Recent Posts

Monday, January 20, 2025
ಸುದ್ದಿ

ಮಂಗಳೂರು: ಕದ್ರಿ ದಕ್ಷಿಣ ವಾರ್ಡಿನಲ್ಲಿ ನಿರ್ಮಾಣಗೊಂಡ ಸಾರ್ವಜನಿಕ ಶೌಚಾಲಯವನ್ನು ಲೋಕರ್ಪಣೆಗೊಳಿಸಿದ ಶಾಸಕ ವೇದವ್ಯಾಸ್ ಕಾಮತ್- ಕಹಳೆ ನ್ಯೂಸ್

ಮಂಗಳೂರು ಮಹಾನಗರ ಪಾಲಿಕೆಯ ಕದ್ರಿ ದಕ್ಷಿಣ ವಾರ್ಡಿನಲ್ಲಿ ನಿರ್ಮಾಣಗೊಂಡ ಸಾರ್ವಜನಿಕ ಶೌಚಾಲಯವನ್ನು ಲೋಕಾರ್ಪಣೆಗೊಳಿಸಿ, ಬಳಿಕ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್ ಸ್ವಚ್ಛ ಭಾರತದ ಪರಿಕಲ್ಪನೆಯಡಿ ನಗರದ ಕದ್ರಿ ಪರಿಸರದಲ್ಲಿ ಸಾರ್ವಜನಿಕ ಶೌಚಾಲಯದ ಅವಶ್ಯಕತೆಯನ್ನು ಮನಗಂಡು ಎಂ.ಆರ್.ಪಿ.ಎಲ್ ಸಂಸ್ಥೆಯ ಮೂಲಕ ಕದ್ರಿ ಮೈದಾನದ ಬಳಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಸ್ಥಳೀಯ ಕಾರ್ಪೋರೇಟರ್ ಕದ್ರಿ ಮನೋಹರ್ ಶೆಟ್ಟಿ, ಮುಖಂಡರಾದ ಫೆಡ್ರಿಕ್ ಪೌಲ್, ಚರಿತ್ ಪೂಜಾರಿ, ಪ್ರಶಾಂತ್ ಆಳ್ವ, ಶ್ರೀಕಾಂತ್ ರಾವ್, ಯಶವಂತ್ ನಾಯಕ್, ವಸಂತ್ ಜೆ ಪೂಜಾರಿ, ತಾರನಾಥ ಶೆಟ್ಟಿ, ಜಗದೀಶ್ ಕದ್ರಿ, ಹೇಮಚಂದ್ರ, ದಿನೇಶ್ ದೇವಾಡಿಗ, ವಿನೋದ್ ರಾಜ್ ಅಂಚನ್, ಸಚಿನ್ ಕದ್ರಿ, ರಾಘವೇಂದ್ರ ಬರ್ವತ್ತಾಯ, ತುಳಸಿದಾಸ್ ಕದ್ರಿ, ಮೋಹನ್ ಕೊಪ್ಪಲ, ರವೀಂದ್ರನಾಥ್ ಶೆಟ್ಟಿ, ಕೇಶವ ಕದ್ರಿ, ಚೇತನ್ ಶಶಾಂಕ್, ಮೇವಿಸ್ ರೋಡ್ರಿಗಸ್, ಡಾ. ಕ್ರಿಸ್ಟೋಫರ್ ಪಾಯಸ್, ಕೇಶವ ಸಾಲ್ಯಾನ್, ಗಾಡ್ವಿನ್, ಲಲಿತ ಪೈ, ಸಂಗೀತ ಶೆಟ್ಟಿ, ಸತ್ಯ ನಾರಾಯಣ ರಾವ್, ರವೀಶ್ ರೈ, ದಿವಾಕರ್, ಸುರೇಖಾ, ನಾಗೇಶ್ ಕದ್ರಿ, ಮಹೇಶ್ ಪಾಂಡೆ, ಸಂಜೀವ ಅಡ್ಯಾರ್, ಸುಧೀರ್ ಕದ್ರಿ, ಶಿವ ಕದ್ರಿ, ಕೆ.ಜಿ ದೇವಾಡಿಗ ಮುಂತಾದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು