Recent Posts

Sunday, January 19, 2025
ಕಡಬ

ಕಡಬ: ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ಹಿಂಬಾಲಿಸಿದ ಅಪರಿಚಿತ ವ್ಯಕ್ತಿ- ಕಹಳೆ ನ್ಯೂಸ್

ಕಡಬ: ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ವಿದ್ಯಾರ್ಥಿನಿಯನ್ನು ಹಿಂಬಾಲಿಸಿದ ಘಟನೆ ಕೊಡಿಂಬಳ ಗ್ರಾಮದ ಮಡ್ಯಡ್ಕ ಸಮೀಪ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಡಬ ಸರಸ್ವತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಕೋಡಿಂಬಾಳದಿಂದ ಮಡ್ಯಡ್ಕ ರಸ್ತೆಯಲ್ಲಿ ಶಾಲೆ ಬಿಟ್ಟು ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಉಂಡಿಲ ಕ್ರಾಸ್ ನಲ್ಲಿ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ಕಾರನ್ನು ಹಠಾತ್ತನೆ ನಿಲ್ಲಿಸಿ ಬಾಲಕಿಯತ್ತ ಬಂದಿದ್ದ, ಬಾಲಕಿ ಹೆದರಿ ಓಡಲಾರಂಭಿಸಿದ್ದಾಳೆ. ಆದರೂ ಅಪರಿಚಿತ ವ್ಯಕ್ತಿ ಸ್ವಲ್ಪ ದೂರ ಆಕೆಯನ್ನು ಹಿಂಬಾಲಿಸಿಕೊಂಡು ಬಂದನ್ನಲ್ಲದೆ ಕಲ್ಲನ್ನು ಎಸೆಯಲು ಪ್ರಯತ್ನಿಸಿದ್ದ ಆ ಬಳಿಕ ಕಾರು ಹತ್ತಿ ಹಿಂದುರುಗಿ ಹೋಗಿದ್ದಾನೆ ಎಂದು ಬಾಲಕಿ ವಿವರಿಸಿದ್ದಾಳೆ. ಈ ಕುರಿತು ಬಾಲಕಿ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು