Recent Posts

Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಕ್ಯಾಟರಿಂಗ್ ಸಾಗಾಟದ ವಾಹನ ಮರಕ್ಕೆ ಡಿಕ್ಕಿ ; ಉಪ್ಪಿನಂಗಡಿಯ ಇಬ್ಬರು ಯುವಕರು ದಾರುಣ ಸಾವು – ಕಹಳೆ ನ್ಯೂಸ್

ಬಂಟ್ವಾಳ: ರಾ.ಹೆ.75ರ ತುಂಬೆ ರಾಮಲಕಟ್ಟೆಯ ಬಳಿ ಕ್ಯಾಟರಿಂಗ್ ವೊಂದರ ಆಹಾರ ಸಾಗಾಟದ ಪಿಕ್ ಅಪ್ ಮರಕ್ಕೆ ಢಿಕ್ಕಿ ಹೊಡೆದು ಅದರಲ್ಲಿದ್ದ ಇಬ್ಬರು ಯುವಕರು ಮೃತಪಟ್ಟ ಘಟನೆ ನಡೆದಿದೆ.

ಘಟನೆಯಲ್ಲಿ ಉಪ್ಪಿನಂಗಡಿ ನಿವಾಸಿಗಳಾದ ಚೇತನ್(25) ಹಾಗೂ ಆಶಿತ್ (21) ಮೃತಪಟ್ಟಿದ್ದಾರೆ. ಸಿಂಚನ್ ಹಾಗೂ ಸುದೀಪ್ ಗಾಯಗೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮ ಮುಗಿಸಿ ಮಂಗಳೂರು ಕಡೆಯಿಂದ ಆಗಮಿಸುತ್ತಿದ್ದ ಪಿಕ್ ಅಪ್ ಮರಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡವರನ್ನು ತುಂಬೆ ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ, ಇಬ್ಬರು ಅದಾಗಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರೂ ಪಿಕ್ ಅಪ್ ನ ಹಿಂಬದಿಯಲ್ಲಿದ್ದರು ಎನ್ನಲಾಗಿದೆ. ಬಂಟ್ವಾಳ ಸಂಚಾರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.