Recent Posts

Sunday, January 19, 2025
ದಕ್ಷಿಣ ಕನ್ನಡಸುದ್ದಿ

ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದಲ್ಲಿ 40 ವರ್ಷ ಹಳೆಯ ಐದು ಗ್ರೆನೇಡ್ ಪತ್ತೆ ; ಅನುಮಾನ ಮೂಡಿಸಿದೆ ನಿವೃತ್ತ ಸೈನಿಕನ ಮನೆಯ ಪಕ್ಕದಲ್ಲೇ ಪತ್ತೆಯಾದ ಹಿನ್ನೆಲೆ…!? – ಕಹಳೆ ನ್ಯೂಸ್

ಬೆಳ್ತಂಗಡಿ ನವೆಂಬರ್ 07: ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದಲ್ಲಿ ಐದು ಗ್ರೆನೇಡ್ ಪತ್ತೆಯಾಗಿದ್ದು, ನಿವೃತ್ತ ಸೈನಿಕ ಜೆ.ಕೆ. ಪೂಜಾರಿಯವರ ಮನೆಯ ಪಕ್ಕದಲ್ಲೇ  ಪತ್ತೆಯಾಗಿದ್ದು, ಕುದ್ದು ಅವರೇ ಪೊಲೀಸರ ಗಮನಕ್ಕೆ ತಂದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇಳಂತಿಲ ಗ್ರಾಮದ ನಿವಾಸಿ ಜಯಕುಮಾರ್ ನಿವೃತ್ತ ಯೋಧರಾಗಿದ್ದು ಶನಿವಾರ ಸಂಜೆ 6 ಗಂಟೆ ವೇಳೆಗೆ ಉಪ್ಪಿನಂಗಡಿಯಿಂದ ತನ್ನ ಮನೆಗೆ ನಡೆದುಕೊಂಡು ತೆರಳುತ್ತಿದ್ದಾಗ ಗುಡ್ಡದ ಇಳಿಜಾರಿನಲ್ಲಿ ಗ್ರೆನೇಡ್ ಮಾದರಿಯ ಸ್ಫೋಟಕ ವಸ್ತು ಕಂಡು ಬಂದಿದೆ. ಅದರಲ್ಲಿ ಹಳದಿ ಬಣ್ಣದ ಪ್ಲಾಸ್ಟಿಕ್ ಕವರಿನಲ್ಲಿ ಒಂದು ಗ್ರೆನೇಡ್ ಇದ್ದು ಇತರ ನಾಲ್ಕು ಗ್ರೆನೇಡ್ ಗಳು ಸ್ಥಳದಲ್ಲೆ ಬಿದ್ದಿತ್ತು, ಜಯಕುಮಾರ್ ಭಾರತೀಯ ಸೇನೆಯ ಭೂ ಸೇನಾ ರೆಜಿಮೆಂಟಿನಲ್ಲಿ ಎಸ್ ಸಿ ಓ ಆಗಿ ನಿವೃತ್ತಿ ಹೊಂದಿದ್ದು ಆ ವಸ್ತುಗಳನ್ನು ನೋಡಿ ಗ್ರೆನೇಡ್ ಎಂಬುದನ್ನು ಕಂಡು ಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಾರ್ವಜನಿಕರಿಗೆ ಅಪಾಯ ಆಗುವುದನ್ನು ಅರಿತ ಜಯಕುಮಾರ್, ಅವುಗಳನ್ನು ತನ್ನ ಮನೆಯ ಅಂಗಳದ ಮೂಲೆಯಲ್ಲಿಟ್ಟು ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಸುಮಾರು 40 ವರ್ಷ ಹಳೆಯ ಕಾಲದ ಗ್ರೆನೇಡ್ ಎಂಬ ಬಗ್ಗೆ ‌ಮಾಹಿತಿ ಇದ್ದು, ಸೇನೆಯಲ್ಲಿ ಬಳಸುತ್ತಿದ್ದ ಗ್ರೆನೇಡ್ ಇಲ್ಲಿ ಹೇಗೆ ಬಂತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು