Thursday, January 23, 2025
ಪುತ್ತೂರು

ಜೆಇಇ ಮೈನ್ಸ್ – ಅಂಬಿಕಾ ಪಿಯು ವಿದ್ಯಾರ್ಥಿ ಗೌತಮ್‍ಗೆ ರಾಷ್ಟ್ರಮಟ್ಟದಲ್ಲಿ 1213ನೇ ರ‍್ಯಾಂಕ್ – ಕಹಳೆ ನ್ಯೂಸ್

ಪುತ್ತೂರು: ಪ್ರತಿಷ್ಟಿತ ಐಐಟಿ ಹಾಗೂ ಎನ್‍ಐಟಿಗಳಿಗೆ ಪ್ರವೇಶ ಕಲ್ಪಿಸುವ ರಾಷ್ಟ್ರಮಟ್ಟದ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿ ಗೌತಮ್ ಎಚ್. 99.36 ಪರ್ಸಂಟೈಲ್ ಅಂಕ ದಾಖಲಿಸುವ ಮೂಲಕ 1213ನೇ ರ‍್ಯಾಂಕ್  ಗಳಿಸಿದ್ದಾರೆ.

ಹೊಳೆನರಸಿಪುರದ ಹೊನ್ನರಸೇಗೌಡ ಹಾಗೂ ಪೂರ್ಣಿಮಾ ಬಿ.ಎಲ್ ದಂಪತಿ ಪುತ್ರನಾದ ಗೌತಮ್ ರಾಷ್ಟ್ರ ಮಟ್ಟದ ಸಂಸ್ಥೆಗಳಲ್ಲಿ ಇಂಜಿನಿಯರಿಂಗ್ ಅಧ್ಯಯನ ಬಯಸುವ ವಿದ್ಯಾರ್ಥಿಗಳಿಗಾಗಿ ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿಯು ಜೆಇಇ ಮೈನ್ಸ್ ಹಾಗೂ ಜೆಇಇ ಅಡ್ವಾನ್ಸ್ ಡ್ ಎಂಬ ಎರಡು ಹಂತದ ಪರೀಕ್ಷೆಯನ್ನು ಪ್ರತೀ ವರ್ಷ ನಡೆಸುತ್ತಿದ್ದು, ಅಂಬಿಕಾ ಸಂಸ್ಥೆಯ ವಿದ್ಯಾರ್ಥಿಗಳು ಸದಾ ಅತ್ಯುತ್ತಮ ಅಂಕಗಳೊಂದಿಗೆ ಸಾಧನೆ ಮೆರೆಯುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಸ್ತುತ ವರ್ಷ ಅಂಬಿಕಾ ಸಂಸ್ಥೆಯಿಂದ ಹಾಜರಾದ ಒಟ್ಟು 123 ಮಂದಿ ವಿದ್ಯಾರ್ಥಿಗಳಲ್ಲಿ 88 ಮಂದಿ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದಾರೆ. ಈ ಫಲಿತಾಂಶ ವಿದ್ಯಾರ್ಥಿಗಳ ಹಾಗೂ ಶಿಕ್ಷಣದ ಗುಣಮಟ್ಟವನ್ನು ಬಿಂಬಿಸಿದೆ. ವಿದ್ಯಾರ್ಥಿಯ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದ ಸಂತಸ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು