Monday, January 20, 2025
ಪುತ್ತೂರು

ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ- ಕಹಳೆ ನ್ಯೂಸ್

ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ 2021-22ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಪುತ್ತೂರಿನ ನ್ಯಾಯವಾದಿ ಮಹೇಶ್ ಕಜೆಯವರು ನಾಯಕನಿಲ್ಲದಿದ್ದರೆ ಪ್ರಜಾಪ್ರಭುತ್ವ ಹದಗೆಟ್ಟು ಹೋಗುತ್ತದೆ. ನಿಜವಾದ ನಾಯಕನಾದವನು ಜನಸೇವೆಯನ್ನೇ ಉದ್ದೇಶವಾಗಿರಿಸಿಕೊಂಡಿರಬೇಕು. ಅಧಿಕಾರ ದೊರಕಿತೆಂದು ಬೀಗದೆ ಬಾಗಿ ಮುನ್ನಡೆಯುವವ ಸುಸಂಸ್ಕøತ ನಾಯಕನೆನಿಸಿಕೊಳ್ಳುತ್ತಾನೆ. ಯುವಶಕ್ತಿ ಉಪಯುಕ್ತವಾಗಿ ಬಳಕೆಯಾಗುವುದಕ್ಕೆ ನಾಯಕತ್ವ ಅತ್ಯಂತ ಅಗತ್ಯ. ನಾಯಕನಿಲ್ಲದ ಸ್ವಾತಂತ್ರ್ಯ ಪಾತ್ರೆಯಿಲ್ಲದ ನೀರಿನಂತೆ. ಪ್ರಜೆಗಳನ್ನು ನಿಭಾಯಿಸಬಲ್ಲಂತಹ ಸಾಮಥ್ರ್ಯ ನಾಯಕನಲ್ಲಿರಬೇಕಾದ್ದು ಅನಿವಾರ್ಯ. ನಮ್ಮ ದೇಶ ಪ್ರಜಾಪ್ರಭುತ್ವದ ಅಡಿಗಲ್ಲಿನ ಮೇಲೆ ನಿಂತಿದೆ. ಸುಂದರ ಹಾಗೂ ಔಚಿತ್ಯಪೂರ್ಣ ಪ್ರಜಾಪ್ರಭುತ್ವ ಅತ್ಯುತ್ಕøಷ್ಟ ನಾಯಕತ್ವದ ಅಡಿಯಲ್ಲಿ ಮೆರುಗು ಪಡೆಯುತ್ತದೆ. ನಿಷ್ಟೆ, ನೈತಿಕತೆ, ಅವಲಂಬನೆ, ಶಕ್ತಿ ಹಾಗೂ ಜವಾಬ್ದಾರಿಗಳನ್ನು ಒಳಗೊಂಡ ನಾಯಕತ್ವ ಅತ್ಯಂತ ಅಗತ್ಯ. ವಿದ್ಯಾರ್ಥಿ ದೆಸೆಯಲ್ಲಿಯೇ ಇಂತಹ ಗುಣಗಳನ್ನು ಬೆಳೆಸಿಕೊಂಡು ಉತ್ತಮ ನಾಯಕರಾಗಿ ಮೂಡಿಬರಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ವಿದ್ಯಾರ್ಥಿ ನಾಯಕರಾದವರು ಮುಂದಿನ ದಿನಗಳಲ್ಲಿ ದೇಶದ ನಾಯಕರಾಗಿ ಹೊರಹೊಮ್ಮಬೇಕು. ಆ ನೆಲೆಯಲ್ಲಿ ವಿದ್ಯಾರ್ಥಿ ಜೀವನ ಅನುಭವವನ್ನು ಕಟ್ಟಿಕೊಡುವ ಸಂದರ್ಭವಾಗಿ ಮೂಡಿಬರಬೇಕು. ದೇಶಪ್ರೇಮಿ, ಪ್ರಾಮಾಣಿಕ ನಾಯಕರ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಎಂ. ವಿದ್ಯಾರ್ಥಿ ನಾಯಕರುಗಳಿಗೆ ಪ್ರಮಾಣವಚನ ಬೋಧಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಧ್ವಜವನ್ನು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ವಿದ್ಯಾರ್ಥಿ ಸಂಘದ ನಿಕಟಪೂರ್ವ ಅಧ್ಯಕ್ಷ ಅನ್ಮಯ್ ಭಟ್ ಉಪಸ್ಥಿತರಿದ್ದು ಶುಭಾಶಯ ಕೋರಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಕನ್ಯಾ ಸಚಿನ್ ಶೆಟ್ಟಿ ಅನಿಸಿಕೆ ವ್ಯಕ್ತಪಡಿಸಿದರು. ಗಣಿತಶಾಸ್ತ್ರ ವಿಭಾಗದ ಉಪನ್ಯಾಸಕಿ ರಮ್ಯಶ್ರೀ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶಿವಾನಿ ಬಿ ವಂದಿಸಿದರು. ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಚೈತ್ರಾ ಕಾರ್ಯಕ್ರಮ ನಿರ್ವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು