Recent Posts

Monday, January 20, 2025
ಸುದ್ದಿ

ಮರೋಳಿ ವಾರ್ಡಿನ ಬಜ್ಜೋಡಿಯಲ್ಲಿ ಆರ್.ಸಿ.ಸಿ ತಡೆಗೋಡೆ ರಚನೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ವೇದವ್ಯಾಸ್ ಕಾಮತ್- ಕಹಳೆ ನ್ಯೂಸ್

ಮಂಗಳೂರು: ಮರೋಳಿ ವಾರ್ಡಿನ ಬಜ್ಜೋಡಿಯಲ್ಲಿ ಆರ್.ಸಿ.ಸಿ ತಡೆಗೋಡೆ ರಚನೆ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, ಬಜ್ಜೋಡಿ ವ್ಯಾಯಾಮ ಶಾಲೆಯ ಬಳಿ ತಡೆಗೋಡೆ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆಯಾಗಿದೆ. ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಸಾರ್ವಜನಿಕರ ಸಹಕಾರದೊಂದಿಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಸ್ಥಳೀಯ ಕಾರ್ಪೋರೇಟರ್ ಕೇಶವ ಮರೋಳಿ, ಬಿಜೆಪಿ ಮುಖಂಡರಾದ ಅಜಯ್ ಕುಲಶೇಖರ, ಕಿರಣ್ ಮರೋಳಿ,ರಾಜೇಶ್, ಪ್ರಶಾಂತ್ ಮರೋಳಿ, ಸತೀಶ್, ಜಗದೀಶ್ ಶೆಣೈ, ವಸಂತ್ ಜೆ ಪೂಜಾರಿ, ಬಾಲಕೃಷ್ಣ ಸುವರ್ಣ,ಸರಳ, ಅರುಣ್ ಶೆಟ್ಟಿ, ಶ್ರವಣ್, ವಿನೀತ್ ಶೆಟ್ಟಿ, ಪ್ರದೀಪ್, ಅನಿತಾ, ಮಂದಿರದ ಅಧ್ಯಕ್ಷರಾದ ಸತೀಶ್,ಸ್ಥಳೀಯರಾದ ಯಶವಂತ್, ಪುರುಷೋತ್ತಮ್, ಸೋಮಶೇಖರ್, ಸಂತೋಷ್, ರವೀಂದ್ರ, ಗಣೇಶ್, ಸಚಿನ್, ಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.