Monday, January 20, 2025
ಸುದ್ದಿ

ಮಂಗಳೂರು ಮಹಾನಗರ ಪಾಲಿಕೆಯ ಮುಗ್ರೋಡಿ ಬಳಿ ಕಾಲುಸಂಕ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ವೇದವ್ಯಾಸ್ ಕಾಮತ್- ಕಹಳೆ ನ್ಯೂಸ್

ಮಂಗಳೂರು ಮಹಾನಗರ ಪಾಲಿಕೆಯ ಪದವು ಪಶ್ಚಿಮ ವಾರ್ಡಿನ ಮುಗ್ರೋಡಿ ಬಳಿ ಕಾಲುಸಂಕ ನಿರ್ಮಾಣ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಶಾಸಕರು, ಮುಗ್ರೋಡಿಯಲ್ಲಿ ಕಾಲುಸಂಕ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ಕಾಲುಸಂಕ ನಿರ್ಮಾಣದ ವೇಳೆ ಸಾರ್ವಜನಿಕರಿಗೆ ಸಂಚಾರಕ್ಕೆ ತೊಡಕು ಉಂಟಾಗಬಹುದು. ಆದರೆ ಅಭಿವೃದ್ಧಿಯ ದೃಷ್ಟಿಯಿಂದ ಸಹಕರಿಸಬೇಕೆಂದು ಮನವಿ ಮಾಡಿಕೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಸ್ಥಳೀಯ ಕಾಪೆರ್Çೀರೇಟರ್ ವನಿತ ಪ್ರಸಾದ್, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಕತ್ತಲ್ ಸಾರ್, ಬಿಜೆಪಿ ಮುಖಂಡರಾದ ಅಜಯ್ ಕುಲಶೇಖರ, ಪ್ರಸಾದ್ ಆಚಾರ್ಯ, ರವಿಚಂದ್ರ, ವಸಂತ್ ಜೆ ಪೂಜಾರಿ, ಸುಮನ, ಶುಭಕರ್, ಪ್ರಸಾದ್, ಗೋಪಾಲ್,ಶ್ರೀನಿವಾಸ್, ಮೋಹನ್, ಮಿತೇಶ್, ಪ್ರಸಾದ್ ಟಿ, ಪದ್ಮನಾಭ, ಪವನ್, ರಂಜಿತ್, ಹರಿಯಪ್ಪ, ಸುರೇಶ, ಮೋಹಿನಿ, ಸಿಲ್ಲಿ, ಸುನಂದ, ಪ್ರೀತಿ, ಮಲ್ಲಪ್ಪ, ಶೇಖರ್ ಮುಂತಾದವರು ಉಪಸ್ಥಿತರಿದ್ದರು