ನವದೆಹಲಿ: ಉತ್ತರಖಾಂಡದ ಕೇದಾರನಾಥಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಶ್ರೀ ಆದಿಶಂಕರಾಚಾರ್ಯರ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಬಳಿಕ ಶಿವನಿಗೆ ನಡೆದ ಮಹಾ ರುದ್ರಾಭಿಷೇಕ ಪೂಜೆಯಲ್ಲಿ ಭಾಗವಹಿಸಿ, ಶಿವನಿಗೆ ಪ್ರಾರ್ಥನೆ ಸಲ್ಲಿಸಿದರು.
2013ರಲ್ಲಿ ಉಂಟಾದ ಭಾರೀ ಪ್ರವಾಹದಿಂದಾಗಿ ಕೇದಾರನಾಥದಲ್ಲಿರುವ ಆದಿಶಂಕರಾಚಾರ್ಯರ ಸಮಾಧಿ ಕೊಚ್ಚಿ ಹೋಗಿತ್ತು. ಅದರ ಮರುನಿರ್ಮಾಣದ ಭಾಗವಾಗಿ ಕೇದಾರೇಶ್ವರ ದೇವಾಲಯದ ಹಿಂಭಾಗದಲ್ಲಿ ಶಂಕರಾಚಾರ್ಯರ ಸಮಾಧಿ ಸ್ಥಳದಲ್ಲಿ ಇದನ್ನು ಸ್ಥಾಪಿಸಲಾಗಿದೆ.
ನರೇಂದ್ರ ಮೋದಿ ಅನಾವರಣಗೊಳಿಸಿದ ಪ್ರತಿಮೆಯನ್ನು 120 ಟನ್‍ನ ಕೃಷ್ಣ ಶಿಲೆಯನ್ನು ಬಳಸಿ ನಿರ್ಮಿಸಲಾಗಿದ್ದು, 35 ಟನ್ ತೂಕ ಹಾಗೂ 12 ಅಡಿ ಎತ್ತರವಿದೆ. ಅಲ್ಲದೆ ಬಿಸಿಲು, ಮಳೆ, ಗಾಳಿ ಹಾಗೂ ಎಲ್ಲಾ ಹವಾಮಾನವನ್ನು ತಡೆದುಕೊಳ್ಳುವ ಸಾಮಥ್ರ್ಯವನ್ನೂ ಹೊಂದಿದೆ. ಇದನ್ನು ಹೆಗ್ಗಡ ದೇವನಕೋಟೆಯಿಂದ ತರಲಾಗಿದೆ.