Monday, January 20, 2025
ಸುದ್ದಿ

ಮಂಗಳೂರು ಮಹಾನಗರ ಪಾಲಿಕೆಯ ಕದ್ರಿ ಉತ್ತರ ವಾರ್ಡಿನ ಯೆಯ್ಯಾಡಿ ಬಳಿ ಕಾಲುಸಂಕ ನಿರ್ಮಾಣ ಕಾಮಗಾರಿ – ಭೂಮಿಪೂಜೆ ನೆರವೇರಿಸಿದ ಶಾಸಕ ವೇದವ್ಯಾಸ್ ಕಾಮತ್ – ಕಹಳೆ ನ್ಯೂಸ್

ಮಂಗಳೂರು ಮಹಾನಗರ ಪಾಲಿಕೆಯ ಕದ್ರಿ ಉತ್ತರ ವಾರ್ಡಿನ ಯೆಯ್ಯಾಡಿ ಬಳಿ ಕಾಲುಸಂಕ ನಿರ್ಮಾಣ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಹಿರಿಯರಾದ ಶೀನ ಗುಂಡಳಿಕೆ ಅವರ ಮೂಲಕ ಭೂಮಿಪೂಜೆ ನೆರವೇರಿಸಿದರು.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಮಾತನಾಡಿದ ಶಾಸಕ ಕಾಮತ್, ಕದ್ರಿ ಉತ್ತರ ವಾರ್ಡಿನ ಯೆಯ್ಯಾಡಿಯಲ್ಲಿ ಕಾಲುಸಂಕ ನಿರ್ಮಾಣಕ್ಕೆ ಸ್ಥಳೀಯ ಕಾರ್ಪೋರೇಟರ್ ಅವರ ಬೇಡಿಕೆಯಂತೆ ಲೋಕೋಪಯೋಗಿ ಇಲಾಖೆಯಿಂದ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿದರು.

ವಾರ್ಡಿನ ಸಮಗ್ರ ಅಭಿವೃದ್ಧ್ಗೆ ಈಗಾಗಲೇ ಯೋಜನೆ ರೂಪಿಸಲಾಗಿದ್ದು ವಿವಿಧ ಇಲಾಖೆಗಳಿಂದ ಅನುದಾನ ಒದಗಿಸಲಾಗಿದ್ದು ಮುಂದಿನ ಕೆಲ ವರ್ಷಗಳಲ್ಲಿ ಅಭಿವೃದ್ಧಿ ಕಾಣಬಹುದು ಎಂದು ಶಾಸಕರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೋರೇಟರ್ ಶಕಿಲಾ ಕಾವ, ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ರೂಪಾ ಡಿ ಬಂಗೇರ, ಕಿರಣ್ ರೈ ಎಕ್ಕೂರು, ವಿಜಯ್ ಶೆಣೈ, ಮಂಗಳಾ ಆಚಾರ್, ವಸಂತ್ ಜೆ ಪೂಜಾರಿ, ಪ್ರಸನ್ನ, ಪ್ರವೀಣ್ ಗುಂಡಳಿಕೆ, ಚರಣ್ ಕಂಡೆಟ್ಟು,ಸಂತೋμï ಕುಮಾರ್, ಸೀತಾರಾಮ ಶೆಟ್ಟಿ, ನಾರಾಯಣ ಶೆಟ್ಟಿ, ಗಾಯತ್ರಿ, ಲಕ್ಷ್ಮಿ,ಕೀರ್ತನ, ಉಮಾ ಕಂಡೆಟ್ಟು, ಶೇಖರ್, ಆಶಾ,ವಸಂತಿ, ನಿರ್ಮಲ ಮುಂತಾದವರು ಉಪಸ್ಥಿತರಿದ್ದರು.