Recent Posts

Tuesday, January 21, 2025
ದಕ್ಷಿಣ ಕನ್ನಡರಾಜಕೀಯರಾಜ್ಯಸುದ್ದಿ

Exclusive Report : ಹಿಂದುವಿನಂತೆ ನಟಿಸಿ ಲಾಡ್ಜ್ ನಲ್ಲಿ ಯುವತಿಯೊಂದಿಗೆ ಪಲ್ಲಂಗದಾಟ ; ಮುಸ್ಲಿಂ ಎಂದು ತಿಳಿಯುತ್ತಿದ್ದಂತೆ ಬ್ಲಾಕ್ ಮೇಲ್, ಈಗ ಕಾಮುಕ ಇಬ್ರಾಹಿಂ ಅಂದರ್ | ಯುವಕನ ಮೊಬೈಲ್ ನೋಡಿ ಪೋಲೀಸರಿಗೆ ಶಾಕ್..! 10 ಅಧಿಕ ಆಂಟಿಯರು, ಆಶ್ಲೀಲ ವಿಡಿಯೋಗಳು… | ಇದು ಪಕ್ಕಾ ಲವ್ ಜಿಹಾದ್, ಸೆಕ್ಸ್ ಜಿಹಾದ್ – ಸಂಘ ಪರಿವಾರ ಆಕ್ರೋಶ – ಕಹಳೆ ನ್ಯೂಸ್

ಮಂಗಳೂರು, ಅ.27 : ಬೈಕಂಪಾಡಿಯ ಮೊಬೈಲ್‌ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಮೊಬೈಲ್‌ ಖರೀದಿ ಮಾಡಲು ಬಂದ ಯುವತಿಯ ಪರಿಚಯ ಬೆಳೆಸಿಕೊಂಡು ನಂಬಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಯುವತಿ ಸುರತ್ಕಲ್‌ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಬಂಧಿತ ಆರೋಪಿಯನ್ನು ಕಿನ್ನಿಗೋಳಿಯ ಮುನ್ನ ಯಾನೆ ಇಬ್ರಾಹಿಂ ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೈಕಂಪಾಡಿಯ ಮೊಬೈಲ್‌ ಅಂಗಡಿಗೆ ಮೊಬೈ‌ಲ್‌ ಖರೀದಿಸಲು ಯುವತಿ ಹೋಗಿದ್ದು, ಈ ವೇಳೆ ಯುವಕ ಯುವತಿಯ ಪರಿಚಯ ಬೆಳೆಸಿಕೊಂಡಿದ್ದ. ಯುವಕ ತನ್ನ ನಿಜವಾದ ಹೆಸರನ್ನು ಮರೆಮಾಚಿ ಹಿಂದೂ ಎಂದು ತಿಳಿಸಿ, ಪ್ರೀತಿಯ ನಾಟಕವಾಡಿ ಕಳೆದ ಆಗಸ್ಟ್‌ ತಿಂಗಳಿನಲ್ಲಿ ಲಾಡ್ಜ್‌‌‌‌‌‌ವೊಂದಕ್ಕೆ ಕರೆದೊಯ್ದು ಅತ್ಯಾಚಾರ ವೆಸಗಿದ್ದು, ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಈ ಕುರಿತು ತನಿಖೆ ನಡೆಸುತ್ತಿರುವ ಪೋಲೀಸರಿಗೆ ದೊಡ್ಡ ಶಾಕ್ ಒಂದು ಕಾದಿತ್ತು, ಸದ್ರಿ ಆರೋಪಿಯು 10 ಕ್ಕೂ ಅಧಿಕ ಹಿಂದೂ ಯುವತಿಯರು ಹಾಗೂ ಹೆಂಗಸರ ಸಂಪರ್ಕದಲ್ಲಿದ್ದು, ಆತನ ಮೊಬೈಲ್ ನಲ್ಲಿ ಐದಕ್ಕೂ ಅಧಿಕ ಹೆಂಗಸರ ಅಶ್ಲೀಲ ವಿಡಿಯೋ ಲಭಿಸಿದೆ ಎಂಬು ಪೋಲೀಸ್ ಮೂಲಗಳು ತಿಳಿಸಿವೆ. ಈ ಪ್ರಕರಣದ ಬೆನ್ನು ಹಿಡಿದಿರುವ ಪೋಲೀಸರು ಉನ್ನತಮಟ್ಟದ ತನಿಖೆ ನಡೆಸುತ್ತಿದ್ದಾರೆ.

ಇದು ಲವ್ ಜಿಹಾದ್ – ಸೆಕ್ಸ್ ಜಿಹಾದ್ – ಸಂಘ ಪರಿವಾರ ಆಕ್ರೋಶ

ಈ ಕುರಿತು ಕಹಳೆ ನ್ಯೂಸ್ ಗೆ ಮಾಹಿತಿ ನೀಡಿದ ಭಜರಂಗದಳ ಹಾಗೂ ಹಿಂದೂ ಜಾಗರಣಾ ವೇದಿಕೆ ಮುಖಂಡರು ಇದೊಂದು ಲವ್ ಜಿಹಾದ್, ಸೆಕ್ಸ್ ಜಿಹಾದ್ ಪ್ರಕರಣ. ಜಿಲ್ಲೆಯಲ್ಲಿ ದಿನೇ ದಿನೇ ಇಂತಹ ಕಾಮಾಂಧರು ಹೆಚ್ಚಾಗುತ್ತಿದ್ದು, ಇವರಿಗೆ ತಕ್ಕ ಪಾಠ ಕಲಿಸಬೇಕಾಗಿದೆ . ಈ ಕುರಿತು ಸರಕಾರ ಕಠಿಣ ಕಾನೂನು ತರಬೇಕು ಎಂದು ಆಗ್ರಹಿಸಿದ್ದಾರೆ.