Sunday, November 24, 2024
ಪುತ್ತೂರು

ಅಂಬಿಕಾ ವಿದ್ಯಾಲಯ ಸಿಬಿಎಸ್ಸಿಯಲ್ಲಿ ರೇಬಿಸ್ ರೋಗದ ಮಾಹಿತಿ ಶಿಬಿರ ಹಾಗೂ ಜಾಗೃತಿ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ದ.ಕ. , ಪಶು ಆಸ್ಪತ್ರೆ ಪುತ್ತೂರು ಇವರ ಸಹಯೋಗದಲ್ಲಿ ಅಂಬಿಕಾ ವಿದ್ಯಾಲಯ ಸಿಬಿಎಸ್ಸಿಯಲ್ಲಿ ರೇಬಿಸ್ ರೋಗದ ಮಾಹಿತಿ ಶಿಬಿರದಲ್ಲಿ ಮಾತನಾಡಿದ, ಪುತ್ತೂರಿನ ಪಶುವೈದ್ಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾಕ್ಟರ್ ಪ್ರಸನ್ನ ಹೆಬ್ಬಾರ್ ರೇಬಿಸ್ ಒಂದು ಪ್ರಮುಖ ಪ್ರಾಣಿಜನ್ಯ ಕಾಯಿಲೆ. ಇದು ಸಾಮಾನ್ಯವಾಗಿ ರೋಗಪೀಡಿತ ನಾಯಿ, ಕೆಲವೊಮ್ಮೆ ಬೆಕ್ಕುಗಳು ಹಾಗೂ ಮಂಗಗಳಿಂದ, ಕುದುರೆ, ಹಸು, ಮೇಕೆ, ಕುರಿ ಮುಂತಾದ ಪ್ರಾಣಿಗಳಿಂದ ಕೂಡ ಹರಡಬಹುದು. ನೀರಿನ ಭಯ ಕಂಡು ಬಂದು ತದನಂತರ ನರಳಿ ಸಾವು ಉಂಟಾಗುತ್ತದೆ. ಆದರೆ ರೇಬಿಸ್ ಬರದಂತೆ ತಡೆಯುವುದಕ್ಕೆ ಸಾಧ್ಯ. ರೆಬೀಸ್ ರೋಗದ ಹತೋಟಿ ಮುಂಜಾಗ್ರತೆಯಿಂದ ಮಾತ್ರ ಸಾಧ್ಯ. ಅದು ರೋಗ ಬರುವ ಮೊದಲೇ ಲಸಿಕೆ ಹಾಕಿಸಿಕೊಳ್ಳಬೇಕು. ಹಾಗಾಗಿ ನಾಯಿ ಸಾಕುವವರು ತಮ್ಮ ನಾಯಿಗಳಿಗೆ ಕಾಲಕಾಲಕ್ಕೆ ರೋಗ ನಿರೋಧಕ ಲಸಿಕೆ ಹಾಕುವ ಮುಖಾಂತರ ಈ ರೋಗ ಬಾರದಂತೆ ತಡೆಗಟ್ಟಬಹುದು. ರೇಬಿಸ್ ಜಾಗೃತಿ ಶಿಬಿರದ ಮೂಲ ಉದ್ದೇಶ ರೋಗದ ನಿರ್ಮೂಲನೆ. 2030ರ ವೇಳೆಗೆ ಭಾರತದಲ್ಲಿ ರೇಬಿಸ್ ನಿರ್ಮೂಲನ ಸಾಧಿಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದರು.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ. ವಹಿಸಿದ್ದರು. ಈ ಸಂದರ್ಭದಲ್ಲಿ ರೇಬಿಸ್ ರೋಗದ ಲಕ್ಷಣಗಳು ನಾಯಿ ಕಚ್ಚಿದಾಗ ಪಾಲಿಸಬೇಕಾದ ಅಂತಹ ವಿವಿಧ ಹಂತದ ಕ್ರಮಗಳ ಕುರಿತಾಗಿ ದೃಶ್ಯಾವಳಿಗಳ ಮೂಲಕ ಛಾಯಾಚಿತ್ರಗಳ ಮೂಲಕ ಸವಿವರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಯಿತು. ಜೊತೆಗೆ ವಿದ್ಯಾರ್ಥಿಗಳು ರೇಬಿಸ್ ಕುರಿತಾದ ತಮ್ಮ ಅನುಮಾನಗಳನ್ನು ಕೇಳಿ ಪರಿಹರಿಸಿಕೊಂಡರು.

ಶಿಕ್ಷಕ – ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿವೃಂದದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಂಶಕ ಬಿ ಜೆ ಸ್ವಾಗತಿಸಿ, ಭವಿಷ್ ವಂದಿಸಿದರು. ಸಂಸ್ಕøತಿ ವಿ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.