Wednesday, January 22, 2025
ಪುತ್ತೂರು

ದೀಪಾವಳಿ ಹಬ್ಬಕ್ಕೆ ಪುತ್ತೂರಿನಲ್ಲಿ ತೆರೆದುಕೊಂಡ ಹೊಳ್ಳ ಕ್ರ್ಯಾಕರ್ಸ್ ಪಟಾಕಿ ಮೇಳ – ಹಸಿರು ಪಟಾಕಿ ಮಳಿಗೆಯಲ್ಲಿ ಲಕ್ಕಿ ಕೂಪನ್ ಪಡೆಯಿರಿ ಬಹುಮಾನ ನಿಮ್ಮದಾಗಿಸಿ – ಕಹಳೆ ನ್ಯೂಸ್

ಬೆಳಕಿನ ಹಬ್ಬ ದೀಪಾವಳಿಯ ಸಡಗರ ಶುರುವಾಗಿದೆ. ಹೀಗಾಗಿ ಪಟಾಕಿಯನ್ನ ಆಚರಿಸೋದಿಕ್ಕೆ ಜನತೆ ಎಲ್ಲಾ ಸಿದ್ದತೆಗಳನ್ನ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಮಾರುಕಟ್ಟೆಯಲ್ಲಿ ಬಗೆ ಬಗೆಯ ಪಟಾಕಿಗಳು ರಾರಾಜಿಸ್ತಾ ಇದ್ದು ಗ್ರಾಹಕರನ್ನ ವೆಲ್‍ಕಮ್ ಮಾಡ್ತಾ ಇದೆ. ಪ್ರತಿವರ್ಷ ವಿವಿಧ ಮಾದರಿಯ ಪಟಾಕಿಗಳನ್ನ ಸೇಲ್ ಮಾಡಿ ಗ್ರಾಹಕರ ಮನೆ ಮಾತಾಗಿರುವ ಪುತ್ತೂರಿನ ಹೆಸರಾಂತ ಪಟಾಕಿ ಮಳಿಗೆ, ಹೊಳ್ಳ ಕ್ರ್ಯಾಕರ್ಸ್ ಈ ಭಾರಿ ಎರಡು ಬೃಹತ್ ಪಟಾಕಿ ಮಳಿಗೆ ತೆರೆದೆ.

ಕೋವಿಡ್ ಕಾರಣದಿಂದಾಗಿ ದೀಪಾವಳಿ ಹಬ್ಬದ ವೇಳೆ ಹಸಿರು ಪಟಾಕಿಯನ್ನು ಮಾತ್ರ ಮಾರಾಟ ಮಾಡಬೇಕೆಂದು ಸರ್ಕಾರ ಹೇಳಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಮುಂಜಾಗೃತ ಕ್ರಮಗಳೊಂದಿಗೆ ಹೊಳ್ಳ ಕ್ರ್ಯಾಕರ್ಸ್ ಪಟಾಕಿ ಮಳಿಗೆಯೂ ಪುತ್ತೂರಿನ ಮುಖ್ಯರಸ್ತೆಯ ದರ್ಬೆ ವೃತ್ತದ ಬಳಿ ಇರುವ ನಿರೀಕ್ಷಣಾ ಮಂದಿರದ ಎದುರುಗಡೆ ಹಾಗೂ ಪುತ್ತೂರಿನ ಕಲ್ಲಾರೆ ಜಿಕೆ ಕಾಂಪ್ಲೆಕ್ಷ್ ಕೃಷ್ಣ ಲಂಚ್ ಹೋಂ ಬಳಿ ತನ್ನ ಮಳಿಗೆಯನ್ನ ತೆರೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದೀಪಾವಳಿ ಹಬ್ಬಕ್ಕೆ ಗ್ರೀನ್ ಪಟಾಕಿಯನ್ನ ಮಾತ್ರ ಮಾರಾಟ ಮಾಡಲಾಗ್ತಾ ಇದ್ದು, ಇಲ್ಲಿ ಎಲ್ಲಾ ಪ್ರತಿಷ್ಠಿತ ಕಂಪೆನಿಗಳ ಸಿಡಿಮದ್ದು, ವೆರೈಟಿ ಗಿಫ್ಟ್ ಬಾಕ್ಸ್‍ಗಳು ಲಭ್ಯವಿದೆ. ಇನ್ನು ಹೊಳ್ಳ ಕ್ರ್ಯಾಕರ್ಸ್ ಪಟಾಕಿ ಮೇಳವು ನವೆಂಬರ್ 2 ರಿಂದ 5ರವರೆಗೆ ನಡೆಯಲಿದ್ದು, ಈ ಭಾರಿ 500ರ ಮೇಲಿನ ಖರೀದಿಗೆ ಲಕ್ಕಿ ಕೂಪನ್ ವ್ಯವಸ್ಧೆಯನ್ನ ಮಾಡಿ ವಿನೂತನ ಬಹುಮಾನವನ್ನ ನೀಡಲಾಗುತ್ತದೆ.

ಲಕ್ಕಿ ಕೂಪನ್‍ನಲ್ಲಿ ಮೊದಲ ಬಹುಮಾನವಾಗಿ 32 ಇಂಚಸ್‍ನ ಎಲ್‍ಈಡಿ ಟಿವಿ, ಎರಡನೇ ಬಹುಮಾನವಾಗಿ ವಿವೋ ಮೊಬೈಲ್, ಹಾಗೂ 5 ಆಕರ್ಷಕ ಬಹುಮಾನವಾಗಿ ತುಳುನಾಡಿನ ಸಾಂಪ್ರದಾಯದ ಅಕ್ಕಿ ಮುಡಿಯನ್ನ ನಿಮ್ಮದಾಗಿಸಿಕೊಳ್ಳಬಹುದು.

ಇನ್ನು ಪಟಾಕಿ ಖರೀದಿಸಲು ಬರುವ ಗ್ರಾಹಕರಿಗೆ ಯವುದೇ ಸಮಸ್ಯೆಯಾಗದಂತೆ ವಿಶಾಲವಾದ ಪಾರ್ಕಿಂಗ್ ವ್ಯವಸ್ದೆಯನ್ನ ಮಾಡಲಾಗಿದ್ದು, ವಿನೂತನ ಮಳಿಗೆಯಲ್ಲಿ ಆರಾಮದಾಯಕವಾಗಿ ಹಸಿರು ಪಟಕಿಗಳನ್ನ ಖರೀದಿಸಬಹುದಾಗಿದೆ.