Recent Posts

Monday, January 20, 2025
ಸುದ್ದಿ

ವಿಶ್ವ ಹಿಂದೂ ಪರಿಷತ್ ಬಜರಂಗದಳ, ದುರ್ಗಾವಾಹಿನಿ ಚಕ್ರಪಾಣಿ ಶಾಖೆ ಅತ್ತಾವರ , ಮಾರುತಿ ಸೇವಾ ಸಮಿತಿ ನೇತೃತ್ವದಲ್ಲಿ ಗೋಪೂಜೆ – ಕಹಳೆ ನ್ಯೂಸ್

ವಿಶ್ವ ಹಿಂದೂ ಪರಿಷತ್ ಬಜರಂಗದಳ, ದುರ್ಗಾವಾಹಿನಿ ಚಕ್ರಪಾಣಿ ಶಾಖೆ ಅತ್ತಾವರ ಹಾಗೂ ಮಾರುತಿ ಸೇವಾ ಸಮಿತಿ ನೇತೃತ್ವದಲ್ಲಿ ನಡೆದ ಗೋಪೂಜೆಯಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರು ಭಾಗವಹಿಸಿ ಪೂಜೆ ಸಲ್ಲಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಶ್ವಹಿಂದೂ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಶಿವಾನಂದ ಮೆಂಡನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಸೇವಾಪ್ರಮುಖ್ ಪ್ರವೀಣ್ ಕುತ್ತಾರ್ ,ಜಿಲ್ಲಾ ಸಂಚಾಲಕರಾದ ಪುನೀತ್ ಅತ್ತಾವರ, ಸಂಗಂ ಎಂಟರ್ಪ್ರೈಸಸ್ ಮಾಲಕ ರಾದ ಶ್ರೀ ಮನೋಜ್ ಕುಮಾರ್ , ವಿಶ್ವಹಿಂದೂ ಪರಿಷತ್ ಅತ್ತಾವರ ಶಾಖೆಯ ಅಧ್ಯಕ್ಷರಾದ ಮನೋಜ್ ಕುಮಾರ್ ಮತ್ತು ಕಾರ್ಯದರ್ಶಿ ರಜನೀಶ್ ಅತ್ತಾವರ ಮಹಿಳಾ ಕಾರ್ಯಕರ್ತೆ ಯಾದ ಆಶಾ ಬೋಪಣ್ಣ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಪ್ರಾಣಿದಾಯ ಹಿತಚಿಂತಕರಾದ ಶ್ರೀಮತಿ ಚೇತನ ಇವರನ್ನು ಗೌರವಿಸಲಾಯಿತು ಶ್ರೀಮತಿ ರಶ್ಮಿ ಸ್ವಾಗತಿಸಿದರು ವಿಜೇಶ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

ಶಾಸಕರಾದ ವೇದವ್ಯಾಸ ಕಾಮತ್ , ಸ್ಥಳಿಯ ಕಾರ್ಪೊರೇಟರ್ ಶೈಲೇಶ್ ಮತ್ತು ಭರತ್ ಕಾರ್ಯಕ್ರಮಕ್ಕೆ ಭೇಟಿನೀಡಿ ಗೋಪೂಜೆಯನ್ನು ಗೈದರು ನಂತರ ಅನೇಕ ಭಕ್ತರು ಗೋ ಪೂಜೆಯನ್ನು ಶ್ರದ್ದಾಭಕ್ತಿಯಿಂದ ನೆರವೇರಿಸಿದರು.