Recent Posts

Monday, January 20, 2025
ಕ್ರೈಮ್ದಕ್ಷಿಣ ಕನ್ನಡರಾಜ್ಯಸುದ್ದಿಸುಳ್ಯ

ಲವ್ ಅಲ್ಲ ಜಿಹಾದ್ | ಕೌಶಲ್ ಎಂದು ನಂಬಿಸಿ ವಂಚಿಸಿದ ಜಿಹಾದಿ ತಸ್ಲೀಮ್ ; ಬಲವಂತವಾಗಿ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿ, ಅಶ್ಲೀಲ ಪೋಟೊ ಹಿಡಿದುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ ಕಾಮುಕ ಪೋಲೀಸ್ ವಶಕ್ಕೆ – ಕಹಳೆ ನ್ಯೂಸ್

ಸುಳ್ಯ: ಅನ್ಯಕೋಮಿನ ಯುವಕನೋರ್ವ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಹಿಂದೂ ಯುವತಿಯ ಜೊತೆ ತಾನು ಹಿಂದೂ ಯುವಕನೆಂದು ಸುಳ್ಳು ಹೇಳಿ ಯುವತಿಯನ್ನು ನಂಬಿಸಿ ಆಕೆಯನ್ನು ಬಲಾತ್ಕರವಾಗಿ ಸುತ್ತಾಡಿಸಿ ಅನುಚಿತವಾಗಿ ವರ್ತಿಸಿರುವ ಬಗ್ಗೆ ವಂಚನೆಗೊಳಗಾದ ಯುವತಿ ಠಾಣೆಗೆ ದೂರು ನೀಡಿದ ಘಟನೆ ಸುಳ್ಯದಲ್ಲಿ ನಡೆದಿದೆ.

ಮೂಲತಃ ಮಡಿಕೇರಿಯವನಾದ ಆರೋಪಿ ಯುವಕ, ಕಳೆದ ೨ ತಿಂಗಳ ಹಿಂದೆ ಹಿಂದೂ ಯುವತಿಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದು, ಕೌಶಲ್ ‌ಎಂಬ‌ ಹೆಸರಿನಿಂದ ಆಕೆಯ ಜೊತೆ ಪರಿಚಯ ಬೆಳೆಸಿಕೊಂಡಿದ್ದನು.

ಜಾಹೀರಾತು
ಜಾಹೀರಾತು
ಜಾಹೀರಾತು

ನ.೧೧ ರಂದು ಆತ ಸುಳ್ಯಕ್ಕೆ ಬರುವಂತೆ ಒತ್ತಾಯಿಸಿದ್ದು, ಆತ ಹಿಂದೂ ಯುವಕನೆಂದು ನಂಬಿ ಯುವತಿ ‌ಆತನ ಒತ್ತಾಯಕ್ಕೆ ಮಣಿದು‌ ಸುಳ್ಯಕ್ಕೆ ಬಂದಿದ್ದು, ಅಲ್ಲಿಂದ‌ ಬೈಕಿನಲ್ಲಿ‌ ಕುಳಿತುಕೊಳ್ಳುವಂತೆ ಹೇಳಿ ಮಡಿಕೇರಿ ಕಡೆಗೆ ಬೈಕನ್ನು ಚಲಾಯಿಸಿದ್ದು, ನಾನು ಮಡಿಕೇರಿಗೆ ಬರುವುದಿಲ್ಲ ಎಂದು ಹೇಳಿದರೂ ಆತನು ಬೈಕನ್ನು ರಭಸದಿಂದ ಮಡಿಕೇರಿಗೆ ಚಲಾಯಿಸಿದ್ದು, ಅಲ್ಲಿ ಪಾರ್ಕಿಗೆ ಕರೆದುಕೊಂಡು ಹೋಗಿ ಅನುಚಿತವಾಗಿ ವರ್ತಿಸಿರುವುದಲ್ಲದೆ ನನ್ನ ಕೈಯನ್ನೆಳೆದು ಮಾನಭಂಗಕ್ಕೆ ಯತ್ನಿಸಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆತನನ್ನು ವಿರೋಧಿಸಿದಾಗ ನಿನ್ನನ್ನು‌ ಕೊಲ್ಲುತ್ತೇನೆ ಎಂದು‌ ಬೆದರಿಸಿ ನಾನು ಹಿಂದೂ‌‌ ಅಲ್ಲ ಮುಸ್ಲಿಂ ನನ್ನ ‌ಹೆಸರು ತಸ್ಲೀಮ್ ಎಂದು ಹೇಳಿದ್ದು, ನನ್ನನ್ನು ಬಿಟ್ಟು ಹೋದರೆ ನಮ್ಮಿಬ್ಬರ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುತ್ತೇನೆ ಎಂದು ಹೆದರಿಸಿದ್ದಾನೆ.

ನಾನು ಯಾರಲ್ಲಿಯೂ ಹೇಳುವುದಿಲ್ಲ. ನನ್ನನ್ನು ಮತ್ತೆ ನನ್ನ ಊರಿಗೆ ಬಿಡು ಎಂದು ಕೇಳಿಕೊಂಡಾಗ ಆತ ಒಪ್ಪಿ ಮತ್ತೆ ನನ್ನನ್ನು ಸುಳ್ಯಕ್ಕೆ ಕರೆ ತಂದು ಬಿಟ್ಟಿದ್ದಾನೆ ಎಂದು ವಂಚನೆಗೊಳಗಾದ ಯುವತಿ ‌ದೂರಿನಲ್ಲಿ ತಿಳಿಸಿದ್ದಾಳೆ.