ನವೆಂಬರ್ 05 ರಂದು ಬೆಳಗ್ಗೆ ಮುಕ್ವೆ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಪುರುಷರಕಟ್ಟೆಯ ಬಂಗಾರ್ ಕಲಾವಿದರ್ ” ಪರಕೆ ಸಂದವೊರ್ಚಿ ” ತುಳು ಹಾಸ್ಯಮಾಯ ನಾಟಕ ಮುಹೂರ್ತ – ಕಹಳೆ ನ್ಯೂಸ್
ಪುತ್ತೂರು:ಬಂಗಾರ್ ಕಲಾವಿದೆರ್ ಪುರುಷರಕಟ್ಟೆ, ಪುತ್ತೂರು ಅಭಿನಯಿಸುವ ಈ ವರ್ಷದ ನೂತನ ಕಲಾ ಕಾಣಿಕೆ ‘ಪರಕೆ ಸಂದಾವೊರ್ಚಿ’ ತುಳು ಹಾಸ್ಯಮಯ ನಾಟಕದ ಶುಭಮೂಹರ್ತ ನವೆಂಬರ್ 5 ರಂದು ನಡೆಯಲಿದೆ. ಮುಕ್ವೆ, ಮಜಲ್‍ಮಾರ್ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 9:25ಕ್ಕೆ ಮುಹೂರ್ತ ನೆರವೇರಲಿದೆ. ಕುಸಲ್ದ ಮುತ್ತು ಅರುಣ್ ಚಂದ್ರ ಬಿ.ಸಿರೋಡ್ ರಚಿಸಿ, ನಿರ್ದೇಶಿಸಿರುವ ಈ ನಾಟಕಕ್ಕೆ ಗಣೇಶ್ ಪೂಜಾರಿ ಆಲಂಗ ಸಾರಥ್ಯವಿದ್ದು ರೋಹಿತ್ ಕೋಟ್ಯಾನ್ ಶಿಬರವರ ನಿರ್ಮಾಣವಿದೆ. ಪ್ರಕಾಶ್ ಪೂಜಾರಿ ಶಿಬರ, ಜಗದೀಶ್ ಕೋಟ್ಯಾನ್ ಶಿಬರ, ಸುಧಾಕರ ಕುಲಾಲ್ ನಡುವಾಳ್ ನಾಟಕದ ಸಮಗ್ರ ನಿರ್ವಹಣೆಯನ್ನು ವಹಿಸಿಕೊಂಡಿದ್ದಾರೆ.