Recent Posts

Sunday, January 19, 2025
ಸುದ್ದಿ

ಮಂಗಳೂರಿನ ಕಂಕನಾಡಿ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಮೃತದೇಹ ಪತ್ತೆ- ಕಹಳೆ ನ್ಯೂಸ್

ಮಂಗಳೂರು: ಕಂಕನಾಡಿ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 44 ವರ್ಷದ ವ್ಯಕ್ತಿಯೊಬ್ಬರ ಮೃತದೇಹ ನ.12ರಂದು ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಪ್ರಶಾಂತ್ ಕೊಟ್ಟಾರಿ ಎಂದು ಗುರುತಿಸಲಾಗಿದ್ದು, ಬರ್ಕೆ ಠಾಣೆ ವ್ಯಾಪ್ತಿಯ ಮಣ್ಣಗುಡ್ಡೆಯಲ್ಲಿ ವಾಸವಿದ್ದರು ಎಂದು ತಿಳಿದು ಬಂದಿದೆ. ಗುರುವಾರ ರಾತ್ರಿಯಿಂದ ಇಂದು ಮಧ್ಯಾಹ್ನದವರೆಗೆ ಕಾರು ಅದೇ ಸ್ಥಳದಲ್ಲಿ ನಿಂತಿರುವುದರಿಂದ ಅನುಮಾನಗೊಂಡು ಸಾರ್ವಜನಿಕರು ಪರಿಶೀಲಿಸಿದಾಗ ಕಾರಿನೊಳಗೆ ವ್ಯಕ್ತಿಯೊಬ್ಬರು ಬಿದ್ದಿರುವುದು ಕಂಡುಬಂದಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಸಾವಿಗೆ ಕಾರಣ ಇನ್ನೂ ಖಚಿತವಾಗಿಲ್ಲ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು