Thursday, January 23, 2025
ಸುದ್ದಿ

ಸಂತ ರೇಮಂಡ್ಸ್ ಪದವಿ ಪೂರ್ವ ಕಾಲೇಜು ವಾಮಂಜೂರು : ಕನ್ನಡ ಹಬ್ಬ ಆಚರಣೆ- ಕಹಳೆ ನ್ಯೂಸ್

ವಾಮಂಜೂರು: ಸಂತ ರೇಮಂಡ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಹಬ್ಬವನ್ನು ಆಚರಿಸಲಾಯಿತು. ನಿವೃತ್ತ ಭಾರತೀಯ ವಾಯುಸೇನೆ ಅಧಿಕಾರಿ ಮಧುಕರ ಭಾಗವತ್ ಉದ್ಘಾಟಿಸಿ, ಮಾತನಾಡುತ್ತಾ ಕನ್ನಡದ ಭವಿಷ್ಯ ಕನ್ನಡಿಗರ ಕೈಯಲ್ಲಿದೆ. ಸ್ವಚ್ಛ ಭಾμÉ, ಬರಹದ ಮೂಲಕ ನಮ್ಮನ್ನು ನಾವು ಕನ್ನಡದ ಪೂಜೆಯಲ್ಲಿ ತೊಡಗಿಸಿಕೊಳ್ಳೋಣ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂತ ರೇಮಂಡ್ಸ್ ಕನ್ಯಾಮಠದ ಮುಖ್ಯಸ್ಥರು, ಸ್ಥಳೀಯ ಪ್ರಬಂಧಕರೂ ಆಗಿರುವ ವಂದನೀಯ ಭಗಿನಿ ಗ್ರೇಸಿ ಮೋನಿಕಾ ಕಮನೀಯ ಕನ್ನಡ ನಮ್ಮ ಅಂತರಂಗವನ್ನು ಶುದ್ಧಗೊಳಿಸುವ ಭಾಷೆ. ಈ ನಾಡ ಭಾಷೆ ರಕ್ಷಣೆಗಾಗಿ ನಾವು ಕಟಿಬದ್ಧರಾಗಬೇಕು ಎಂದರು.
ಕನ್ನಡ ಉದ್ಘೋಷಣಾ ವಾಕ್ಯಗಳನ್ನು ಬಿಡುಗಡೆ ಮಾಡಿದ ಸಂತ ರೇಮಂಡ್ಸದ ಅನುದಾನಿತ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವಂದನೀಯ ಭಗಿನಿ ವಿದ್ಯಾ ನಂಬು ಕನ್ನಡವನ್ನು , ನಂಬು ಕನ್ನಡ ಜನರ , ನಂಬು ಕನ್ನಡದ ಅಮಲ ಕಾವ್ಯವನ್ನು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಲೇಜಿನ ತ್ರೈಮಾಸಿಕ ಪತ್ರಿಕೆ ಅರಳು ಬಿಡುಗಡೆ ಮಾಡಿದ ಸಂತ ರೇಮಂಡ್ಸ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಅಕ್ಷರಗಳು ಇಂದಲ್ಲ ನಾಳೆ ನಿಮ್ಮ ದಾರಿಬೆಳಗುವ ದೀಪಗಳು ಎಂದರು. ಇದೇ ಸಂದರ್ಭದಲ್ಲಿ ಅಧ್ಯಾಪಿಕೆ, ಸಾಹಿತಿ ಶ್ರೀಮತಿ ಶ್ಯಾಮಲಾ ಅವರಿಗೆ ರೇಮಂಡ್ಸ್ ರಾಜ್ಯೋತ್ಸವ ಪ್ರಶಸ್ತಿಯನ್ನಿತ್ತು ಗೌರವಿಸಲಾಯಿತು. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ದ್ವಿತೀಯ ಸ್ಥಾನಿಯಾದ ಕುಮಾರಿ ಶಿಫಾಲಿಯವರನ್ನು, ಬೇಂದ್ರೆ ಪುರಸ್ಕಾರ ಪಡೆದ ಕಾಲೇಜಿನ ಕನ್ನಡ ಉಪನ್ಯಾಸಕ ವಾದಿರಾಜ ಕಲ್ಲೂರಾಯ ಅವರನ್ನು ಅಭಿನಂದಿಸಲಾಯಿತು.

ಕನ್ನಡ ಹಬ್ಬದ ಪ್ರಯುಕ್ತ ನಾಡದೇವಿಗೆ ನಮನ, ಕವಿಸಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.ವೇದಿಕೆಯಲ್ಲಿ ಸಾಹಿತ್ಯ ಸಂಘದ ವತಿಯಿಂದ ನಿಖಿತಾ, ಎನ್ ಎಸ್ ಎಸ್ ನ ಲಾಯ್ಸ್ಟನ್ ಉಪಸ್ಥಿತರಿದ್ದರು.

ಕುಮಾರಿ ಮೇಘನಾ ಸ್ವಾಗತಿಸಿ ಕುಮಾರಿ ಅನುಶ್ರೀ ವಂದಿಸಿದರು. ಕುಮಾರಿ ತಂಶೀನ್ ಬೇಗಂ, ಕುಮಾರಿ ಸುಶ್ಮಿತಾ ಕಾರ್ಯಕ್ರಮನಿರೂಪಿಸಿದರು.