Recent Posts

Sunday, January 19, 2025
ಸುದ್ದಿ

ಶಾಲಾ ಮೇಲುಸ್ತುವಾರಿ ಮತ್ತು ಅಭಿವೃದ್ಧಿ ಸಮಿತಿ ರಚನೆ ಕಾರ್ಯಕ್ರಮ – ಕಹಳೆನ್ಯೂಸ್

ಮೈರೋಳ್ತಡ್ಕ : ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಮೈರೋಳ್ತಡ್ಕ ಬಂದಾರು ಇಲ್ಲಿನ ನೂತನ ಶಾಲಾ ಮೇಲುಸ್ತುವಾರಿ ಮತ್ತು ಅಭಿವೃದ್ಧಿ ಸಮಿತಿಯನ್ನು ಮಕ್ಕಳ ಪೋಷಕರ ಸಭೆಯಲ್ಲಿ ರಚಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಎಸ್.ಡಿ.ಎಮ್.ಸಿಯ ನೂತನ ಅಧ್ಯಕ್ಷರಾಗಿ ದಿನೇಶ್ ಗೌಡ ಖಂಡಿಗ, ಉಪಾಧ್ಯಕ್ಷರಾಗಿ ಹರಿಣಾಕ್ಷಿ.ಎನ್. ನಡುಮಜಲು ಮತ್ತು ಸದಸ್ಯರಾಗಿ ಶ್ರೀಧರ ಗೌಡ ಕುಂಬುಡಂಗೆ, ಕೇಶವ ಗೌಡ ಕೆದಿಲ, ಗುರುಪ್ರಸಾದ್ ಕುರಾಯ, ರಾಮಣ್ಣ ಗೌಡ ಕುರಾಯ, ಪ್ರಶಾಂತ್ ನಿಶ್ ಮುಡ, ನೆಬಿಸಮ್ಮ ಅಂಡೆಕೇರಿ, ಅಬ್ಬಾಸ್ ಅಂಡೆಕೇರಿ, ಇಬ್ರಾಹಿಂ ಅಂಡೆಕೇರಿ, ಸೀತಮ್ಮ ಕುರಾಯ, ಜಯಂತಿ, ರಮೇಶ, ಕವಿತ, ಲತಾ, ಮೋಹಿನಿ, ಜ್ಯೋತಿಲಕ್ಷ್ಮೀ ಮತ್ತು ಪ್ರಮೀಳ ಆಯ್ಕೆಯಾದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ಸಂದರ್ಭದಲ್ಲಿ ರಿಷಿ ಪ್ರತಿಷ್ಠಾನ ಬೆಳ್ತಂಗಡಿ (ರಿ) ವತಿಯಿಂದ ನೀಡಲಾಗಿದ್ದ ಗಿಡಗಳನ್ನು ಬೆಳೆಸಿ ಮರಗಳನ್ನಾಗಿಸಿ ಸಲಹುತ್ತಿರುವ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವು ನಡೆಯಿತು.


ಕಾರ್ಯಕ್ರಮದಲ್ಲಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪರಮೇಶ್ವರಿ ಸಭೆಯ ಅಧ್ಯಕ್ಷತೆ ವಹಿಸಿಕೊಂಡು ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಶಾಲಾ ಮುಖ್ಯೋಪಾಧ್ಯಾಯರಾದ ಚಂದ್ರಾವತಿ ಕೆ. ಸ್ವಾಗತಿಸಿ, ಪ್ರಾಸ್ತವಿಕ ಮಾತನ್ನಾಡಿದರು. ಸಹ ಶಿಕ್ಷಕ ಮಾಧವ ಕಾರ್ಯಕ್ರಮ ನಿರೂಪಿಸಿದರು.