ಬಂದಾರು : ಗ್ರಾಮ ಪಂಚಾಯತ್‍ನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನೆ ಬಗ್ಗೆ ವಿಶೇಷ ಗ್ರಾಮಸಭೆ- ಕಹಳೆ ನ್ಯೂಸ್
ಬಂದಾರು ಗ್ರಾಮ ಪಂಚಾಯತ್‍ನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ, 14 ಮತ್ತು 15ನೇ ಹಣಕಾಸು ಯೋಜನೆ ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) 2021-22 ನೇ ಸಾಲಿನ ಪ್ರಥಮ ಮತ್ತು ದ್ವಿತೀಯ ಹಂತದ ಸಾಮಾಜಿಕ ಪರಿಶೋಧನೆ ಬಗ್ಗೆ ವಿಶೇಷ ಗ್ರಾಮಸಭೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾರ್ಗದರ್ಶಿ ಅಧಿಕಾರಿಯಾಗಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಯಾಗಿರುವ ಜೋಸೆಫ್ ಯೋಜನೆಗಳ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಪರಮೇಶ್ವರಿ ಗೌಡ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗಂಗಾಧರ ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ, ಇಂಜಿನಿಯರ್ ಗಳಾದ ಶರಣ್ ರೈ, ಪ್ರಾರ್ಥನ, ಗ್ರಾಮ ಪಂಚಾಯತ್ ಸದಸ್ಯರಾದ ದಿನೇಶ್ ಗೌಡ, ಬಾಲಕೃಷ್ಣ ಗೌಡ, ಚೇತನ್ ಗೌಡ, ಮೋಹನ್ ಗೌಡ, ಶಿವ ಗೌಡ, ಶ್ರೀಮತಿ ಸುಚಿತ್ರಾ, ಶ್ರೀಮತಿ ಪವಿತ್ರಾ, ಶ್ರೀಮತಿ ವಿಮಲ, ಶ್ರೀಮತಿ ಪುಷ್ಪಾವತಿ, ಶ್ರೀಮತಿ ಭಾರತಿ, ಶ್ರೀಮತಿ ಅನಿತಾ, ಶ್ರೀಮತಿ ಮಂಜುಶ್ರೀ, ಹಾಗೂ ಲೆಕ್ಕ ಪರಿಶೋಧನ ತಂಡ, ಪಂಚಾಯತ್ ಸಿಬ್ಬಂದಿಗಳು ಹಾಗೂ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು