Recent Posts

Monday, January 20, 2025
ಕ್ರೈಮ್ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳದ ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ | ರಿಜ್ವಾನ್, ಅರ್ಕುಳದ ಮಹಮ್ಮದ್‌ ಖಾಸೀಂ, ಮತ್ತು ಅಜ್ಮಲ್‌ ಹುಸೈನ್‌ ಕಾಮುಕ ಜಿಹಾದಿಗಳು ಅಂದರ್..! – ಕಹಳೆ ನ್ಯೂಸ್

ಬಂಟ್ವಾಳ, ನ.06 : ಅಪ್ರಾಪ್ತ ಬಾಲಕಿ ಮೇಲೆ ವ್ಯಕ್ತಿಯೊಬ್ಬ ಲೈಂಗಿನ ದೌರ್ಜನ್ಯ ಎಸಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಮತ್ತು ಇಬ್ಬರು ಯುವಕರು ಸೇರಿ ಅದೇ ಬಾಲಕಿ ಮೇಲೆ ಗ್ಯಾಂಗ್ ರೇಪ್ ನಡೆಸಿರುವ ಬಗ್ಗೆ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಆಟೋ ಚಾಲಕ ರಿಜ್ವಾನ್, ಅರ್ಕುಳದ ಮಹಮ್ಮದ್‌ ಖಾಸೀಂ, ಮತ್ತು ಅಜ್ಮಲ್‌ ಹುಸೈನ್‌ ಅವರನ್ನು ಬಂಧಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನವೆಂಬರ್ 4 ರಂದು ಬಂಟ್ವಾಳ ತಾಲೂಕಿನ ಮಹಿಳೆಯೋರ್ವರು ಬಂಟ್ವಾಳ ಗ್ರಾಮಾಂತರ ಠಾಣೆಗೆ ಬಂದು ಅಪ್ರಾಪ್ತ ಬಾಲಕಿಯಾದ ತನ್ನ ಮಗಳಿಗೆ ಫರಂಗಿಪೇಟೆ ರಿಕ್ಷಾ ಚಾಲಕನು ಮೈ ಕೈ ಮುಟ್ಟಿ ಲೈಂಗಿಕ ಶೋಷಣೆ ಮಾಡಿದ್ದಾನೆ ಎಂದು ದೂರು ನೀಡಿದ್ದರು. ಅದರಂತೆ ಪೋಕ್ಸೋ ಆಕ್ಟ್‌ ರಂತೆ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ರಿಕ್ಷಾ ಚಾಲಕ ರಿಜ್ವಾನ್‌ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನವೆಂಬರ್ 5 ರಂದು ಅದೇ ಅಪ್ರಾಪ್ತ ಬಾಲಕಿಯು ತನ್ನ ತಾಯಿಯೊಂದಿಗೆ ಠಾಣೆಗೆ ಹಾಜರಾಗಿ ಸುಮಾರು 5 ತಿಂಗಳ ಹಿಂದೆ ಇಬ್ಬರು ಯುವಕರು ಪರಿಚಿತರಾಗಿ ತನ್ನನ್ನು ತಾವಿದ್ದಲ್ಲಿಗೆ ಕರೆಸಿಕೊಂಡು ತನ್ನ ಮೇಲೆ ಒಬ್ಬರಾದ ಮೇಲೇ ಇನ್ನೊಬ್ಬರು ಜೊತೆಯಲ್ಲಿ ಲೈಂಗಿಕ ಅತ್ಯಾಚಾರ ನಡೆಸಿ ಜೀವ ಬೆದರಿಕೆ ಒಡ್ಡಿರುವುದಾಗಿ ದೂರು ನೀಡಿದ್ದರು.

ಅದರಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ 6 ಪೋಕ್ಸೋ ಆಕ್ಟ್‌ ರಂತೆ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಾದ ಕೂಡಲೇ ಚುರುಕಾಗಿ ತನಿಖೆ ನಡೆಸಿದ ಪೊಲೀಸರು ಪೊಲೀಸ್‌ ಅಧೀಕ್ಷಕ ಋಷಿಕೇಶ್‌ ಸೋನವಾನೆ ಭಗವಾನ್‌, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಡಾ. ಶಿವಕುಮಾರ್‌ ಗುಣಾರೆ ರವರ ನಿರ್ಧೇಶನದಂತೆ ಬಂಟ್ವಾಳ ಉಪವಿಭಾಗಾಧಿಕಾರಿ ಶಿವಾಂಶು ರಜಪೂತ್‌ ಐ.ಪಿ.ಎಸ್‌ ರವರ ಸೂಚನೆಯಂತೆ ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ಟಿ.ಡಿ ನಾಗರಾಜ್‌,.ಪಿ.ಎಸ್‌.ಐ ಭಾರತಿ, ತರಭೇತಿ ಪಿ.ಎಸ್.ಐ ರಾಮಕೃಷ್ಣ, ವೀಣಾ ರಾಮಚಂದ್ರ, ಎ.ಎಸ್.ಐ ಬಾಲಕೃಷ್ಣ, ಸಿಬ್ಬಂದಿಯವರಾದ ಜನಾರ್ಧನ, ಸುರೇಶ್‌, ಪುನೀತ್‌, ಮನೋಜ್ ಕುಮಾರ್, ಲೋಲಾಕ್ಷಿ, ವಿಶಾಲಾಕ್ಷಿ ರವರುಗಳನ್ನೊಳಗೊಂಡ ತನಿಖಾ ತಂಡವು ಆರೋಪಿಗಳಾದ ಅರ್ಕುಳದ ಮಹಮ್ಮದ್‌ ಖಾಸೀಂ, ಮತ್ತು ಅಜ್ಮಲ್‌ ಹುಸೈನ್‌ ಎಂಬವರನ್ನು ಬಂಧಿಸಿದ್ದಾರೆ.