Monday, January 20, 2025
ಸುಳ್ಯ

ಬೆನ್ನುಮೂಳೆ ಮುರಿತಕ್ಕೊಳಗಾದ ದಿವ್ಯಾ0ಗರಿಗೆ ಉಚಿತ ವೈದ್ಯಕೀಯ ತಪಾಸಣೆ ಮತ್ತು ಮಾಹಿತಿ ಶಿಬಿರ- ಕಹಳೆ ನ್ಯೂಸ್

ಸುಳ್ಯ : ಸೇವಾಭಾರತಿ ಇದರ ಸೇವಾಧಾಮದ ಸಹಯೋಗದಲ್ಲಿ ರೋಟರಿ ಕ್ಲಬ್, ಸುಳ್ಯ, ಶ್ರೀ ಸಿದ್ಧಿ ವಿನಾಯಕ ಸೇವಾ ಸಮಿತಿ (ರಿ.), ಸುಳ್ಯ, ಕೃಷಿ ಪತ್ತಿನ ಸಹಕಾರಿ ಸಂಘ (ನಿ.), ಸುಳ್ಯ, ನಗರ ಪಂಚಾಯತ್, ಸುಳ್ಯ, ಕೆನರಾ ಸ್ಪೈನ್ ಫೋರಮ್ ಟ್ರಸ್ಟ್, ಮಂಗಳೂರು, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಸುಳ್ಯ, ಎಪಿಡಿ ಬೆಂಗಳೂರು, ಲಯನ್ಸ್ ಕ್ಲಬ್, ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಸುಳ್ಯದಲ್ಲಿ ಬೆನ್ನುಮೂಳೆ ಮುರಿತಕ್ಕೊಳಗಾದ ದಿವ್ಯಾ0ಗರಿಗೆ 2 ದಿನದ ಉಚಿತ ವೈದ್ಯಕೀಯ ತಪಾಸಣೆ ಮತ್ತು ಮಾಹಿತಿ ಶಿಬಿರ ಅ.27 ಮತ್ತು ಅ.28ರ0ದು ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಸುಳ್ಯದ ಡೀನ್ ಆದ ಡಾ. ನೀಲಂಬಿಕೇಯ ನಟರಾಜನ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸೇವಾಧಾಮದ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸೇವಾಧಾಮದ ಸಂಚಾಲಕರಾದ ಶ್ರೀ. ಕೆ ಪುರಂದರ ರಾವ್ ಸೇವಾಭಾರತಿ ಸೇವಾಧಾಮದ ಕಾರ್ಯಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿ ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ಶಿಬಿರಾರ್ಥಿಗಳು ಶಿಬಿರದಲ್ಲಿ ಸಿಗುವ ಸೌಲಭ್ಯಗಳು ಪಡೆದು ಉತ್ತಮ ಆರೋಗ್ಯವಂತ ಜೀವನ ನಡೆಸಲಿ ಎಂದು ಶುಭಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅತಿಥಿಗಳಾಗಿ ಆಗಮಿಸಿದಂತಹ ಅಕಾಡೆಮಿಕ್ ಲಿಬರಲ್ ಎಜುಕೇಶನ್ ನ ಅಧ್ಯಕ್ಷರಾದ ಡಾ. ಕೆ. ವಿ ಚಿದಾನಂದ ಬೆನ್ನುಮೂಳೆ ಮುರಿತಕ್ಕೊಳಗಾದ ದಿವ್ಯಾ0ಗರ ಬಗ್ಗೆ ಸೇವಾಧಾಮ ಮಾಡುತ್ತಿರುವ ಕೆಲಸ ಮತ್ತು ಕಾಲೇಜಿಗೆ ಅಭಿನಂದಿಸಿದರು. ಸೇವಾಧಾಮದಿಂದ ಈ ಹಿಂದೆ ಕೂಡಾ ಇದೆ ರೀತಿ ಶಿಬಿರ ನಡೆಸಿದ್ದು ಅನೇಕರು ಶಿಬಿರದ ಪ್ರಯೋಜನ ಪಡೆದಿದ್ದಾರೆ ಮತ್ತು ಈ ಸಲ ಕೂಡಾ ಶಿಬಿರ ಆಯೋಜಿಸಿದ್ದು ನಮ್ಮಿಂದ ಆಗುವ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಎಂದು ಕಾರ್ಯಕ್ರಮದಲ್ಲಿ ತಿಳಿಸಿದರು.

ರೋಟರಿ ಕ್ಲಬ್ ನ ಅಧ್ಯಕ್ಷರಾದ ರೋ. ಪ್ರಭಾಕರನ್ ನಾಯರ್ ಸೇವಾಭಾರತಿ ಸೇವಾಧಾಮವು ಉತ್ತಮ ರೀತಿಯ ಯೋಜನೆ ನಿರೂಪಿಸಿ ಬೆನ್ನುಮೂಳೆ ಮುರಿತಕ್ಕೊಳಗಾದವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದು ಇಂತಹ ಸೇವಾಕಾರ್ಯಕ್ಕೆ ಸ್ಲಾಘನೇ ವ್ಯಕ್ತ ಪಡಿಸಿದರು.

ಕೃಷಿ ಪತ್ತಿನ ಸಹಕಾರಿ ಸಂಘ (ನಿ.), ಸುಳ್ಯದ ಅಧ್ಯಕ್ಷರಾದ ಶ್ರೀ ಹರೀಶ್ ಬೂಡುಪನ್ನೇ ಬೆನ್ನುಮೂಳೆ ಮುರಿತಕ್ಕೊಳಗಾದವರಿಗೆ ಸೇವಾಧಾಮದ ಕೊಡುಗೆ ಅಪಾರ ಎಂದು ನುಡಿದರು. ಸಿದ್ದಿ ವಿನಾಯಕ ಸೇವಾ ಸಮಿತಿ (ರಿ.), ಸುಳ್ಯ ಇದರ ಅಧ್ಯಕ್ಷರಾದ ಉಮೇಶ್ ಪಿ. ಕೆ ಇವರು ಇಂತಹ ಶಿಬಿರಗಳಿಂದ ಅನೇಕ ಮಾಹಿತಿ ಹಾಗೂ ಜಾಗೃತಿ ಮೂಡುವಂತಾಗುತ್ತದೆ ಎಂದರು. ಡಾ.ಸುಬ್ರಮಣ್ಯ ಎಮ್. ಪಿ ಇವರು ಬೆನ್ನುಮೂಳೆ ಮುರಿತಕ್ಕೊಳಗಾದವರನ್ನು ಗುರುತಿಸಿ ಅವರನ್ನು ಉತ್ತಮ ಗುಣಮಟ್ಟದ ಜೇವನಕ್ಕೆ ಸಹಕಾರವಾಗಿದೆ ಎಂದು ತಿಳಿಸಿದರು. ಲಯನ್ಸ್ ಕ್ಲಬ್ ಸುಳ್ಯ ಇದರ ಅಧ್ಯಕ್ಷರಾದ ಶ್ರೀ. ಆನಂದ ಪೂಜಾರಿ ಇವರು ಸೇವಾಧಾಮ ಬೆನ್ನುಮೂಳೆ ಮುರಿತಕ್ಕೊಳಗಾದವರಿಗೆ ಉತ್ತಮ ಜೀವನಕ್ಕೆ ಸಹಾಕಾರ ನೀಡುತ್ತಿದ್ದು ಎಲ್ಲಾ ಬೆನ್ನುಮೂಳೆ ಮುರಿತಕ್ಕೊಳಗಾದವರು ಸೇವಾಧಾಮದ ಸದುಪಯೋಗ ಪಡೆಯಲಿ ಎಂದು ನುಡಿದರು.

ಶ್ರೀಮತಿ ಶೈಲಜಾ ತಾಲೂಕು ನೋಡಲ್ ಅಧಿಕಾರಿ ಇವರು ಸರಕಾರದ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪಡೆಯುವ ರೀತಿ ಮತ್ತು ಯೂನಿಕ್ ದಿಸಾಬಿಲಿಟಿ ಕಾರ್ಡ್ ನಿಂದ ಆಗುವ ಪ್ರಯೋಜನದ ಬಗ್ಗೆ ತಿಳಿಸಿದರು. ಸೇವಾಧಾಮದ ನಿರ್ದೇಶಕರಾದ ರಾಯನ್ ಫೆನಾರ್ಂಡೀಸ್ ಬೆನ್ನುಮೂಳೆ ಇಂದ ಆಗುವ ಪರಿಣಾಮ ಮತ್ತು ದಿನ ನಿತ್ಯದ ಜೀವನದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು. ಈ ಶಿಬಿರದಲ್ಲಿ ಅನೇಕ ಸಂಘ ಸಂಸ್ಥೆಯ ಗಣ್ಯರು, ಶಿಬಿರಾರ್ಥಿಗಳು ಮತ್ತು ಅವರ ಪೋಷಕರು, ಕೆವಿಜಿ ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ಸೇವಾಭಾರತಿಯ ಕಾರ್ಯಕರ್ತರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸೇವಾಭಾರತಿಯ ಕಾರ್ಯಕರ್ತರಾದ ಶ್ರೀ ಕೇಶವ ಕನ್ಯಾಡಿ ನಿರೂಪಿಸಿ, ಸೇವಾಭಾರತಿಯ ಸಿಬ್ಬಂದಿಯಾದ ಅಖಿಲೇಶ್. ಎ ಸ್ವಾಗತಿಸಿ, ವಂದಿಸಿದರು.