ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ರಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೂತ್ ಅಧ್ಯಕ್ಷರ ಮನೆಗೆ ನಾಮಫಲಕ ಅನಾವರಣ – ಕಹಳೆ ನ್ಯೂಸ್
ಬಂಟ್ವಾಳ ಕ್ಷೇತ್ರದ ಜನರು ಬಿಜೆಪಿ ಪಕ್ಷಕ್ಕೆ ನೀಡಿದ ಪ್ರತಿಯೊಂದು ಮತಕ್ಕೂ ಬೆಲೆ ಬರುವಂತೆ ಮಾಡುವುದರ ಜೊತೆಗೆ ನೆಮ್ಮದಿಯ ಜೀವನಕ್ಕೆ ಹೊಸ ರೂಪ ನೀಡುವುದೇ ಮೊದಲ ಆದ್ಯತೆ ಯಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಅವರು ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ರಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಯಿ ಮತ್ತು ಅರಳ ಗ್ರಾಮದ ಬೂತ್ ಅಧ್ಯಕ್ಷ ರುಗಳ ಮನೆಗೆ ಬೇಟಿ ನೀಡಿ ನಾಮಫಲಕ ಅನಾವರಣ ಮಾಡಿದ ಬಳಿಕ ಮಾತನಾಡಿದರು.
ಶಾಸಕನಾಗಿ ಆಯ್ಕೆಯಾದ ಬಳಿಕದ ಪ್ರತಿ ಹೆಜ್ಜೆ ಯಲ್ಲೂ ಬಂಟ್ವಾಳ ಕ್ಷೇತ್ರದ ಜನತೆ ನನ್ನ ಕೈ ಹಿಡಿದು ಜನರ ಸೇವೆ ಮಾಡಲು ನನಗೆ ಸಹಕಾರ ನೀಡಿದ್ದಾರೆ.ಅವರ ಋಣಭಾರದ ಹೊಣೆಹೊತ್ತು ಕ್ಷೇತ್ರದ ವ್ಯಾಪ್ತಿಯಲ್ಲಿ ರಾಜ ಧರ್ಮ ಪಾಲನೆ ಮಾಡಿದ ಆಡಳಿತಕ್ಕೆ ಒತ್ತುನೀಡುತ್ತೇನೆ. ಟೀಕೆ ಟಿಪ್ಪಣಿ ಗಳಿಗೆ ಕಾರ್ಯಕರ್ತರು ತಲೆಗೆಡಿಸಿಕೊಳ್ಳದೆ, ಬಿಜೆಪಿಯ ತತ್ವಸಿದ್ದಾಂತದಡಿಯಲ್ಲಿ ಪಕ್ಷ ಸಂಘಟನೆಗೆ ಪ್ರಾಮುಖ್ಯತೆ ನೀಡಿ ಎಂದು ಅವರು ತಿಳಿಸಿದರು.
750 ಕೋಟಿಗೂ ಮಿಕ್ಕಿ ಅನುದಾನವನ್ನು ಬಂಟ್ಚಾಳ ಕ್ಷೇತ್ರ ಕ್ಕೆ ತರಲಾಗಿದೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನವನ್ನು ತಂದು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಭವ್ಯ ಭಾರತ ದೇಶದ ಚಿತ್ರಣವನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದರು.
ವಿರೋಧ ಪಕ್ಷಗಳು ಟೀಕೆ ಮಾಡುವುದನ್ನು ಬಿಟ್ಟು ದೇಶದ ಅಭಿವೃದ್ಧಿ ಗೆ ಸಹಕಾರ ನೀಡುವ ಮನಸ್ಥಿತಿ ಯನ್ನು ಮೈಗೂಡಿಸಿಕೊಳ್ಳಬೇಕು. ಕಾಂಗ್ರೇಸ್ ಪಕ್ಷ ಅಲ್ಪಸಂಖ್ಯಾತ ಓಲೈಕೆ ಮತ್ತು ಕುಟುಂಬ ರಾಜಕಾರಣದ ಮೂಲಕ ಚುನಾವಣಾ ರಾಜಕೀಯ ಮಾಡಿದೆ ಎಂದರು.
ಬಂಟ್ವಾಳ ಕೊಯಿಲಗ್ರಾಮದ ಬೂತ್ ಸಂಖ್ಯೆ 27 ರ ಅಧ್ಯಕ್ಷ ಚೇತನ್ ಕೊಯಿಲ, ಬೂತ್ ಸಂಖ್ಯೆ 28 ರ ಅಧ್ಯಕ್ಷ ರವೀಂದ್ರ ಬದಿನಡಿ ,ರಾಯಿ ಗ್ರಾಮದ ಬೂತ್ ಸಂಖ್ಯೆ 29ರ ಅಧ್ಯಕ್ಷ ಶಿವಪ್ರಸಾದ್, ಬೂತ್ ಸಂಖ್ಯೆ 30 ರ ಅಧ್ಯಕ್ಷ ಸಂತೋಷ್ ಕುಮಾರ್ ಅವರ ಮನೆಗೆ ಶಾಸಕ ರಾಜೇಶ್ ನಾಯ್ಕ್ ನೇತ್ರತ್ವದ ಲ್ಲಿ ಬಂಟ್ವಾಳ ಮಂಡಲ ಬಿಜೆಪಿ ಪ್ರಮುಖರು ಬೇಟಿ ನೀಡಿ ನಾಮಫಲಕ ಅನಾವರಣ ಮಾಡಿ ಅಧ್ಯಕ್ಷ ರಿಗೆ ಗೌರವ ನೀಡಿದರು.
ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಮಾತನಾಡಿ ಬೂತ್ ಅಧ್ಯಕ್ಷ ನ ಪ್ರಾಮುಖ್ಯತೆ ಗ್ರಾಮದ ಜನತೆಗೆ ಗೊತ್ತಾಗಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಬಹಳ ಮುಖ್ಯ ಕಾರ್ಯಕ್ರಮ ಆಯೋಜನೆ ಮಾಡಿದೆ. ಕಾರ್ಯಕರ್ತ ನಾಯಕನಾಗಿ ಮುನ್ನಡೆಗೆ ತಯಾರುಗೊಳಿಸುವ ಯೋಜನೆ ಇದಾಗಿದೆ. ಭಾರತೀಯ ಜನತಾಪಾರ್ಟಿಗೆ ಆತ್ಮ, ಅಸ್ಥಿಪಂಜರ ಬಿಜೆಪಿ ಬೂತ್ ಆಗಿದೆ. ವಿಶಿಷ್ಟ ಪದ್ದತಿಯ ಮೂಲಕ, ರಾಷ್ಟ್ರೀಯ ವಿಚಾರಗಳ ಆಧಾರದಲ್ಲಿ ಕಾರ್ಯಕರ್ತರ ಜೊತೆ ಪಕ್ಷ ಸಂಘಟನೆ , ಅಭಿವೃದ್ಧಿ ಕಾರ್ಯಗಳು ನಡೆದಿದೆ ಎಂದರು.
ರಾಜಕೀಯ ಇಚ್ಚಾಶಕ್ತಿಗಳ ಮೂಲಕ ರಾಷ್ಟ್ರೀಯ ವಿಚಾರಗಳಿಗೆ ಹೆಚ್ಚಿನ ಒತ್ತು ನೀಡಿ ಕ್ರಾಂತಿಕಾರಿ ಬದಲಾವಣೆ ಮಾಡಲು ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಕೆಲಸ ಕಾರ್ಯಕ್ರಮ ಗಳು ನಡೆಯುತ್ತಿದೆ, ಇವರ ಯೋಜನೆ, ಯೋಚನೆಗೆ ಶಕ್ತಿ ತುಂಬುವ ಕೆಲಸ ಮಾಡುವ ಎಂದರು. ಮುಂದಿನ ಜಿ.ಪಂ.ತಾಲೂಕು ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಕಲ್ಪ ಮಾಡಿದ್ದಾರೆ, ಇವರ ಸಂಕಲ್ಪ ಕ್ಕೆ ಕಾರ್ಯಕರ್ತರ ಸಹಕಾರ ನಿರಂತರವಾಗಿ ಇರಲಿ ಎಂದರು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಮಾತನಾಡಿ ಪಕ್ಷದ ಬೂತ್ ವಿಜಯಗಳಿಸಿದರೆ ಇಡೀ ದೇಶದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗುತ್ತದೆ ಎಂಬ ಹಿರಿಯರ ಯೋಜನೆ ಗೆ ಕಾರ್ಯಕರ್ತರು ಸೇವೆಯನ್ನು ನೀಡಬೇಕು ಎಂದರು.
ಅಭಿವೃದ್ಧಿ ಗಾಗಿ ಹಗಲಿರುಳು ಶ್ರಮಿಸುವ ಏಕೈಕ ಶಾಸಕ ರಾಜೇಶ್ ನಾಯ್ಕ್ ಅವರನ್ನು ಪಡೆದಿರುವ ಬಂಟ್ವಾಳದ ಜನತೆ ನಿಜಕ್ಕೂ ಭಾಗ್ಯವಂತರು ಎಂದು ಅವರು ಹೇಳಿದರು.
ಪಕ್ಷ ಸಂಘಟನೆ, ಅಭಿವೃದ್ಧಿ ಹಾಗೂ ಕಾರ್ಯಕರ್ತರ ಜೊತೆ ಹೊಂದಾಣಿಕೆಯ ಲ್ಲಿ ಜೊತೆಯಲ್ಲಿ ಸೇರಿಕೊಂಡು ಕೆಲಸ ಕಾರ್ಯಗಳನ್ನು ಶಾಸಕ ರಾಜೇಶ್ ನಾಯ್ಕ್ ಅವರು ಮಾಡುತ್ತಿರುವುದು ಮಾದರಿಯಾಗಿದೆ ಎಂದರು. ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಕಾರ್ಯಕರ್ತರಿಂದ ಆಗಬೇಕಾಗಿದೆ. ಕಾಂಗ್ರೇಸ್ ಕೇವಲ ಸುಳ್ಳುಗಳ ಮೂಲಕ ರಾಜಕೀಯ ಮಾಡಲು ಮುಂದಾಗಿದ್ದು ಇವರ ನೈಜ ಬಣ್ಣ ಬಯಲಾಗುತ್ತಿದೆ ಎಂದರು.
ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಂಟ್ವಾಳ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಳಾದ ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ, ಒಳಚರಂಡಿ, ನಗರ ನೈರ್ಮಲ್ಯ ಮಂಡಲಿ ಸದಸ್ಯೆ ಸುಲೋಚನ ಜಿ.ಕೆ.ಭಟ್, ಪ್ರಮುಖರಾದ ರಮನಾಥ ರಾಯಿ, ಪ್ರಭಾಕರ್ ಪ್ರಭು, ರತ್ನಕುಮಾರ್ ಶೆಟ್ಟಿ, ಸತೀಶ್ ಪೂಜಾರಿ, ದಿನೇಶ್ , ಪುರುಷೋತ್ತಮ ಶೆಟ್ಟಿ, ರಶ್ಮಿತ್ ಶೆಟ್ಟಿ, ಲಕ್ಮೀಧರ್ ಶೆಟ್ಟಿ, ರಂಜನ್ ಶೆಟ್ಟಿ ಅರಳ, ಉಮೇಶ್ ಅರಳ, ಸಂದೇಶ ಶೆಟ್ಟಿ, ಉಮೇಶ್ ಗೌಡ,ಯಶೋಧರ ಕರ್ಬೆಟ್ಟು, ಗಣೇಶ್ ರೈ ಮಾಣಿ, ರತ್ನಾನಂದ , ರೂಪ ಎಲ್ ಶೆಟ್ಟಿ, ಗುಣವತಿ, ಪುಷ್ಪಾವತಿ, ದಿನೇಶ್ ಶೆಟ್ಟಿ, ಉಷಾ ಸಂತೋಷ್, ನಂದರಾಮ ರೈ, ಸಂತೋಷ್ ರಾಯಿಬೆಟ್ಟು, ಹರೀಶ್ ಆಚಾರ್ಯ, ಪ್ರಶಾಂತ್ ಶೆಟ್ಟಿ ಕೊಯಿಲ, ದುರ್ಗಾದಾಸ ಶೆಟ್ಟಿ, ಸಂತೋಷ್ ಕೊಯಿಲ, ಯಶೋಧ , ದಿನೇಶ್ ಮಡಂದೂರು, ಮತ್ತಿತರರು ಉಪಸ್ಥಿತರಿದ್ದರು.