರು

ಜೈನ್ ಸಹಕಾರ್ ವತಿಯಿಂದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗೆ ವಿದ್ಯಾಭ್ಯಾಸಕ್ಕಾಗಿ ನೆರವು –ಕಹಳೆ ನ್ಯೂಸ್

ಬೆಂಗಳೂರು: ಸುಮಾರು 10 ವರ್ಷಗಳಿಂದ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವ ಬೆಂಗಳೂರಿನ ಜೈನ್ ಸಹಕಾರ್ ಹಾಗೂ ಬಿಎಸ್ಎಂ ಜೈನ್ ಅಸೋಸಿಯೇಷನ್ ವತಿಯಿಂದ ಕೊರೊನ ಮಹಾಮಾರಿಯ ಈ ಕ್ಲಿಪ್ತ ಸಮಯದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ವಿದ್ಯಾಭ್ಯಾಸ ಮತ್ತು ಇತರ ತುರ್ತು ಸಂದರ್ಭದಲ್ಲಿ ಸದರಿ ಕುಟುಂಬಗಳನ್ನು ಗುರುತಿಸಿ ಪ್ರೀತಿಯಿಂದ ಸಹಾಯಹಸ್ತ ಚಾಚುವುದರ ಮುಖಾಂತರ ಸಂಘವು ಇತ್ತೀಚಿನ ವರ್ಷಗಳಲ್ಲಿ ಬಹಳ ಜನಪ್ರಿಯವಾಗಿದೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬೆಂಗಳೂರಿನಲ್ಲಿ ನೆಲೆಸಿರುವ ಸುಮಾರು 500 ಅಧಿಕ ಕುಟುಂಬದ ಸದಸ್ಯರು ಈ ಸಂಘದಲ್ಲಿ ಸಕ್ರಿಯವಾಗಿ ಪ್ರತಿವರ್ಷ ಧಾರ್ಮಿಕ ಪ್ರವಾಸ, ಆಹಾರಮೇಳ, ಯುವಕ-ಯುವತಿಯರಿಗೆ ವಿವಿಧ ಕ್ರೀಡೆಗಳು, ಮಕ್ಕಳಿಗೆ ವಿನೋದಾವಳಿಗಳ ಕಾರ್ಯಕ್ರಮಗಳನ್ನು ಅಳವಡಿಸಿದರ ಮುಖಾಂತರ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸುಮಾರು 40 ವರ್ಷಗಳ ಹಿಂದೆ ದೂರದ ಊರಿಂದ ಸಮಾಜದ ಯಾವುದೇ ವ್ಯಕ್ತಿ ಬೆಂಗಳೂರಿಗೆ ಬಂದಾಗ ಅವರಿಗೆ ಹಿಂದುಮುಂದು ನೋಡದೆ ಉಚಿತವಾಗಿ ವಸತಿ ಊಟ ಮತ್ತು ಮಾರ್ಗದರ್ಶನವನ್ನು ನೀಡುತ್ತಿದ್ದ ಮಾಗಡಿರಸ್ತೆಯ ಇಂದ್ರ ಭವನ ಹೋಟೆಲಿನ ಆಗಿನ ಮಾಲಕರಾದ ಚಂದ್ರರಾಜ ಜೈನ್ ರವರು ಪರೋಪಕಾರ ಮಾಡಿ ಮಾನವೀಯತೆ ಮೆರೆಯುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂತಹ ಮೇರು ವ್ಯಕ್ತಿತ್ವದ ಮಕ್ಕಳ ಪೈಕಿ ಶ್ರೀ ಜಗದೀಶ್ ಜೈನ್ ರವರು ಕುಟುಂಬ ನಿರ್ವಹಣೆ ಗೋಸ್ಕರ ಪ್ರಸ್ತುತ ಹೋಟೆಲ್ನಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದು, ತನ್ನ ಮಗನ ವಿದ್ಯಾಭ್ಯಾಸದ ವಾರ್ಷಿಕ ಶುಲ್ಕವನ್ನು ಭರಿಸಲು ಬಹಳ ತೊಂದರೆಯಲ್ಲಿ ಇದ್ದದ್ದನ್ನು ಮನಗಂಡು, ಅವರ ಮಗನ ವಿದ್ಯಾಭ್ಯಾಸ ಗೋಸ್ಕರ ಸಂಘದ ವತಿಯಿಂದ ಸದ್ಯಕ್ಕೆ ತುರ್ತಾಗಿ ಸುಮಾರು 20 ಸಾವಿರ ರೂಗಳನ್ನು ನೀಡಲಾಯಿತು.

ಹಾಗೆಯೇ ನಮ್ಮ ಸಮಾಜದ ಶ್ರೀರಂಗಪಟ್ಟಣದ ನಿವಾಸಿ ಚಿಕ್ಕವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡ ವಿಧವೆಯ (ಬಿಪಿಎಲ್ ಕಾರ್ಡ್ ಹೊಂದಿರುವ) ಪ್ರತಿಭಾವಂತ ಹೆಣ್ಣು ಮಗಳ ಪ್ಯಾರಾಮೆಡಿಕಲ್ ವಿದ್ಯಾಭ್ಯಾಸಕ್ಕಾಗಿ 10 ಸಾವಿರ ರೂಗಳ ಸಹಾಯ ಹಸ್ತ ನೀಡಲಾಯಿತು.

ನಿನ್ನೆ ನಡೆದ ಈ ಚಿಕ್ಕ ಕಾರ್ಯಕ್ರಮದಲ್ಲಿ ರಾಜಾಜಿನಗರ ಜೈನ್ ಮಿಲನ್ ನ ಕಾರ್ಯದರ್ಶಿಗಳಾದ ಶ್ರೀಮತಿ ಸೌದಾಮಿನಿ ಅಜಿತ್, ಸಂಘದ ಗೌರವಾಧ್ಯಕ್ಷರಾದ ಡಾ ವಿದ್ಯಾಸಾಗರ್, ಅಧ್ಯಕ್ಷರಾದ ಎನ್ ಯಶೋಧರಾ ಅಧಿಕಾರಿ, ಉಪಾಧ್ಯಕ್ಷರಾದ ಪಣಿರಾಜ್ ಹಾಗೂ ಸಂಘದ ಎಲ್ಲಾ ಗೌರವಾನ್ವಿತ ಸದಸ್ಯರುಗಳಿಗೆ ಪ್ರಧಾನ ಕಾರ್ಯದರ್ಶಿಗಳಾದ ಮಾಳ ಹರ್ಷೇಂದ್ರ ಜೈನ್ ರವರು “ಬದುಕು ಬದುಕಲು ಬಿಡು” ಎಂಬ ಮಹಾವೀರರ ವಾಣಿಯಂತೆ ಪರೋಪಕಾರ ಮೆರೆದ ಎಲ್ಲರಿಗೂ ಹೃದಯಾಂತರಾಳದ ಅಭಿನಂದನೆಗಳನ್ನು ಸಲ್ಲಿಸಿದರು.
ವರದಿ: ಅಲೆಕ್ಸಾಂಡರ್ ಎಂಎಚ್