ಪುತ್ತೂರು:ಕ್ಯಾಂಪ್ಕೋ ನೇಮಕಾತಿ ಪರೀಕ್ಷೆಯಲ್ಲಿ “ಐಆರ್ ಸಿಎಂಡಿ” ಶಿಕ್ಷಣ ಸಂಸ್ಥೆಯ 5 ವಿದ್ಯಾರ್ಥಿಗಳು ಉತ್ತೀರ್ಣ-ಕಹಳೆ ನ್ಯೂಸ್
ಪುತ್ತೂರು ಎಪಿಎಂಸಿ ರಸ್ತೆಯಲ್ಲಿ 2010ರಿಂದ ಕಾರ್ಯಾಚಾರಿಸುತ್ತಿರುವ ಬ್ಯಾಂಕಿಂಗ್ ಪರೀಕ್ಷಾ ತರಬೇತಿ ಮತ್ತು ಕಂಪ್ಯೂಟರ್ ತರಬೇತಿಗೆ ಹೆಸರಾದ ಐ.ಆರ್.ಸಿಎಂಡಿ ಶಿಕ್ಷಣ ಸಂಸ್ಥೆಯಲ್ಲಿ ತರಬೇತಿ ಪಡೆದ 5 ವಿದ್ಯಾರ್ಥಿಗಳು 2021ನೇ ಸಾಲಿನ ಕ್ಯಾಂಪ್ಕೋ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕು.ರಶ್ಮಿತಾ ಎಂ.ಎಸ್, ಕು.ರಶ್ಮಿ ಇ, ಕು.ಮಧುರಾ ವೈ, ಸಂಪ್ರೀತ್ ಕೆ.ಎಸ್, ಅಖಿನ್ ಕೋಟ್ಯಾನ್ ತೇರ್ಗಡೆಗೊಂಡು ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ.2010 ರಿಂದ ಸಾವಿರಾರು ಉದ್ಯೋಗಾಕಾಂಕ್ಷಿಗಳ ಕನಸನ್ನು ನನಸಾಗಿಸುವ ನಿಟ್ಟಿನಿಂದ ಸ್ಥಾಪನೆಗೊಂಡ ಪುತ್ತೂರಿನ ಏಕೈಕ ತರಬೇತಿ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಪ್ರತಿ ವಿದ್ಯಾರ್ಥಿಯನ್ನು ಉದ್ಯೋಗದತ್ತ ಕೊಂಡೊಯ್ಯುವುದೇ ಐಆರ್ ಸಿಎಂಡಿ ಶಿಕ್ಷಣ ಸಂಸ್ಥೆಯ ಮುಖ್ಯ ಧೈಯವಾಗಿದೆ.12ನೇ ವಾರ್ಷಿಕೋತ್ಸವದ ಪ್ರಯುಕ್ತ ಸಂಸ್ಥೆಯ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಂಕಿಂಗ್ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿಯು ನೀಡಲಾಗುತ್ತಿದ್ದು ಆಸಕ್ತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಸಂಸ್ಥೆ ಪ್ರಕಟಿಸಿರುತ್ತದೆ. ಆಸಕ್ತರು ದೂರವಾಣಿ ಏ32320477 ಗೆ ಕರೆಮಾಡಿ ನೋಂದಾಯಿಸಿ