Monday, January 20, 2025
ಸುದ್ದಿ

ಮಂಗಳೂರು ರೇಡಿಯೋ ಕೇಳುಗರ ಸಂಘ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ದಕ್ಷಿಣ ಕನ್ನಡ ಘಟಕದ ಜಂಟಿ ಆಶ್ರಯದಲ್ಲಿ ರಾಜ್ಯೋತ್ಸವ ಕವಿಗೋಷ್ಠಿ ಮತ್ತು ಆರೋಗ್ಯ ಉಪಾನ್ಯಾಸ ಕಾರ್ಯಕ್ರಮ- ಕಹಳೆ ನ್ಯೂಸ್

ಮಂಗಳೂರು: ಕೆನರಾ ಕಾಲೇಜು ಸಭಾಂಗಣದಲ್ಲಿ ನ.13ರಂದು ರಾಜ್ಯೋತ್ಸವ ಕವಿಗೋಷ್ಠಿ ಮತ್ತು ಆರೋಗ್ಯ ಉಪಾನ್ಯಾಸ ಸಮಾರಂಭ ನಡೆಯಿತು.
ಮಂಗಳೂರು ರೇಡಿಯೋ ಕೇಳುಗರ ಸಂಘ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ದಕ್ಷಿಣ ಕನ್ನಡ ಘಟಕವು ಜಂಟಿಯಾಗಿ ನಡೆಸಿದ ಈ ಸಮಾರಂಭದಲ್ಲಿ ಆಯುರ್ವೇದ ಮತ್ತು ಆರೋಗ್ಯ ಎಂಬ ವಿಚಾರವಾಗಿ ಡಾ ಸುರೇಶ ನೆಗಳಗುಳಿಯವರ ಉಪಾನ್ಯಾಸವು ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಗ್ಯವನ್ನು ಕಾಪಾಡುವಲ್ಲಿ ದಿನಚರಿಯ ಪಾತ್ರವನ್ನು ಸವಿವರವಾಗಿ ವಿಶ್ಲೇಷಿಸುತ್ತಾ ಜೀವ ಸಹಜವಾದ ಮಲ ಮೂತ್ರಾದಿಗಳ ಧಾರಣೆಯ ತೊಂದರೆ, ಕಾಯಾ ವಾಚಾ ಮನಸಾ ಪಾಪಕರ್ಮ ಮಾಡದೇ ಇರುವುದರ ಮಹತ್ವ ಹಾಗೂ ಯೋಗ, ಪ್ರಾಣಾಯಾಮ, ವ್ಯಾಯಾಮಗಳು ಮತ್ತು ಸಮತೂಕದ ಆಹಾರದ ಮಹತ್ವವನ್ನು ವಿವರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜನಪ್ರಿಯ ಲೆಕ್ಕ ಪತ್ರ ಪರಿಶೋಧಕರಾದ ಮಂಗಳೂರಿನ ಎಸ್.ಎಸ್. ನಾಯಕ್ ಅವರ ಘನ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಕವನವು ಮನುಷ್ಯನಿಗೆ ನಿರಾಳತೆ ಹಾಗೂ ಶಿಸ್ತುಬದ್ಧತೆಯನ್ನು ಒದಗಿಸುತ್ತದೆ ಹಾಗೂ ಇಂದಿನ ಕವಿಗೋಷ್ಠಿಯಲ್ಲಿ ಕವನ ವಾಚಿಸಿದ ಕವಿಗಳು ಅತ್ಯುತ್ತಮವಾದ ರಚನೆಗಳನ್ನು ವಾಚಿಸಿದ್ದಾರೆ ಎಂದರಲ್ಲದೆ ಹಲವಾರು ಆಶು ಚುಟುಕುಗಳನ್ನು ಹಾಗೂ ಸುಭಾಷಿತಗಳನ್ನೂ ವಾಚಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀ ಜ್ಯೋತಿಲಿರ್ಂಗ ಚಂದ್ರಾಮ ಹೊನಕಟ್ಟಿ ಯವರು ನಿರರ್ಗಳವಾಗಿ ಹಲವಾರು ವಚನ ಸಾಹಿತ್ಯ ಗಳನ್ನು ವಾಚಿಸುತ್ತಾ ರೇಡಿಯೋ ಕೇಳುಗರ ಸಂಘ ಮತ್ತು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಈ ಸಮಾರಂಭವನ್ನು ಶ್ಲಾಘಿಸಿದರು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಘಟನಾ ಕಾರ್ಯದರ್ಶಿ ಶ್ರೀ ವಾಸು ಸಮುದ್ರವಳ್ಳಿ ಯವರು ಸ್ವರಚಿತ ಕವನ ವಾಚಿಸಿದರಲ್ಲದೆ ಕೇಂದ್ರ ವೇದಿಕೆಯ ಸಹಕಾರಗಳ ಬಗ್ಗೆ ಭರವಸೆ ಕೊಡುತ್ತಾ ಈ ರೀತಿಯ ಕಾರ್ಯಕ್ರಮಗಳು ಆಗಾಗ ಜರುಗುತ್ತಾ ಇರುವುದು ಸಾಹಿತ್ಯದ ಬೆಳವಣಿಗೆಗೆ ಪೂರಕ ಎಂದರು.

ಖ್ಯಾತ ಲೆಕ್ಕ ಪರಿಶೋಧಕರೂ ರೆಡ್ ಕ್ರಾಸ್ ಸಂಸ್ಥೆಯ ಮುಖ್ಯಸ್ಥರೂ ಆಗಿರುವ ಶ್ರೀಯುತ ಶಾಂತಾರಾಮ ಶೆಟ್ಟಿಯವರು ಕಾರ್ಯಕ್ರಮಕ್ಕೆ ಶುಭ ಕೋರಿದರು.
ಕೇಂದ್ರ ಸಾಹಿತ್ಯವೇದಿಕೆಯ ದಕ್ಷಿಣ ಕನ್ನಡ ಘಟಕದ ಔಪಚಾರಿಕ ಉದ್ಘಾಟನೆಯಾದ ನಂತರ ಗುಣಾಜೆ ರಾಮಚಂದ್ರ ಭಟ್, ಸತ್ಯವತಿ ಕೊಳಚಪ್ಪು, ವಿಘ್ನೇಶ್ ಭಿಡೆ, ವಾಸು ಸಮುದ್ರವಳ್ಳಿ, ಡಾ.ವಾಣಿಶ್ರೀ ಕಾಸರಗೋಡು, ಮಂಜುಶ್ರೀ ನಲ್ಕ, ರಶ್ಮಿ ಸನಿಲ್, ಗೋಪಾಲಕೃಷ್ಣ ಶಾಸ್ತ್ರಿ, ಸೌಮ್ಯಾ ಗೋಪಾಲ್, ಶಾಂತಾ ಪುತ್ತೂರು, ನವೀನ್ ಕುಲಾಲ್ ಚಿಪ್ಪಾರು, ಜಯಾನಂದ ಪೆರಾಜೆ, ರೇಮಂಡ್ ಡಿ ಕೂನ, ಡಾ.ಸುರೇಶ ನೆಗಳಗುಳಿ, ಪರಿಮಳ ಮಹೇಶ, ಮನ್ಸೂರ್ ಮುಲ್ಕಿ, ಆಕೃತಿ ಎಸ್ ಭಟ್, ಚಂದನಾ ಕಾರ್ತಟ್ಟು, ಚಿತ್ರಶ್ರೀ, ನಾರಾಯಣ ಕುಂಬ್ರ, ವೆಂಕಟೇಶ ಗಟ್ಟಿ, ರೇಖಾ ಸುದೇಶ್ , ನಿರೂಪಕಿ ಯಶಸ್ವಿನಿ ಹಾಗೂ ವೇದಿಕೆಯ ಸಂಚಾಲಕ ರಾಮಕೃಷ್ಣ ಶಿರೂರು ಮುಂತಾದವರು ಕವನ ವಾಚನ ಮಾಡಿದರು.

ಕಾರ್ಯಕ್ರಮದಲ್ಲಿ ರೇಡಿಯೋ ಕೇಳುಗರ ಸಂಘದ ಅಧ್ಯಕ್ಷ ರಾಮ ರಾವ್ ಯು, ಕಾರ್ಯದರ್ಶಿ ಶ್ರೀಮತಿ ಸಾವಿತ್ರಿ ರಾಮ ರಾವ್, ಮತ್ತು ಕಾರ್ಯದರ್ಶಿ ಚಂದನಾ ಕಾರ್ತಟ್ಟು ಮತ್ತು ನಿರೂಪಕಿ ಯಶಸ್ವಿನಿಯವರು ಉಪಸ್ಥಿತರಿದ್ದರು.

ಇದೇ ಸಂದರ್ಭ ಕೊಡುಗೈ ದಾನಿ ಹಾಗೂ ಸಮಾಜ ಸೇವಕರೂ ಆಗಿ ಬಹಳ ಖ್ಯಾತರಾದ ಶ್ರೀ ಎಸ್ ಎಸ್ ನಾಯಕರನ್ನು ಅಭಿನಂದಿಸಲಾಯಿತು.
ಶ್ರೀಮತಿ ಸಾವಿತ್ರಿ ರಾಮ ರಾವ್ ನಾಡ ಗೀತೆಯನ್ನಾಡಿದರು. ರಾಮ ರಾವ್ ಧನ್ಯವಾದ ಸಮರ್ಪಣೆ ಮಾಡಿದರು.