Recent Posts

Monday, January 20, 2025
ಕ್ರೈಮ್ರಾಷ್ಟ್ರೀಯಸಿನಿಮಾಸುದ್ದಿ

ಡ್ರಗ್ಸ್‌ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಬಾಲಿವುಡ್‌ ನಟ ಶಾರೂಖ್‌ ಪುತ್ರ ‘ಆರ್ಯನ್‌ ಖಾನ್ ‘ ಸೇರಿ ಮೂವರಿಗೆ ಜಾಮೀನು ಮಂಜೂರು – ಕಹಳೆ ನ್ಯೂಸ್

ಮುಂಬೈ, ಅ 28 :ಐಷಾರಾಮಿ ಹಡಗು ಡ್ರಗ್ಸ್‌ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಬಾಲಿವುಡ್‌ ನಟ ಶಾರೂಖ್‌ ಪುತ್ರ ಆರ್ಯನ್‌ ಖಾನ್ ಹಾಗೂ ಅರ್ಬಾಜ್‌ ಮರ್ಚೆಂಟ್‌ ಹಾಗೂ ಮೂನ್‌ಮೂನ್‌ ಧಮೇಚಾ ಸೇರಿ ಮೂವರಿಗೆ ಜಾಮೀನು ನೀಡಿದೆ. ಈ ಬಗ್ಗೆ ನಾಳೆ ನ್ಯಾಯಾಲಯದಿಂದ ವಿಸ್ತೃತ ಆದೇಶ ಹೊರಬೀಳಲಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಕರಣದಲ್ಲಿ ಬಂಧಿತನಾಗಿದ್ದ ಆರ್ಯನ್‌ ಖಾನ್ ಕಳೆದ 22 ದಿನಗಳ ಕಾಲ ಜೈಲಿನಲ್ಲಿದ್ದಾರೆ. ಜಾಮೀನಿಗೆ ಸಂಬಂಧಪಟ್ಟಂತೆ ಪರ-ವಿರೋಧ ವಕೀಲರ ವಾದವನ್ನು ಆಲಿಸಿದ ನ್ಯಾಯಮೂರ್ತಿ ನಿತಿನ್ ಸಾಂಬ್ರೆ ಆರ್ಯನ್ ಖಾನ್ ಗೆ ಜಾಮೀನು ನೀಡುವುದಕ್ಕೆ ಅನುಮತಿ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರ್ಯನ್ ಖಾನ್ ಸ್ನೇಹಿತ ಅರ್ಬಾಜ್ ಮರ್ಚೆಂಟ್ ಮತ್ತು ಮಾಡೆಲ್ ಮುನ್ಮುನ್ ಧಮೇಚಾ ಅವರ ಜಾಮೀನು ಅರ್ಜಿಯನ್ನು ಕೆಳ ನ್ಯಾಯಾಲಯ ತಿರಸ್ಕರಿಸಿತ್ತು ಇದರ ವಿರುದ್ದ ಆರೋಪಿಗಳ ಪರ ವಕೀಲರು ಮುಂಬೈನ ಹೈಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 26ರಂದು ನಡೆಸುವುದಾಗಿ ಬಾಂಬೆ ಹೈಕೋರ್ಟ್ ನ್ಯಾಯಾಮೂರ್ತಿ ಎನ್. ಡಬ್ಲ್ಯು.ಸಾಂಬ್ರೆ ಅವರ ಏಕ ಸದಸ್ಯ ಪೀಠ ತಿಳಿಸಿತ್ತು

ಮೂರು ದಿನಗಳ ಕಾಲ ನಡೆದ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಪೀಠ , ಜಾಮೀನು ನೀಡುವುದಕ್ಕೆ ಅಸ್ತು ಅಂದಿದ್ದೆ. ಮುಕುಲ್ ರೋಹಟಗಿ ಆರ್ಯನ್‌ ಖಾನ್‌ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿದರು.

“ನಾಳೆ ಅಥವಾ ಶನಿವಾರದೊಳಗೆ ಎಲ್ಲಾ ಆರೋಪಿಗಳನ್ನು ಬಿಡುಗಡೆ ಮಾಡಲಾಗುವ ಸಾಧ್ಯತೆ ಇದೆ” ಬಾಂಬೆ ಹೈಕೋರ್ಟ್ ಜಾಮೀನು ನೀಡಿದ ನಂತರ ಹಿರಿಯ ವಕೀಲ ಮುಕುಲ್ ರೋಹಟಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ