Recent Posts

Monday, January 20, 2025
ದಕ್ಷಿಣ ಕನ್ನಡಸಿನಿಮಾಸುದ್ದಿ

ನಾಳೆ ( ನ.13 ) ಬಹು ನಿರೀಕ್ಷಿತ ಅರ್ಜುನ್ ಕಾಪಿಕಾಡ್ ಅವರ ” ಅಬತರ ” ತುಳು ಚಲನಚಿತ್ರದ ಆಡಿಯೋ ಲಾಂಚ್ – ಕಹಳೆ ನ್ಯೂಸ್

ಮಂಗಳೂರು : ಬೊಳ್ಳಿ ಮೂವೀಸ್ ಅವರ ಬ್ಯಾನರ್ ನ ಅಡಿಯಲ್ಲಿ ಅವಿಕಾ ಪ್ರೊಡಕ್ಷನ್ಸ್ ನವರ ದೇವದಾಸ್ ಕಾಪಿಕಾಡ್ಸ್ ” ಅಬತರ ” ತುಳು ಚಲನಚಿತ್ರ ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿದ್ದು, ನಾಳೆ ನವೆಂಬರ್ 13 ರಂದು ಚಿತ್ರದ ಆಡಿಯೋ ರಿಲೀಸ್ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಾಳೆ ಸಂಜೆ 5.00 ಗಂಟೆಗೆ ಫಾರಂ ಮಾಲ್ ನ ಮೂರನೇ ಮಹಡಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ನಟ ಅರ್ಜುನ್ ಕಾಪಿಕಾಡ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ದೇವದಾಸ್ ಕಾಪಿಕಾಡ್ ಕಥೆ – ಚಿತ್ರಕಥೆ – ಸಂಭಾಷಣೆ ಹಾಗೂ ಸಾಹಿತ್ಯ ರಚಿಸಿದ್ದು, ಚಿತ್ರದಲ್ಲಿ ದೊಡ್ಡ ತಾರಗಣವಿದೆ.
ಅರವಿಂದ ಬೋಳಾರ್, ಬೋಜರಾಜ್ ವಾಮಂಜೂರು, ಸಾಯಿ ಕೃಷ್ಣ, ಗಾನಾ ಭಟ್ ಸೇರಿದಂತೆ ಅನೇಕರು ಬಣ್ಣ ಹಚ್ಚಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಒಟ್ಟಿನಲ್ಲಿ ಈ ಕುರಿತು ಕಹಳೆ ನ್ಯೂಸ್ ನ ಸಿನಿ ಕಹಳೆಗೆ ಮಾಹಿತಿ ನೀಡಿದ ನಟ, ನಿರ್ದೇಶಕ ಅರ್ಜುನ್ ಕಾಪಿಕಾಡ್ ಸಮಸ್ತ ತುಳುನಾಡಿನ ಅಭಿಮಾನಿಗಳನ್ನು ಆಡಿಯೋ ಲಾಂಚ್ ಗೆ ಆಹ್ವಾನಿಸಿದ್ದಾರೆ.