Recent Posts

Sunday, January 19, 2025
ಸುದ್ದಿ

ಬಂಟ್ವಾಳ ಹಾಗೂ ಮಂಗಳೂರು ತಾಲೂಕುಗಳನ್ನು ಸಂಪರ್ಕಿಸುವ ಮೂಲರಪಟ್ಣ ಸೇತುವೆ ಇಂದಿನಿಂದ ಸಂಚಾರಕ್ಕೆ ಮುಕ್ತ- ಕಹಳೆ ನ್ಯೂಸ್

ಬಂಟ್ವಾಳ: ಮೂರು ವರ್ಷಗಳ ಹಿಂದೆ ಮಳೆಗಾಲದಲ್ಲಿ ಮುರಿದು ಹೋಗಿದ್ದ ಬಂಟ್ವಾಳ ಹಾಗೂ ಮಂಗಳೂರು ತಾಲೂಕುಗಳನ್ನು ಸಂಪರ್ಕಿಸುವ ಮೂಲರಪಟ್ಣ ಸೇತುವೆಯ ಮರು ನಿರ್ಮಾಣ ಮಾಡಲಾಗಿದ್ದು, ನ.12 ರಂದು ನೂತನ ಸೇತುವೆಯನ್ನು ಊರಿನ ಹಿರಿಯರು ತೆಂಗಿನಕಾಯಿ ಒಡೆಯುವ ಮೂಲಕ ಲೋಕಾರ್ಪಣೆ ಮಾಡಿ ಸಂಚಾರಕ್ಕೆ ಮುಕ್ತಗೊಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹಾಗೂ ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ವೈ ಸೇತುವೆಯಲ್ಲಿ ಊರಿನ ಪ್ರಮುಖರ ಜತೆ ಸಾಗಿ ಪರಿಶೀಲಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

2018 ರ ಜೂನ್ 25 ರಂದು ಸಂಜೆ ಏಕಾಏಕಿ ಮುರಿದುಬಿದ್ದ ಮೂಲರಪಟ್ಣ ಸೇತುವೆ ಪ್ರಸ್ತುತ ಅದೇ ಸ್ಥಳದಲ್ಲಿ ನಿರ್ಮಾಣಗೊಂಡಿದ್ದು, ಸುಮಾರು 13.90 ಕೋ.ರೂ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣಗೊಂಡಿದೆ. ಸೇತುವೆಯು ಒಟ್ಟು 10ಮೀ. ಅಗಲ 178.8 ಮೀಟರ್ ಉದ್ದವಿದೆ.

ಈ ವೇಳೆ ಸೇತುವೆ ನಿರ್ಮಾಣ ಸಂಸ್ಥೆ ಕಾವೂರು ಮುಗ್ರೋಡಿ ಕನ್ ಸ್ಟ್ರಕ್ಷನ್ಸ್ ಮಾಲಕ ಸುಧಾಕರ ಶೆಟ್ಟಿ ಮುಗ್ರೋಡಿ, ದಾಮೋದರ್, ಅರಳ ಗ್ರಾ.ಪಂ.ಅಧ್ಯಕ್ಷ ಲಕ್ಷ್ಮೀಧರ ಶೆಟ್ಟಿ, ಉಪಾಧ್ಯಕ್ಷೆ ಪ್ರೇಮಾ, ಮುತ್ತೂರು ಗ್ರಾ.ಪಂ.ಅಧ್ಯಕ್ಷ ಸತೀಶ್ ಬೊಳ್ಳಾಜೆ, ಗಂಜಿಮಠ ಗ್ರಾ.ಪಂ.ಅಧ್ಯಕ್ಷ ನೋಣಯ್ಯ ಕೋಟ್ಯಾನ್, ತೆಂಕ ಎಡಪದವು ಗ್ರಾ.ಪಂ.ಅಧ್ಯಕ್ಷ ಸುಕುಮಾರ್ ದೇವಾಡಿಗ, ತಾ.ಪಂ.ಮಾಜಿ ಸದಸ್ಯ ನಾಗೇಶ್ ಶೆಟ್ಟಿ, ಬಡಗಬೆಳ್ಳೂರು ಗ್ರಾ.ಪಂ.ಪ್ರಕಾಶ್ ಆಳ್ವ, ಸದಸ್ಯರಾದ ಪ್ರಸಾದ್ ಕುಮಾರ್, ಪ್ರವೀಣ್ ಗುಂಡ್ಯ, ತಾರಾನಾಥ್ ಕುಲಾಲ್, ಜಗದೀಶ್ ಪೂಜಾರಿ, ಪುಷ್ಪಾ ನಾಯ್ಕ್, ಮಾಲಾತಿ, ಪ್ರವೀಣ್ ಆಳ್ವ, ರುಕ್ಮಿಣಿ, ವನಿತಾ, ಶಶಿಕಲಾ, ತೋಮಸ್ ಲೋಬೊ, ಪುಷ್ಪಾ , ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ, ಪ್ರಮುಖರಾದ ಪ್ರಸನ್ನ ಕುಮಾರ್ ಶೆಟ್ಟಿ, ನಳಿನಿ ನಾಯ್ಕ, ಎಂ.ಬಿ.ಆಶ್ರಫ್, ಸುದರ್ಶನ್ ಜೈನ್, ನಂದರಾಮ ರೈ, ಸುದರ್ಶನ್ ಬಜ, ಮಹಮ್ಮದ್ ಸಾಲಿ, ಗಣೇಶ್ ರೈ, ರಮನಾಥ ರಾಯಿ, ಸುಪ್ರೀತ್ ಆಳ್ವ, ಕಾರ್ತಿಕ್ ಬಳ್ಳಾಲ್, ಅಶ್ವತ್ ರಾವ್ ಬಾಳಿಕೆ, ಯಶೋಧರ ಕರ್ಬೆಟ್ಟು, ಉಮೇಶ್ ಡಿ.ಎಂ, ಉಮೇಶ್ ಅರಳ, ಜಗದೀಶ್ ಆಳ್ವ ಅರಳ ಮುಂತಾದವರಿದ್ದರು.