ಬಂಟ್ವಾಳ: ಸುಮಾರು ರೂ.2.5ಕೋಟಿ ವೆಚ್ಚದಲ್ಲಿ ಜೀಣೋದ್ಧಾರಗೊಳ್ಳುತ್ತಿರುವ ಶ್ರೀ ಆದಿನಾಥ ಸ್ವಾಮಿ ಬಸದಿಯಲ್ಲಿ ನವರಾತ್ರಿ ವೇಳೆ ಆರಂಭಗೊಂಡ ಮಹಾ ಮೃತ್ಯುಂಜಯ ಜಪ ಆರಾಧನೆ ಕಾರ್ಯಕ್ರಮವು ಶ್ರಾವಕರು 54 ಸಾವಿರ ಜಪ ಆರಾಧನೆ ಮಾಡುವ ಮೂಲಕ ಸಂಪನ್ನಗೊಳಿಸಿದರು.
ಶ್ರಾವಕರಾದ ಕಿಶೋರ್ ಕುಮಾರ್ ಇಂದ್ರ ಸಿದ್ಧಕಟ್ಟೆ, ಮಧ್ವರಾಜ್ ಇಂದ್ರ ಬಂಟ್ವಾಳ, ದೇವಕುಮಾರ್ ಇಂದ್ರ ಪಂಜಿಕಲ್ಲು ಇವರು ಪೂಜಾ ವಿಧಿ ವಿಧಾನ ನೆರವೇರಿಸಿದರು.
ಅಡಳಿತ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್, ಪ್ರಮುಖರಾದ ಹರ್ಷಂದ್ರೆ ಜೈನ್, ರತ್ನವರ್ಮ ಇಂದ್ರ, ಚಂದ್ರಶೇಖರ ಇಂದ್ರ, ಗೀತಾ ಜಿನಚಂದ್ರ, ಅಶೋಕ್ ಕುಮಾರ್, ಕೃಷ್ಣರಾಜ್ ಜೈನ್, ಡಾ.ಶ್ರೀಮಂದರ್ ಜೈನ್, ಭರತ್ ಕುಮಾರ್ ಬುಡೋಳಿ, ಲಲಿತಮ್ಮ ಪಡ್ರಾಯಿ, ರಾಜೇಶ ಜೈನ್ ಪಡ್ರಾಯಿ, ವಿಜಯಮ್ಮ ಬಲ್ಲಾಳ್ ಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.