ಮಂಗಳೂರು : ರಥಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನಕ್ಕೆ ನೂತನ ಧ್ವಜ ಮರವು ಚಿಕ್ಕಮಗಳೂರು ಜಿಲ್ಲೆಯ ಅಲ್ದೂರು, ಕಣತಿಯಿಂದ ನ.13 ರ ಬೆಳಿಗ್ಗೆ ಹೊರಟು ಜಯಪುರ, ಶೃಂಗೇರಿ, ಕೆರೆಕಾಡು, ಎಸ್. ಕೆ. ಬಾರ್ಡರ್, ಬಜಗೋಳಿ, ಕಾರ್ಕಳ, ಪಡುಬಿದ್ರೆ, ಮೂಲ್ಕಿ, ಹಳೆಯಂಗಡಿ, ಸುರತ್ಕಲ್, ಪಣಂಬೂರು, ಉರ್ವಾ ಸ್ಟೋರ್, ಲೇಡಿಹಿಲ್, ಮಂಗಳೂರು ರಥಬೀದಿ ಮಾರ್ಗವಾಗಿ ಬಂದು ಶ್ರೀ ಕ್ಷೇತ್ರಕ್ಕೆ ಸಂಜೆ ಪ್ರವೇಶಿಸಿತು. ಶ್ರೀಮತ್ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಜಿಯವರ ದಿವ್ಯ ಉಪಸ್ಥಿತಿಯಲ್ಲಿ ಮಂಗಳೂರಿನ ಮಂಗಳಾ ಕ್ರೀಡಾಂಗಣದಿಂದ ಭವ್ಯ ಮೆರವಣಿಗೆ ಮೂಲಕ ಪೂರ್ಣ ಕುಂಭದ ಸ್ವಾಗತದೊಂದಿಗೆ ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವ ನಾಗರಾಜ್ ಶೆಟ್ಟಿ, ಮಂಗಳೂರು ನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ, ಕ್ಷೇತ್ರದ ಆಡಳಿತ ಮೊಕ್ತೇಸರ್ ಕೇಶವ ಆಚಾರ್, 2ನೇ ಮೊಕ್ತೇಸರ್ ಸುಂದರ ಆಚಾರ್ಯ ಬೆಳುವಾಯಿ, 3ನೇ ಮೊಕ್ತೇಸರ್ ಎ. ಲೋಕೇಶ್ ಆಚಾರ್ಯ ಬಿಜೈ, ಆಡಳಿತ ಮಂಡಳಿಯ ಸದಸ್ಯರು, ಜೀರ್ಣೋದ್ದಾರ ಸಮಿತಿಯ ಸದಸ್ಯರು, ಜೀರ್ಣೋದ್ದಾರ ಸಮಿತಿಯ ಕಾರ್ಯಧ್ಯಕ್ಷ ಕೈಂತಿಲ ಸದಾಶಿವ ಆಚಾರ್ಯ, ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಆಚಾರ್, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಮನಿಯಾಲ್ ದಾಮೋದರ್ ಆಚಾರ್ಯ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಟಿ.ದಿನೇಶ್ ಶಕ್ತಿನಗರ, ಕಾರ್ಯಾಧ್ಯಕ್ಷರಾದ ನಾಗರಾಜ್ ಆಚಾರ್ಯ ಮಂಗಳಾದೇವಿ, ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷ ಹರೀಶ್ ಆಚಾರ್, ಶ್ರೀ ಕಾಳಿಕಾಂಬಾ ಸೇವಾ ಸಮಿತಿ, ವಿಶ್ವಬ್ರಾಹ್ಮಣ ಮಹಿಳಾ ಸಮಿತಿ, ವಿಶ್ವಕರ್ಮ ಯುವ ವೇದಿಕೆ, ವಿಶ್ವಕರ್ಮ ಯುವ ಮಿಲನ, ದ. ಕ. ಜಿಲ್ಲಾ ಚಿನ್ನದ ಕೆಲಸಗಾರರ ಸಂಘ, ವಿವಿಧ ಸಂಘ ಗಳ ಸದಸ್ಯರು ಕ್ಷೇತ್ರಕ್ಕೆ ಒಳಪಟ್ಟಿರುವ ಎಂಟು ಪೇಟೆ ಹತ್ತು ಸಮಸ್ತರು, ಸಮಾಜ ಬಾಂಧವರು ಉಪಸ್ಥಿತರಿದ್ದರು.