Friday, November 22, 2024
ರಾಜಕೀಯ

Breaking News : ರಾಜ್ಯದ 23ನೇ ಮುಖ್ಯಮಂತ್ರಿಯಾಗಿ ನಾಳೆ ಬೆಳಗ್ಗೆ 9.00 ಗಂಟೆಗೆ ರೈತನಾಯಕ ಬಿ.ಎಸ್. ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಲಿದ್ದಾರೆ – ಕಹಳೆ ನ್ಯೂಸ್

ಬೆಂಗಳೂರು : ಬಿ.ಎಸ್. ಯಡಿಯೂರಪ್ಪನವರು ನಾಳೆ ಬೆಳಗ್ಗೆ 9:00 ಕ್ಕೆ ಮಿಥುನ ಲಗ್ನದಲ್ಲಿ ಬಿ ಎಸ್ ಯಡಿಯೂರಪ್ಪ ರಾಜ್ಯದ 23 ನೇಯ ಮುಖ್ಯಮಂತ್ರಿಯಾಗಿ ಮೂರನೇ ಭಾರಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣ ಆಗಿತ್ತು. ಅತೀ ಹೆಚ್ಚು 104 ಸ್ಥಾನಗಳನ್ನು ಪಡೆದುಕೊಂಡ ಬಿಜೆಪಿ ರಾಜ್ಯಪಾಲರಲ್ಲಿ  ಸರ್ಕಾರ ರಚನೆಗಾಗಿ ಮನವಿ ಸಲ್ಲಿಸಿದ್ದರು. ನಂತರ ನಡೆದ ರಾಜ್ಯ ರಾಜಕೀಯ ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದಾಗಿದೆ. ಅಲ್ಲದೆ ತಮಗೂ ಬಹುಮತ ಇದೆ ಸರ್ಕಾರ ನಡೆಸಲು ಅವಕಾಶ ಕೋರಿ ಮನವಿ ಸಲ್ಲಿಸಿದ್ದರು. ಕಾನೂನುಇ ತಜ್ಞರಲ್ಲಿ ಮಾತುಕತೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ು ನಾಯಕರುಗಳಲ್ಲಿ ಹೇಳಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಮತ್ತೊಂದು ಮಹತ್ವದ ಬೆಳವಳಿಗೆಯಲ್ಲಿ ರಾಜ್ಯಪಾಲರು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ ಇದೀಗ ಬಿಜೆಪಿಗೆ ಸರ್ಕಾರ ರಚಿಸಲು ಅಧಿಕೃತವಾಗಿ ಆಹ್ವಾನ ನೀಡಿದ್ದಾರೆ. ಇದರಿಂದ ಬಿಜೆಪಿ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದೆ. ಅಲ್ಲದೆ ಇದರಿಂದ ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ.  ನಾಳೆ ಕೇವಲ ಯಡಿಯೂರಪ್ಪನವರು ಮಾತ್ರ ಪ್ರಮಾಣ ಸ್ವೀಕರಿಸಲಿದ್ದಾರೆ.  ಬಿಜೆಪಿ ಸರ್ಕಾರದ ಬಹುಮತ ಸಾಭೀತು ಪಡಿಸಲು 11 ದಿನಗಳ ಕಾಲಾವಕಾಶ ಇದೆ ಎನ್ನಲಾಗಿದೆ. ಬಹುಮತ ಸಾಬೀತು ಪಡಿಸಿದ ಸರ್ಕಾರ ಸಚಿವ ಸಂಪುಟವನ್ನು ವಿಸ್ತರಿಸಲಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.