ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟು ಬ್ರಹ್ಮಕಲಶ ಪ್ರಯುಕ್ತ ಶ್ರಮಿಕ, ಮಹಿಳಾ , ಮತ್ತು ಸ್ವಯಂಸೇವಕ ಸಂಘಸ0ಸ್ಥೆಗಳ ಸಮಾವೇಶ – ಕಹಳೆ ನ್ಯೂಸ್
ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶ ಮತ್ತು ವರ್ಷಾವಧಿ ಉತ್ಸವ ಫೆಬ್ರವರಿ ೧೫ರಿಂದ ಫೆಬ್ರವರಿ ೨೪ರ ವರೆಗೆ ಅದ್ದೂರಿಯಾಗಿ ನಡೆಯಲಿದ್ದು, ಬ್ರಹ್ಮಕಲಶ ಪೂರ್ವಭಾವಿ ಕಾರ್ಯಕ್ರಮಗಳ ಅವಲೋಕನ ಸಭೆಯು ದೇವಂದಬೆಟ್ಟು ದೇವಸ್ಥಾನದ ರಾಜಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ವಿವಿಧ ಸಮಾವೇಶಗಳ ಆಯೋಜನೆ ಬಗ್ಗೆ ಬ್ರಹ್ಮಕಲಶೋತ್ಸವ ಸಮಿತಿ ಮತ್ತು ವ್ಯವಸ್ಥಾಪನಾ ಸಮಿತಿ ಮಾಹಿತಿ ಮತ್ತು ವಿವರಗಳನ್ನು ನೀಡಲಾಯಿತು.
ನ.೨೧ರಂದು ಬೆಳಿಗ್ಗೆ ೮ ಗಂಟೆಗೆ ವಿವಿಧ ಜೀರ್ಣೋದ್ಧಾರ ಕಾರ್ಯಗಳಿಗೆ ಗುದ್ದಲಿಪೂಜೆ ಹಾಗೂ ಬಳಿಕ ಜೀರ್ಣೋದ್ಧಾರ ಕಾರ್ಯದಲ್ಲಿ ಭಾಗವಹಿಸಲಿರುವ ಕರಸೇವಕರು, ಕಾರ್ಮಿಕರಿಗಾಗಿ ಶ್ರಮಿಕ ಸಮಾವೇಶ ನಡೆಯಲಿದೆ.
ಡಿ.೧೨ರ ಬೆಳಿಗ್ಗೆ ೧೦ ಗಂಟೆಗೆ ದೇವಸ್ಥಾನದ ವಠಾರದಲ್ಲಿ ಮಹಿಳೆಯರಿಗಾಗಿ ಮಾತೃ ಸಮಾವೇಶ ನಡೆಯಲಿದೆ. ಮಧ್ಯಾಹ್ನ ಭೋಜನದ ವ್ಯವಸ್ಥೆ ಇರುತ್ತದೆ. ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಕಾರ್ಯಕ್ರಮ ಯಶಸ್ವಿಗೊಳಿಸುವಲ್ಲಿ ಮಹಿಳೆಯರ ಪಾತ್ರ ಮತ್ತು ವಿವಿಧ ಬಗೆಯ ಮಾರ್ಗದರ್ಶನವನ್ನು ನೀಡಲಾಗುವುದು.
ಡಿ. ೩೦ರಿಂದ ಫೆಬ್ರವರಿ ೧೫ರ ವರೆಗೆ ೪೮ ದಿನಗಳ ಕಾಲ ೪೮ ವಿವಿಧ ಭಜನಾ ತಂಡಗಳಿAದ ಪ್ರತಿ ದಿನ ಸಂಜೆ ೬ರಿಂದ ೮ರ ವರೆಗೆ ಸಂಧ್ಯಾ ಭಜನಾ ಸಂಕೀರ್ತನೆ ಸೇವೆಯಲ್ಲಿ ಭಾಗವಹಿಸಲು ಇಚ್ಛಿಸುವ ಭಜನಾ ತಂಡಗಳಿಗೆ ನೋಂದಾವಣೆಗೆ ಅವಕಾಶ ಕಲ್ಪಿಸಲಾಗುವುದು.
ಜ. ೨೩ರಂದು ಸ್ವಯಂಸೇವಕರು ಮತ್ತು ಸಂಘಸAಸ್ಥೆಗಳ ಸಮಾವೇಶ ನಡೆಯಲಿದೆ.
ದೇವಸ್ಥಾನದಲ್ಲಿ ಗೋಶಾಲೆಯನ್ನು ನಿರ್ಮಿಸಿ ದೇವಸ್ಥಾನದ ವತಿಯಿಂದಲೇ ನಿರ್ವಹಿಸುವ ಕೆಲಸ ಮಾಡಲಾಗುವುದು.
ಬ್ರಹ್ಮಕಲಶೋತ್ಸವ ಪ್ರಯುಕ್ತ ಫೆಬ್ರವರಿ ೧೫ಕ್ಕೆ ಮಧ್ಯಾಹ್ನ ೨ ಗಂಟೆಗೆ ಬಿ.ಸಿ.ರೋಡಿನಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ದೇವಂದಬೆಟ್ಟುವಿಗೆ ಆಗಮಿಸಲಿದೆ ಎಂದು ಸಮಿತಿ ಸಭೆಯಲ್ಲಿ ತಿಳಿಸಲಾಯಿತು.
ಸಭೆಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಉಪಾಧ್ಯಾಯ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಮುಂಡಾಜೆ, ಅಧ್ಯಕ್ಷ ಸದಾನಂದ ಶೆಟ್ಟಿ ರಂಗೋಲಿ, ಸಂಚಾಲಕ ತೇವು ತಾರನಾಥ ಕೊಟ್ಟಾರಿ, ಪ್ರಧಾನ ಕಾರ್ಯದರ್ಶಿ ಗಣೇಶ್ ಸುವರ್ಣ ತುಂಬೆ, ಕೋಶಾಧಿಕಾರಿ ಕವಿರಾಜ್ ಚಂದ್ರಿಗೆ, ಪ್ರಮುಖರಾದ ಜ್ಯೋತೀಂದ್ರ ಶೆಟ್ಟಿ ಮುಂಡಾಜೆ, ಭುವನೇಶ್ ಪಚ್ಚಿನಡ್ಕ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದಾಮೋದರ ನೆತ್ತರಕೆರೆ, ಸತೀಶ್ ಶೆಟ್ಟಿ ಮೊಡಂಕಾಪು, ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಅಮಿತಾ ವಿಶ್ವನಾಥ್ ದಾಸರಕೋಡಿ, ಉಮಾ ಲಿಂಗಪ್ಪ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು