Recent Posts

Sunday, January 19, 2025
ಪುತ್ತೂರು

ಮೀನುಗಾರಿಕೆಗೆ ತೆರಳಿದ್ದ ವೇಳೆ ಮೊಗಪ್ಪೆ ಕೆರೆಯಲ್ಲಿ ಮುಳುಗಿ ಯುವಕ ಸಾವು – ಕಹಳೆ ನ್ಯೂಸ್

ಸುಳ್ಯ : ಬೆಳ್ಳಾರೆಯ ನೆತ್ತಾರು ಬಳಿಯ ಮೊಗಪ್ಪೆ ಕೆರೆಯಲ್ಲಿ ಮೀನುಗಾರಿಕೆಗೆ ತೆರಳುತ್ತಿದ್ದ ಯುವಕನೊಬ್ಬ ಜಲಸಮಾಧಿಯಾದ ದಾರುಣ ಘಟನೆ ನಡೆದಿದೆ.

ಪುತ್ತೂರು ತಾಲೂಕಿನ ಸಂಪ್ಯ ಮೂಲೆ ನಿವಾಸಿ ಸುಂದರ ಎಂಬವರ ಪುತ್ರ ಅವಿನಾಶ್ (23) ಮೃತ ದುರ್ದೈವಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಅವಿನಾಶ್ ತನ್ನ ಸ್ನೇಹಿತರೊಂದಿಗೆ ಮೀನು ಹಿಡಿಯುವ ಸಲುವಾಗಿ ಕೆರೆಗೆ ಇಳಿದಿದ್ದ ವೇಳೆ ನೀರಿನಲ್ಲಿ ಮುಳುಗಿ ಕೊಚ್ಚಿಕೊಂಡು ಹೋಗಿದ್ದಾನೆ.
ಘಟನಾ ಸ್ಥಳಕ್ಕೆ ಆಗಮಿಸಿದ ಪುತ್ತೂರು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಶೋಧ ಕಾರ್ಯ ಆರಂಭಿಸಿ ಅವಿನಾಶ್ ಅವರ ಮೃತದೇಹವನ್ನು ಕೆರೆಯಿಂದ ಹೊರ ತೆಗೆದಿದ್ದು, ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು