ಕರ್ನಾಟಕ ಕ್ರೀಡಾ ಪ್ರಾಧಿಕಾರ ಬೆಂಗಳೂರು ವತಿಯಿಂದ ಮಂಜೂರು ಮಾಡಿದ ಸಹಾಯಧನದ ಚೆಕ್ಕನ್ನು ಅಖಿಲ ಭಾರತ ಮುಂಡಾಲ ಯುವ ವೇದಿಕೆಗೆ ಹಸ್ತಾಂತರಿಸಿದ ಶಾಸಕ ವೇದವ್ಯಾಸ ಕಾಮತ್- ಕಹಳೆ ನ್ಯೂಸ್
ಮಂಗಳೂರು : ಕರ್ನಾಟಕ ಕ್ರೀಡಾ ಪ್ರಾಧಿಕಾರ ಬೆಂಗಳೂರು ವತಿಯಿಂದ ಮಂಜೂರು ಮಾಡಿದ ಸಹಾಯಧನ ರೂಪಾಯಿ ಒಂದು ಲಕ್ಷ ಮೊತ್ತದ ಚೆಕ್ಕನ್ನು ಅಖಿಲ ಭಾರತ ಮುಂಡಾಲ ಯುವ ವೇದಿಕೆಗೆ ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಯುವ ವೇದಿಕೆಯ ಉಪಾಧ್ಯಕ್ಷರಾದ ಪ್ರದೀಪ್ ಕಾಪಿಕಾಡ್, ಪ್ರಧಾನ ಕಾರ್ಯದರ್ಶಿ ರವಿ ಕಾಪಿಕಾಡ್, ಕೋಶಾಧಿಕಾರಿ ವಿನಯನೇತ್ರ ದಡ್ಡಲ್ ಕಾಡ್, ಸಾಂಸ್ಕøತಿಕ ಕಾರ್ಯದರ್ಶಿ ಅಜಿತ್ ಕುಮಾರ್ ಕಾಪಿಕಾಡ್, ಮಾಜಿ ಅಧ್ಯಕ್ಷರುಗಳಾದ ಪ್ರಕಾಶ್ ಕೋಡಿಕಲ್, ರಘರಾಜ್ ಕದ್ರಿ, ರಘವೀರ್ ಬಾಬುಗುಡ್ಡ,ಸದಸ್ಯರು ಜಯಚಂದ್ರ ಕೊಟ್ಟಾರಕ್ರಾಸ್, ನಿಶಾಂತ್ ಉರ್ವ, ಪ್ರವೀಣ್ ಕೋಡಿಕಲ್, ಅರುಣ್ ಕುಮಾರ್ ಬಿ.ಕೆ., ಅರವಿಂದ್ ಬಾಬುಗುಡ್ಡ, ಬಾಲಚಂದ್ರ ಕೋಡಿಕಲ್, ಪ್ರಶಾಂತ್ ಬೋಳೂರು ಉಪಸ್ಥಿತರಿದ್ದರು.