Wednesday, January 22, 2025
ಪುತ್ತೂರು

ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‍ಇಯಲ್ಲಿ ಶಾಲಾ ಪ್ರಾರಂಭೋತ್ಸವ- ಕಹಳೆ ನ್ಯೂಸ್

ಪುತ್ತೂರು: ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಶಾಲಾ ಪ್ರಾರಂಭೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ವಿದೇಶಿಯರ ದಾಳಿ ನಮ್ಮ ಸಂಸ್ಕೃತಿಯ ಮೇಲೆ ಪದೇ ಪದೇ ನಡೆಯುತ್ತದೆ. ಆದರೆ ನಮ್ಮ ಸಂಸ್ಕೃತಿಯ ಉಳಿವು ನಮ್ಮ ಕೈಯ್ಯಲ್ಲಿದೆ. ನಮ್ಮ ಪರಂಪರೆ, ಸಂಸ್ಕøತಿಗೆ ನೀರೆರೆದು ಪೋಷಿಸುವ ಕೆಲಸ ನಮ್ಮಿಂದ ಆಗಬೇಕು. ಮಕ್ಕಳಿಂದ ದೇಶವನ್ನು ಕಟ್ಟುವ ಕೆಲಸ ಆಗಬೇಕು, ಮುಗ್ಧ ವಿದ್ಯಾರ್ಥಿಗಳೆಲ್ಲ ದೇಶದ ಸಾಂಸ್ಕೃತಿಕ ರಾಯಭಾರಿಗಳಾಗಬೇಕು. ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬನೂ ತಾನು ಭಾರತೀಯನೆಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು. ನಮ್ಮಲ್ಲಿನ ಜ್ಞಾನ, ಸಂಪತ್ತು, ವಿದ್ಯೆ ಎಲ್ಲವನ್ನೂ ಭಾರತಾಂಬೆಗೆ ಅರ್ಪಿಸಬೇಕು. ಶಾಲೆ ಎಂಬುದು ವಿದ್ಯಾದೇಗುಲ. ವಿದ್ಯಾರ್ಥಿಗಳು ಶಾಲೆಯನ್ನು ಪ್ರವೇಶಿಸುವಾಗ ಬಲಗಾಲಿಟ್ಟು ಪ್ರವೇಶಿಸಬೇಕು ಎಂದರು.

ವಿದ್ಯಾಲಯದ ಪ್ರಾಚಾರ್ಯೆ ಮಾಲತಿ ಡಿ ಪ್ರಸ್ತಾನವೆ ಹಾಗೂ ಸ್ವಾಗತಗೈದು, ವಿದ್ಯಾರ್ಥಿಗಳಿಲ್ಲದೆ ಶಾಲೆ ಮೌನವಾಗಿದೆ, ನೀರಸವಾದ ವಾತಾವರಣ ಸೃಷ್ಟಿಯಾಗಿದೆ. ಪುನಃ ಮಕ್ಕಳ ಆಗಮನದಿಂದ ಸಸಿಯಲ್ಲಿ ಚಿಗುರೊಡೆದು ಬಂದಂತಹ ಅನುಭವವಾಗುತ್ತಿದೆ. ಕಷ್ಟದ ದಿನಗಳು ಕಳೆದು ಸುಖದ ದಿನಗಳು ಎಲ್ಲರ ಪಾಲಿಗೆ ಸದಾ ಸಿಗುವಂತಾಗಲಿ ಎಂದು ಶುಭಾಶಯದ ನುಡಿಗಳನ್ನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ವಿದ್ಯಾಲಯದ ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್, ಶಿಕ್ಷಕ ವೃಂದದವರು, ಸಿಬ್ಬಂದಿ ವರ್ಗದವರು ಹಾಗೂ ಪೋಷಕ ಬಂಧುಗಳು ಉಪಸ್ಥಿತರಿದ್ದರು.
ವಿದ್ಯಾಲಯದ ಕನ್ನಡ ಭಾಷಾ ಶಿಕ್ಷಕ ಸತೀಶ್ ಇರ್ದೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಮಾರಂಭದ ಕೊನೆಯಲ್ಲಿ ಆಗಮಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಭಾರತೀಯ ಸಂಪ್ರದಾಯದಂತೆ ಅರಶಿನ ಕುಂಕುಮದ ತಿಲಕವನ್ನು ಇಟ್ಟು ಆರತಿಯನ್ನು ಬೆಳಗುವುದರೊಂದಿಗೆ ವಿದ್ಯಾಲಯಕ್ಕೆ ಬರಮಾಡಿಕೊಳ್ಳಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು