Tuesday, January 21, 2025
ಬಂಟ್ವಾಳ

ಕಾರಿಂಜ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ಬಂಧನ: ಇನ್ನುಳಿದ ಇಬ್ಬರಿಗಾಗಿ ಶೋಧ– ಕಹಳೆ ನ್ಯೂಸ್

ಬಂಟ್ವಾಳ: ಕಾರಿಂಜ ಮಹತೊಭಾರ ಕಾರಿಂಜೇಶ್ವರ ದೇವಸ್ಥಾನದ ಒಳಗೆ ಅಕ್ರಮ ಪ್ರವೇಶ ಮಾಡಿ ಚಪ್ಪಲಿ ಹಾಕಿಕೊಂಡು ಹೋಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದ ಘಟನೆಗೆ ಸಂಬಂಧಿಸಿದಂತೆ ಪುಂಜಾಲಕಟ್ಟೆ ಎಸ್.ಐ.ಸೌಮ್ಯ ನೇತೃತ್ವದ ಪೋಲೀಸ್ ತಂಡ ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಸರಗೋಡು ಹಾಗೂ ಉಳ್ಳಾಲ ಮೂಲದ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಘಟನೆಯ ಬಗ್ಗೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾಸ್ತಿಕಟ್ಟೆ ಉಲ್ಲಾಳ ಮಂಗಳೂರು ನಿವಾಸಿ ಏ ಬಶೀರ್ ಅವರ ಮಗ ಬುಶೇರ್ ರೆಹಮಾನ (20), ಮುಕ್ಕಚ್ಚೇರಿ ಮನೆ ಉಳ್ಳಾಲ ಮಂಗಳೂರು ನಿವಾಸಿ ಅಬ್ದುಲ್ ಖಾದರ್ ಅವರ ಮಗ ಇಸ್ಮಾಯಿಲ್ ಅರ್ಹ ಮಾಜ್, ಹಳೆಕೋಟೆ ಮನೆ ಉಲ್ಲಾಳ ಮಂಗಳೂರು ನಿವಾಸಿ ಉಮ್ಮರ್ ಫಾರೂಖ್ ಅವರ ಮಗ ಮಹಮ್ಮದ್ ತಾನಿಶ್ (19), ತನ್ವೀರ್ ಕ್ವಾಟೇಜ್ ಬಬ್ಬುಕಟ್ಟೆ ಪೆರ್ಮನ್ನೂರು ಮಂಗಳೂರು ನಿವಾಸಿ ಬದ್ರುದ್ದೀನ್ ಅವರ ಮಗ ಮೊಹಮ್ಮದ್ ರಶಾದ್(19) ಬಂಧಿತ ಆರೋಪಿಗಳು

ಆರೋಪಿಗಳು ಅಕ್ರಮವಾಗಿ ದೇವಳದ ಒಳಗೆ ಚಪ್ಪಲಿ ಹಾಕಿ ಪ್ರವೇಶ ಮಾಡಿದ್ದಲ್ಲದೆ, ಚಪ್ಪಲಿ ಹಾಕಿ ನಡೆದಾಡುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವಿಜ್ರಂಭಿಸಿರುವುದು, ಹಿಂಧೂಗಳ ಭಾವನೆಗಳಿಗೆ ದಕ್ಕೆ ತಂದಿದ್ದಾರೆ. ಇದನ್ನು ದೇವಸ್ಥಾನದ ಆಡಳಿತ ಮಂಡಳಿ ತೀವ್ರವಾಗಿ ಖಂಡಿಸಿದ್ದು ಆರೊಪಿಗಳನ್ನು ಶೀಘ್ರ ಬಂಧಿಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕಾಗಿ ಪುಂಜಾಲಕಟ್ಟೆ ಠಾಣೆಗೆ ಮನವಿ ನೀಡಿತ್ತು. ಮನವಿ ಮೇರೆಗೆ ಘಟನೆಗೆ ಸಂಬಂಧಿಸಿದಂತೆ ಕಾರ್ಯಚರಣೆ ನಡೆಸಿದ ಪುಂಜಾಲಕಟ್ಟೆ ಪೋಲೀಸರು ನಾಲ್ವರು ಆರೋಪಿಗಳನ್ನುಬಂಧಿಸಿದ್ದಾರೆ. ಇನ್ನುಳಿದಂತೆ ಇಬ್ಬರು ಆರೋಪಿಗಳು ಈ ಘಟನೆಯಲ್ಲಿ ಇದ್ದ ಬಗ್ಗೆ ವಿಡಿಯೋದಲ್ಲಿ ಸೆರೆಯಾಗಿದ್ದು ಅವರ ಬಂಧನಕ್ಕಾಗಿ ಪೋಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.