Tuesday, January 21, 2025
ಪುತ್ತೂರು

ಎಂ.ಡಿ ಪೀಡಿಯಾಟ್ರಿಕ್ಸ್ ಪರೀಕ್ಷೆಯಲ್ಲಿ ವಿವೇಕಾನಂದ ಪ.ಪೂ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಚೈತ್ರಾ ಪಿ ಪ್ರಥಮ ರ‍್ಯಾಂಕ್- ಕಹಳೆ ನ್ಯೂಸ್

ಪುತ್ತೂರು: ಕರ್ನಾಟಕ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯವು ನಡೆಸಿದ ಎಂ.ಡಿ ಪೀಡಿಯಾಟ್ರಿಕ್ಸ್ ಪರೀಕ್ಷೆಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿನಿಯಾದ ದೇಲಂಪಾಡಿಯ ಪಡಾರು ತಿರುಮಲೇಶ್ವರ ಭಟ್ ಮತ್ತು ಜಯಶ್ರೀ ಟಿ ಭಟ್ ದಂಪತಿಗಳ ಪುತ್ರಿಯಾದ ಚೈತ್ರಾ ಪಿಯವರು ಪ್ರಥಮ ರ‍್ಯಾಂಕ್ ನ್ನು ಗಳಿಸಿ ಚಿನ್ನದ ಪದಕವನ್ನು ಪಡೆದಿದ್ದಾರೆ. ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ 2010ರಲ್ಲಿ ಪಿಯುಸಿ ಶಿಕ್ಷಣವನ್ನು ಪೂರೈಸಿದ ಬಳಿಕ ಹಾಸನ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿಯನ್ನು ಪಡೆದು, ಮಂಗಳೂರಿನ ಎ.ಜೆ ಸಂಸ್ಥೆಯಲ್ಲಿ ಎಂ.ಡಿ ಪೀಡಿಯಾಟ್ರಿಕ್ಸ್ ನ್ನು ಪೂರೈಸಿದ್ದಾರೆ. ಪ್ರಸ್ತುತ ಯೆನೆಪೊಯಾ ಮೆಡಿಕಲ್ ಕಾಲೇಜಿನಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಚೈತ್ರಾ ಪಿಯವರ ಸಾಧನೆಗೆ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು