Thursday, January 23, 2025
ಪುತ್ತೂರು

ಪುತ್ತೂರಿನ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ : ರಾಜು ಹೊಸ್ಮಠ ವಿರುದ್ಧ ದೂರು ದಾಖಲು- ಕಹಳೆ ನ್ಯೂಸ್

ಪುತ್ತೂರು : ಅಪ್ರಾಪ್ತ ಬಾಲಕಿಗೆ ವ್ಯಕ್ತಿಯೋರ್ವರು ಲೈಂಗಿಕ ಕಿರುಕುಳ ನೀಡಿದ್ದು, ಈ ಬಗ್ಗೆ ಠಾಣೆಗೆ ದೂರು ನೀಡಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

2019ರಲ್ಲಿ ಅಪ್ರಾಪ್ತ ಬಾಲಕಿ ಮತ್ತು ಆಕೆಯ ತಂಗಿ,ತಂದೆಯೊಂದಿಗೆ ರಾಜು ಹೊಸ್ಮಠರವರ ಕಚೇರಿಗೆ ತೆರಳಿದ್ದರು. ಈ ವೇಳೆ ಅಪ್ರಾಪ್ತ ಬಾಲಕಿಗೆ ರಾಜು ಹೊಸ್ಮಠರವರ ಪರಿಚಯವಾಗಿದೆ. ಈ ಘಟನೆ ನಡೆದು ಕೆಲ ದಿನಗಳ ಕಳೆದ ಬಳಿಕ ಮತ್ತೊಂದು ದಿನ ರಾಜು ಹೊಸ್ಮಠರವರ ಕಚೇರಿಯಲ್ಲಿ ಅಪ್ರಾಪ್ತ ಬಾಲಕಿ ಮತ್ತು ಆಕೆಯ ತಂಗಿಯನ್ನು ಅವರ ತಂದೆ ಬಿಟ್ಟು ಹೋಗಿದ್ದರು. ಈ ಸಂದರ್ಭದಲ್ಲಿ ರಾಜು ಹೊಸ್ಮಠ ಅವರು, ಅಪ್ರಾಪ್ತ ಬಾಲಕಿಯ ತಂಗಿಯನ್ನು ಮತ್ತು ಇನ್ನೊಂದು ಬಾಲಕಿಯನ್ನು ತಿಂಡಿ ತರುವ ನೆಪವೊಡ್ಡಿ ಹೊರಗಡೆ ಕಳಿಸಿದ್ದಾರೆ. ಬಳಿಕ ರಾಜು ಹೊಸ್ಮಠ ಅಪ್ರಾಪ್ತ ಬಾಲಕಿಯನ್ನು ತನ್ನ ಬಳಿ ಕರೆದು ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ಹೇಳಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅಪ್ರಾಪ್ತ ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.
ಈ ಬಗ್ಗೆ ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆಯಲಿ ಪೋಸ್ಕೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು