Recent Posts

Monday, January 20, 2025
ಉಡುಪಿ

ಯಾರೋ ಏನೋ ಅಂದ ಮಾತ್ರಕ್ಕೆ ನಮ್ಮ ಕೆಲಸ ನಿಲ್ಲಲ್ಲ : ಹಂಸಲೇಖ ಹೇಳಿಕೆಗೆ ತಿರುಗೇಟು ನೀಡಿದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ- ಕಹಳೆ ನ್ಯೂಸ್

ಉಡುಪಿ: ಪೇಜಾವರ ಶ್ರೀ ವಾಸ್ತವ್ಯದ ಬಗ್ಗೆ ಸಂಗೀತ ನಿರ್ದೇಶಕ ಹಂಸಲೇಖ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಶ್ವಪ್ರಸನ್ನ ಶ್ರೀಗಳು, ಹಂಸಲೇಖ ಬಾಯಲ್ಲಿ ಇಂತಹ ಮಾತುಗಳು ಬರಬಾರದಿತ್ತು. ಪ್ರಚಾರಕ್ಕಾಗಿ ಸಾಕಷ್ಟು ಜನರು ಹೀಗೆ ಮಾತನಾಡುತ್ತಾರೆ. ಆದರೆ ಹಂಸಲೇಖ ಅವರಿಗೆ ಇದರಿಂದ ಪ್ರಚಾರ ಬೇಕಾಗಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನನ್ನ ಗುರುಗಳು ಎಲ್ಲರ ಹೃದಯದಲ್ಲಿ ಕೃಷ್ಣನನ್ನು ಕಂಡವರು. ಆದ್ದರಿಂದ ಅವರು ದಲಿತರ ಕೇರಿಗೂ ಹೋಗುತ್ತಿದ್ದರು. ನೆರೆ ಹಾವಳಿ, ಭೂಕಂಪ ಆದಾಗಲೂ ಭೇಟಿ ಕೊಡುತ್ತಿದ್ದರು. ಸಮಾಜದ ಎಲ್ಲರ ಉದ್ದಾರವನ್ನು ವಿಶ್ವೇಶ್ವರ ತೀರ್ಥರು ಬಯಸಿದ್ದರು. ನಮ್ಮ ಉದ್ದೇಶ ಪ್ರಾಮಾಣಿಕವಾಗಿದ್ದರೆ ಸಾಕು. ಯಾರೋ ಏನೋ ಅಂದ ಮಾತ್ರಕ್ಕೆ ನಮ್ಮ ಕೆಲಸ ನಿಲ್ಲುವುದಿಲ್ಲ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀಕೃಷ್ಣನಿಗೆ ಅಗ್ರ ಪೂಜೆ ನೀಡುವಾಗ ಶಿಶುಪಾಲ ವಿರೋಧಿಸಿದ್ದ. ಆ ಕೃಷ್ಣನೇ ಬೇಕಾದ ಪ್ರತೀಕಾರ ಮಾಡುತ್ತಾನೆ. ಶಿಶುಪಾಲನಿಗೆ ಕೃಷ್ಣನೇ ತಕ್ಕಶಾಸ್ತಿ ಮಾಡಿದ್ದ. ಯಾರ ಹೊಗಳಿಕೆಗಾಗಿ ನಾವು ಈ ಕೆಲಸ ಮಾಡಿದ್ದಲ್ಲ. ಐಕ್ಯ ಸಂದೇಶ ನೀಡುವುದಕ್ಕಾಗಿ ನಮ್ಮ ಕಾರ್ಯಕ್ರಮಗಳು ನಡೆಯುತ್ತವೆ. ನಮ್ಮ ಗುರುಗಳ ಮೇಲೆ ಅಭಿಮಾನದಿಂದ ಯಾರಾದರೂ ಧರಣಿ ಮಾಡಿದರೆ ಅದು ಪ್ರತಿಭಟನೆ ಮಾಡುವವರ ವೈಯಕ್ತಿಕ ವಿಚಾರವಾಗಿರುತ್ತದೆ. ನಾವು ಯಾವುದೇ ರೀತಿಯ ಪ್ರತಿಭಟನೆ ಮಾಡಲ್ಲ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು