ನವೆಂಬರ್ 1ರಂದು ನಡೆಯಲಿದೆ ಅಧಿಕೃತ ದಾಖಲೆ ಇಲ್ಲದ ಹಿಂದೂ ಧಾರ್ಮಿಕ ಕೇಂದ್ರದ ಮುಖ್ಯಸ್ಥರ ಸಭೆ – ದಾಖಲೆ ಪತ್ರಗಳನ್ನ ಮಾಡಿಸಿಕೊಳ್ಳಲು ಸಭೆ ಕರೆದಿರುವ ವಿಶ್ವ ಹಿಂದೂ ಪರಿಷತ್ – ಕಹಳೆ ನ್ಯೂಸ್
ಪುತ್ತೂರು: ಪುತ್ತೂರು ತಾಲೂಕು ವ್ಯಾಪ್ತಿಯ ಅಧಿಕೃತ ದಾಖಲೆ ಇಲ್ಲದ ಹಿಂದೂ ಧಾರ್ಮಿಕ ಕೇಂದ್ರಗಳಾದ ಭಜನಾಮಂದಿರ ದೈವಸ್ಥಾನಗಳ ಮುಖ್ಯಸ್ಥರ ಸಭೆಯನ್ನ ನವೆಂಬರ್ ಒಂದರಂದು ಸೋಮವಾರ (01/11/2021) ಬೆಳಿಗ್ಗೆ 10.30ಕ್ಕೆ ಸರಿಯಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಕಚೇರಿ ಬಳಿ ನಡೆಯಲಿದೆ. ಅನೇಕ ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಅಧಿಕೃತವಾದ ದಾಖಲೆಗಳು ಇರುವುದಿಲ್ಲ. ಹೀಗಾಗಿ ಹಿಂದೂ ಧಾರ್ಮಿಕ ಕೇಂದ್ರಗಳ ಸ್ಥಳ ದಾಖಲೆ ಪತ್ರಗಳನ್ನು ತಯಾರಿಸುವ ಬಗ್ಗೆ ಈ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು.
ದಾಖಲೆ ಪತ್ರಗಳಿಲ್ಲದ ಧಾರ್ಮಿಕ ಕೇಂದ್ರಕ್ಕೆ ಸಂಬಂಧಪಟ್ಟ ಸಂಸ್ಥೆಗಳಿಂದ ಕನಿಷ್ಠ ಒಬ್ಬರು ಈ ಸಭೆಯಲ್ಲಿ ಭಾಗವಹಿಸುವಂತೆ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ ಎಸ್ ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರು, ಬಜರಂಗದಳ ಪ್ರಾಂತ ಸಹ ಸಂಚಾಲಕರು ಆದ ಮುರಳಿಕೃಷ್ಣ ಹಸಂತಡ್ಕ ಮನವಿ ಮಾಡಿದ್ದಾರೆ.