Recent Posts

Monday, January 20, 2025
ಸುದ್ದಿ

ಮಂಗಳೂರಿನಲ್ಲಿ ಅದ್ದೂರಿಯಾಗಿ ನೆರವೇರಿದ ಆಭರಣ್ ಜ್ಯುವೆಲ್ಲರ್ಸ್ ಮಿಸ್ಟರ್ ಅಂಡ್ ಮಿಸ್ ಜಿಎಸ್‍ಬಿ, ಆದರ್ಶ ದಂಪತಿ ಗ್ರಾಂಡ್ ಫಿನಾಲೆ – ಕಹಳೆ ನ್ಯೂಸ್

ಮಂಗಳೂರು: ಯೂತ್ ಆಫ್ ಜಿಎಸ್ ಬಿ ಆಯೋಜಿಸಿದ ಆಭರಣ್ ಜ್ಯುವೆಲ್ಲರ್ಸ್ ಮಿಸ್ಟರ್ ಅಂಡ್ ಮಿಸ್ ಜಿಎಸ್ ಬಿ, ಆದರ್ಶ ದಂಪತಿ ಕಾರ್ಯಕ್ರಮದ ಗ್ರಾಂಡ್ ಫಿನಾಲೆ ಮಂಗಳೂರಿನ ಟಿಎಂಎ ಪೈ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.

ಟ್ಯಾಲೆಂಟ್ ರೌಂಡ್, ತೀರ್ಪುಗಾರರ ಪ್ರಶ್ನಾ ಸುತ್ತು ಸಹಿತ ವಿವಿಧ ಸುತ್ತುಗಳಲ್ಲಿ ವಿಜೇತರಾದ ಸ್ಪರ್ಧಿಗಳಲ್ಲಿ ಮಿಸ್ ಅಂಡ್ ಮಿಸ್ಟರ್ ಪ್ರಶಸ್ತಿ ಗೆದ್ದವರಿಗೆ ಐಫೋನ್ ಬಹುಮಾನವಾಗಿ ನೀಡಲಾಯಿತು. ಆದರ್ಶ ದಂಪತಿ ವಿಜೇತರಿಗೆ 10 ದಿನಗಳ ಕಾಶ್ಮೀರ ಪ್ರವಾಸದ ಆನಂದ ದೊರೆಯಲಿದೆ. ವಿಜೇತರಿಗೆ ಮತ್ತು ರನ್ನರ್ ಅಪ್ ಸ್ಪರ್ಧಿಗಳಿಗೆ ಬ್ರಹ್ಮಾವರದ ಸತ್ಯನಾಥ ಸ್ಟೋರ್ ಹಾಗೂ ಆಭರಣ್ ಜ್ಯುವೆಲ್ಲರ್ಸ್ ವತಿಯಿಂದ ಗಿಫ್ಟ್ ವೋಚರ್, ಹ್ಯಾಂಗ್ಯೋ, ವಿವೇಕ್ ಟ್ರೇಡರ್ಸ್, ಮಹಾಮಾಯಾ ಟ್ರೇಡರ್ಸ್ ವತಿಯಿಂದ ಆಕರ್ಷಕ ಬಹುಮಾನ ನೀಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಿಸ್ಟರ್ ಜಿಎಸ್ ಬಿಯಾಗಿ ನಿತಿನ್ ಕಾಮತ್, ಮೊದಲ ರನ್ನರ್ ಅಪ್ ಆಗಿ ವೈಷ್ಣವ್ ಶೆಣೈ, ಎರಡನೇ ರನ್ನರ್ ಅಪ್ ಆಗಿ ಶ್ರೀಶಾ ಭಟ್, ಮಿಸ್ ಜಿಎಸ್ ಬಿಯಾಗಿ ವಾಸವಿ, ಮೊದಲ ರನ್ನರ್ ಅಪ್ ಆಗಿ ಗ್ರೀಷ್ಮಾ, ಎರಡನೇ ರನ್ನರ್ ಅಪ್ ಆಗಿ ಸನ್ನಿಧಿ ಆಯ್ಕೆಯಾದರು.

ಜಾಹೀರಾತು
ಜಾಹೀರಾತು
ಜಾಹೀರಾತು

   

ಆದರ್ಶ ದಂಪತಿ ವಿಜೇತರಾಗಿ ಬೆಂಗಳೂರಿನ ಸತೀಶ್ ನಾಯಕ್-ಸ್ನೇಹಾ ನಾಯಕ್, ಮೊದಲ ರನ್ನರ್ ಅಪ್ ಆಗಿ ಮೂಲ್ಕಿಯ ಪ್ರಮೋದ್ ಭಟ್- ಪ್ರಜ್ಞಾ ಭಟ್, ಎರಡನೇ ರನ್ನರ್ ಅಪ್ ಆಗಿ ಮಂಗಳೂರಿನ ವಿಷ್ಣುಮೂರ್ತಿ ಕಾಮತ್-ಅಮಿತಾ ಕಾಮತ್ ಆಯ್ಕೆಯಾದರು.

ಈ ಅಂತಿಮ ಸ್ಪರ್ಧಾಕಣದ ಪೂರ್ವಭಾವಿಯಾಗಿ ನಡೆದ ವಿವಿಧ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ವಿಂದ್ಯಾ ಪೈ, ಪ್ರೀತಂ ಕಾಮತ್, ಸುಮತಾ ನಾಯಕ್, ಪ್ರತೀಕ್ಷಾ, ಶ್ರೇಯಾ ಭಕ್ತ, ಸುರೇಶ್ ಕಾಮತ್ ಸಹಕರಿಸಿದರು.

ಎರಡೂ ದಿನವೂ ಆಗಮಿಸಿದ ಎಲ್ಲಾ ಅತಿಥಿಗಳಿಗೆ ಹ್ಯಾಂಗ್ಯೋ ಉತ್ಪನ್ನಗಳು, ಉತ್ತರ ಭಾರತ ಶೈಲಿಯ ಊಟೋಪಚಾರ ಹಾಗೂ ವಿವಿಧ ಪಾನೀಯ, ಖಾದ್ಯಗಳನ್ನು ಉಣಬಡಿಸಲಾಯಿತು.

ಕಾರ್ಯಕ್ರಮದ ಮುಖ್ಯ ಪ್ರಾಯೋಜಕರಾದ ಆಭರಣ್ ಜ್ಯುವೆಲ್ಲರ್ಸ್ ಇದರ ಮುಖ್ಯಸ್ಥರಾದ ಸುಭಾಷ್ ಕಾಮತ್, ಸಂಧ್ಯಾ ಕಾಮತ್, ಮಹೇಶ್ ಕಾಮತ್, ವೀಣಾ ಕಾಮತ್, ಸಾತ್ವಿಕ್ ಕಾಮತ್, ಆಕಾಶ್ ಕಾಮತ್ ಯೂತ್ ಆಫ್ ಜಿಎಸ್ ಬಿ ಸಂಚಾಲಕರಾದ ಮಂಗಲ್ಪಾಡಿ ನರೇಶ್ ಶೆಣೈ, ನರೇಶ್ ಪ್ರಭು, ಚೇತನ್ ಕಾಮತ್, ಅಂಜನಾ ಕಾಮತ್, ಅರ್ಚನಾ ಬಾಳಿಗಾ, ಕಿರಣ್ ಶೆಣೈ, ನಿವೇದಿತಾ ಪ್ರಭು, ಸಂದೇಶ್ ಕಾಮತ್ ಹಾಗೂ ಗಣ್ಯರು ಉಪಸ್ಥಿತರಿದ್ದರು. ವರ್ಷಾ ಭಂಡಾರಕಾರ್ ಕಾಮತ್ ಹಾಗೂ ಅಮೃತಾ ನಾಯಕ್ ನಿರೂಪಿಸಿದರು.